ಆರ್ಸಿಬಿ ಅಭಿಮಾನಿಗಳ ಕ್ಲಬ್ ಸೇರಿದ 6 ತಿಂಗಳ ಮಗು ತ್ರಿಷಾನ್ ಗೌಡ
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ವಿಡಿಯೋ
ತಮ್ಮ ಮಗನಿಗೆ ಆರ್ಸಿಬಿ ಫ್ಯಾನ್ಸ್ ಕ್ಲಬ್ಗೆ ಸೇರ್ಪಡೆ ಮಾಡಿದ ದಂಪತಿ ಇವರು
ಆರ್ಸಿಬಿಗೆ ಅಂತಿಂಥ ಅಭಿಮಾನಿಗಳಿಲ್ಲ. ಕುಳಿತುಕೊಂಡರು ನಿಂತುಕೊಂಡರು ಕೇವಲ ಆರ್ಸಿಬಿಗೆ ಮಾತ್ರ ಸಪೋರ್ಟ್ ಮಾಡುತ್ತಾರೆ. ಅಭಿಮಾನಿಗಳು ಯಾವತ್ತಿಗೂ, ಎಂದಿಗೂ ಆರ್ಸಿಬಿ ತಂಡವನ್ನು ಬಿಟ್ಟುಕೊಡುವುದಿಲ್ಲ. ಸಾಮಾನ್ಯವಾಗಿ ಆರ್ಸಿಬಿ ಅಭಿಮಾನಿಗಳು, ಕೈ ಹಾಗೂ ದೇಹದ ಮೇಲೆ ಆರ್ಸಿಬಿ ಟ್ಯಾಟೂ ಹಾಕಿಸಿಕೊಳ್ಳುವುದನ್ನು ನೋಡಿರುತ್ತೇವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ದಂಪತಿಯನ್ನು ನೋಡಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇಬೇಕು.
ಇದನ್ನೂ ಓದಿ: ಜೈಲಿನಿಂದ ಹೊರ ಬಂದ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ಸೋನು ಗೌಡ; ಏನದು?
ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರೋ ವಿಡಿಯೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿಯ ಮೇಲೆ ತಮ್ಮ ಮುದ್ದಾದ ಮುಗುವಿನ ಹೆಸರನ್ನು ಹಾಕುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ ಈ ದಂಪತಿ. ಸಿಂಧು ಕೂರ್ಗ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಸಿಂಧು ಕೂರ್ಗ್ ದಂಪತಿ ಪಕ್ಕಾ ಆರ್ಸಿಬಿ ಅಭಿಮಾನಿಗಳಾಗಿದ್ದು, ತಮ್ಮ ಮುದ್ದಾದ ಮಗನ ನಾಮಕರಣ ಸಮಾರಂಭವನ್ನು ನೂತನವಾಗಿ ಹಮ್ಮಿಕೊಂಡಿದ್ದಾರೆ.
View this post on Instagram
ಸಿಂಧು ಕೂರ್ಗ್ ಅವರು ತಮ್ಮ ಮಗುವಿನ ನಾಮಕರಣದ ವೇಳೆ ಆರ್ಸಿಬಿ ಜರ್ಸಿಯಲ್ಲಿ ಮಗನ ಹೆಸರು ಹಾಕಿ, 6 ಅಂತಾ ನಂಬರ್ ನೀಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಮೂಲಕ 6 ತಿಂಗಳ ತ್ರಿಷಾನ್ ಗೌಡ ಆರ್ಸಿಬಿ ಅಭಿಮಾನಿಗಳ ಕ್ಲಬ್ ಸೇರಿದೆ. ಸಿಂಧು ದಂಪತಿಯೂ ತಮ್ಮ ಮಗನಿಗೆ ಆರ್ಸಿಬಿ ಫ್ಯಾನ್ಸ್ ಕ್ಲಬ್ಗೆ ಸೇರ್ಪಡೆ ಮಾಡಿದ್ದಾರೆ. ಇನ್ನು, 6 ತಿಂಗಳ ಪುಟ್ಟ ಕಂದ ಆರ್ಸಿಬಿ ಕ್ಲಬ್ಗೆ ಸೇರ್ಪಡೆಯಾಗಿರೋ ವಿಚಾರ ತಿಳಿದ ಅಭಿಮಾನಿಗಳ ಅಭಿಮಾನ ಡಬಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ