ಪ್ರಸಕ್ತ ಸೀಸನ್ನಲ್ಲಿ ಈ ಆಟಗಾರ ಅಟ್ಟರ್ ಫ್ಲಾಪ್ಶೋ
7.75 ಕೋಟಿ ವೀರನ ಅಸಲಿ ಖದರ್ ಮಾಯ ಆಗಿದ್ದೇಕೆ
ಐದು ಪಂದ್ಯ.. ಎರಡಂಕಿ ದಾಟದೇ ಭಾರಿ ನಿರಾಸೆ..!
ದೇಶಿ ಕ್ರಿಕೆಟ್ನ ರನ್ ಮಷೀನ್. ಮೊದಲ ನಾಲ್ಕು ಐಪಿಎಲ್ ಸೀಸನ್ನಲ್ಲಿ ವಂಡರ್ ಅನ್ನೆ ಸೃಷ್ಟಿಸಿದ್ರು. ಕೇಳಿದವರ ಬಾಯಲ್ಲೆಲ್ಲ ಈತನದ್ದೆ ಗುಣಗಾನ. ಆದ್ರೀಗ ಇದೇ ಕನ್ನಡಿಗ ಫ್ಲಾಪ್ ಶೋ ನೀಡಿ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಅಷ್ಟಕ್ಕೂ ಯಾರಪ್ಪಾ ಆ ಕನ್ನಡಿಗ ಅಂತೀರಾ?
0,9,6,7,3 ಇದು ಯಾವುದೋ ಫೋನ್ ನಂಬರ್ ಅಂತ ಕನ್ಫ್ಯೂಸ್ ಆಗ್ಬೇಡಿ. ಯಾಕಂದ್ರೆ ಇದು ಫೋನ್ ನಂಬರ್ ಅಲ್ಲವೇ ಅಲ್ಲ. ಕನ್ನಡಿಗ ದೇವದತ್ ಪಡಿಕ್ಕಲ್ ಪ್ರಸಕ್ತ ಐಪಿಎಲ್ನಲ್ಲಿ ಗಳಿಸಿದ ಸಿಂಗಲ್ ಡಿಜಿಟ್ ರನ್ ಕಹಾನಿ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಸಾಲಿಡ್ ಟಚ್ನಲ್ಲಿದ್ದ ಪಡಿಕ್ಕಲ್ ಭಾರತ ತಂಡ ಟೆಸ್ಟ್ ತಂಡಕ್ಕೆ ಸೆಲೆಕ್ಟ್ ಆಗಿದ್ರು. ಆದ್ರೀಗ ಇದೇ ಡೊಮೆಸ್ಟಿಕ್ ರನ್ ಮಷೀನ್ ಸೀಸನ್ 17ನೇ ಐಪಿಎಲ್ನಲ್ಲಿ ಅಟ್ಟರ್ ಫ್ಲಾಪ್ ಶೋ ನೀಡ್ತಿದ್ದಾರೆ. ಆ ಮೂಲಕ ಕನ್ನಡಿಗರು ತಮ್ಮ ಮೇಲಿದ್ದ ನಿರೀಕ್ಷೆಯನ್ನ ಹುಸಿಯಾಗಿಸಿದ್ದಾರೆ.
ಇದನ್ನೂ ಓದಿ: ಉಚಿತ, ಉಚಿತ, ಉಚಿತ..! ಮೋದಿ ಪ್ರಣಾಳಿಕೆಯಲ್ಲಿ ಏನೆಲ್ಲ ಉಚಿತ ಘೋಷಣೆ..?
7.75 ಕೋಟಿ ವೀರ ಪಡಿಕ್ಕಲ್ ಅಸಲಿ ಖದರ್ ಮಾಯ
ಕಳೆದ ಸೀಸನ್ನಲ್ಲಿ 261 ರನ್ ಗಳಿಸಿದ್ದ ಪಡಿಕ್ಕಲ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಫೇಲಾಗಿದ್ರು. ಇದರಿಂದ ರಾಜಸ್ಥಾನ ಮ್ಯಾನೇಜ್ಮೆಂಟ್ನ ಕಣ್ಣು ಕೆಂಪಾಗಿಸಿದ್ರು. ಪಡಿಕ್ಕಲ್ ಆಟಕ್ಕೆ ತೃಪ್ತಿಯಾಗದ ರಾಜಸ್ಥಾನ, ವೇಗಿ ಆವೇಶ್ ಖಾನ್ರನ್ನ ಟ್ರೇಡ್ ಮಾಡಿ ಪಡಿಕ್ಕಲ್ರನ್ನ ಲಕ್ನೋ ತಂಡಕ್ಕೆ ಬಿಟ್ಟು ಕೊಡ್ತು. ಆವೇಶ್ ಖಾನ್ ಬರೋಬ್ಬರಿ 10 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲಾದ್ರೆ, ಕನ್ನಡಿಗ ಪಡಿಕ್ಕಲ್ 7.75 ಕೋಟಿಗೆ ಲಕ್ನೋ ಸೇರಿಕೊಂಡ್ರು.
ಇದನ್ನೂ ಓದಿ:ತಂಪೆರೆದ ಮಳೆರಾಯ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಭಾರೀ ಮಳೆ..?
ದೊಡ್ಡ ಮೊತ್ತಕ್ಕೆ ಸೇಲಾದ ಪಡಿಕ್ಕಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿತ್ತು. ಭರವಸೆಯನ್ನು ಲೆಫ್ಟಿಬ್ಯಾಟರ್ ಆರಂಭಿಕ ಪಂದ್ಯಗಳಲ್ಲಿ ಹುಸಿಯಾಗಿಸಿದ್ದಾರೆ. ರನ್ ಜಾತ್ರೆ ನಡೆಸಿ ಲಕ್ನೋ ಪಾಲಿಗೆ ಹೀರೋ ಆಗ್ತಾರೆ ಅಂದುಕೊಂಡ್ರೆ, ಒಂದೊಂದು ರನ್ ಗಳಿಸಲು ಪಡಬಾರದ ಕಷ್ಟಪಡ್ತಿದ್ದಾರೆ. ಇಲ್ಲಿಯ ತನಕ ಆಡಿದ ಐದು ಪಂದ್ಯಗಳಲ್ಲಿ ಪಡಿಕ್ಕಲ್ ಡಬಲ್ ಡಿಜಿಟ್ ನಂಬರ್ ದಾಟಿಯೇ ಇಲ್ಲ. ಕಂಪ್ಲೀಟ್ ಅಟ್ಟರ್ ಫ್ಲಾಪ್ ಶೋ ನೀಡಿ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪ್ರಸಕ್ತ ಐಪಿಎಲ್ನಲ್ಲಿ ಪಡಿಕ್ಕಲ್..!
17ನೇ ಐಪಿಎಲ್ ಸೀಸನ್ನಲ್ಲಿ ದೇವದತ್ ಪಡಿಕ್ಕಲ್ ಲಕ್ನೋ ಸೂಪರ್ ಜೈಂಟ್ಸ್ ಪರ ಐದು ಪಂದ್ಯಗಳನ್ನ ಆಡಿದ್ದಾರೆ. ಆ ಪೈಕಿ ಅತಿಕೆಟ್ಟ 5 ರ ಎವರೇಜ್ನಲ್ಲಿ ಬರೀ 25 ರನ್ ಗಳಿಸಿದ್ದಾರೆ. ಇವರ ಬ್ಯಾಟ್ನಿಂದ ಮೂಡಿಬಂದ ಬೆಸ್ಟ್ ಸ್ಕೋರ್ 9 ಆಗಿದೆ.
ಇನ್ನಾದ್ರು ಬದಲಾಗುತ್ತಾ ಪಡಿಕ್ಕಲ್ ಆಟದ ವೈಖರಿ..?
ದೇವದತ್ ಪಡಿಕ್ಕಲ್ ಕಳಪೆ ಆಟವಾಡ್ತಿದ್ರೂ ಬ್ಯಾಕ್ ಟು ಬ್ಯಾಕ್ ಅವಕಾಶ ನೀಡ್ತಿದೆ. ಅದಕ್ಕೆ ಕಾರಣ ಕ್ಯಾಪ್ಟನ್ ರಾಹುಲ್. ಹೌದು, ಪಡಿಕ್ಕಲ್ ಕೂಡ ಕರ್ನಾಟಕದವರೇ ಆಗಿದ್ದರಿಂದ ರಾಹುಲ್, ಪಡಿಕ್ಕಲ್ಗೆ ಬ್ಯಾಕ್ಅಪ್ ಮಾಡ್ತಿದ್ದಾರೆ. ಆದ್ರೆ ನಾಯಕನ ನಂಬಿಕೆ ಉಳಿಸಿಕೊಳ್ಳುವಲ್ಲಿ ಪಡಿಕ್ಕಲ್ ಮೊದಲೈದು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: 7 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಯುಟ್ಯೂಬ್ ಸ್ಟಾರ್ ಜೋಡಿ
ಮೊದಲಾರ್ಧದ ಪಂದ್ಯಗಳು ಮುಕ್ತಾಯದ ಹಂತ ತಲುಪಿವೆ. ದ್ವಿತೀಯ ಆರಂಭಕ್ಕೂ ಮುನ್ನ ಪಡಿಕ್ಕಲ್ ತಪ್ಪನ್ನ ತಿದ್ದಿಕೊಂಡ್ರೆ ರನ್ ಭರಾಟೆ ನಡೆಸಲು ಉತ್ತಮ ಅವಕಾಶವಿದೆ. ಆ ಕೆಲಸವನ್ನ ಕನ್ನಡಿಗ ಪಡಿಕ್ಕಲ್ ಮಾಡ್ತಾರಾ ? ಇಲ್ಲ ಹಳೇ ಚಾಳಿ ಮುಂದುವರಿಸಿ ಬೆಂಚ್ಗೆ ಸೀಮಿತವಾಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್