ಬೆಂಗಳೂರು vs ಹೈದ್ರಾಬಾದ್ ಐಪಿಎಲ್ ಕದನ
ಹೋಮ್ಗ್ರೌಂಡ್ನಲ್ಲಿ RCBಗೆ ರಾಯಲ್ ಚಾಲೆಂಜ್
ಆತ್ಮವಿಶ್ವಾಸದ ಅಲೆಯಲ್ಲಿ ಸನ್ರೈಸರ್ಸ್ ಹೈದ್ರಾಬಾದ್
ಐಪಿಎಲ್ ಟೂರ್ನಿಯ ಮೆಗಾ ಫೈಟ್ನಲ್ಲಿಂದು ಆರ್ಸಿಬಿಯ ಹೋಮ್ಗ್ರೌಂಡ್ನಲ್ಲೇ ಆರ್ಸಿಬಿಗೆ ರಾಯಲ್ ಚಾಲೆಂಜ್ ಎದುರಾಗಿದೆ. ಗೆಲುವಿನ ಆತ್ಮವಿಶ್ವಾಸದ ಅಲೆಯಲ್ಲಿರೋ ಸನ್ರೈಸರ್ಸ್ ಹೈದ್ರಾಬಾದ್ ಡುಪ್ಲೆಸಿ ಪಡೆಯ ವಿರುದ್ಧ ಘರ್ಜಿಸಲು ಸಜ್ಜಾಗಿದೆ. ಆರ್ಸಿಬಿ ಪಾಳೆಯದಲ್ಲಿ ಆತಂಕವೇ ಮನೆ ಮಾಡಿದೆ. ಆರ್ಸಿಬಿಗೆ ಆತಂಕ ಯಾಕೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಮತ್ತೊಂದು ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಸವಾಲನ್ನ ಎದುರಿಸಲಿದೆ. ಕೊನೆಯ 2 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರೋ ಹೈದ್ರಾಬಾದ್, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಸತತ 4 ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ಕಥೆ ಅಯೋಮಯವಾಗಿದೆ.
SRH ಬ್ಯಾಟಿಂಗ್ VS RCB ಬೌಲಿಂಗ್.. ಕದನ ಕುತೂಹಲ..!
ಇಂದಿನ ಪಂದ್ಯ ಕುತೂಹಲ ಹೆಚ್ಚಿಸಿರೋ ಅಂಶವೇ SRH ಬ್ಯಾಟಿಂಗ್ VS RCB ಬೌಲಿಂಗ್. ಆರ್ಸಿಬಿ ಬೌಲಿಂಗ್ ವಿಭಾಗ ಸದ್ಯ ಹೀನಾಯ ಪರ್ಫಾಮೆನ್ಸ್ ನೀಡ್ತಿದೆ. ಕಳೆದ ಪಂದ್ಯದಲ್ಲಿ 197 ರನ್ಗಳ ಸವಾಲಿನ ಟಾರ್ಗೆಟ್ ಅನ್ನ ಕೇವಲ 15.3 ಓವರ್ಗಳಲ್ಲೇ ಬಿಟ್ಟು ಕೊಟ್ಟಿದೆ. ವಿಕೆಟ್ ಕಬಳಿಸಲು ಪರದಾಡ್ತಿರೋ ಬೌಲರ್ಸ್, ರನ್ ಲೀಕ್ ಮಾಡ್ತಿದ್ದಾರೆ. ಆದ್ರೆ, ಹೈದ್ರಾಬಾದ್ನ ಬ್ಯಾಟರ್ಸ್ ಡ್ರೀಮ್ ಫಾರ್ಮ್ನಲ್ಲಿದ್ದಾರೆ. ಚಿನ್ನಸ್ವಾಮಿ ಮೈದಾನ ಚಿಕ್ಕ ಗ್ರೌಂಡ್ ಕೂಡ ಆಗಿರೋದ್ರಿಂದ ಇಂದೂ ರನ್ಮಳೆ ಸುರಿಸೋ ವಿಶ್ವಾಸದಲ್ಲಿದ್ದಾರೆ.
ಟ್ರಾವಿಸ್ ಹೆಡ್ ಆರ್ಸಿಬಿ ಮೊದಲ ‘ಹೆಡ್ಡೇಕ್’..!
ಸಾಲಿಡ್ ಫಾರ್ಮ್ನಲ್ಲಿರೋ ಟ್ರಾವಿಸ್ ಹೆಡ್ ಸ್ಪೋಟಕ ಆಟದಿಂದ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸಿದ್ದಾರೆ. ಬರೋಬ್ಬರಿ 172.72ರ ಸ್ಟ್ರೈಕ್ರೇಟ್ನಲ್ಲಿ ಟ್ರಾವಿಡ್ ಹೆಡ್ ಘರ್ಜಿಸಿದ್ದಾರೆ. ಆರಂಭದಲ್ಲೇ ಹೊಡಿ-ಬಡಿ ಆಟಕ್ಕೆ ಮುಂದಾಗೋ ಹೆಡ್, ಸದ್ಯ ಆರ್ಸಿಬಿ ಟ್ಯಾಂಪ್ನಲ್ಲೂ ಹೆಡ್ಡೇಕ್ ಹೆಚ್ಚಿಸಿದ್ದಾರೆ.
ಅಭಿಷೇಕ್ ಅಬ್ಬರಕ್ಕೆ ಫುಲ್ ಸ್ಟಾಫ್ ಇಡೋದೇಗೆ?
23 ವರ್ಷದ ಅಭಿಷೇಕ್ ಶರ್ಮಾ ಹೈದ್ರಾಬಾದ್ ಪಡೆಯ ಬ್ಯಾಟಿಂಗ್ ಬಲವಾಗಿದ್ದಾರೆ. ಬೌಂಡರಿ-ಸಿಕ್ಸರ್ ಸಿಡಿಸಿ ರನ್ ಡೀಲ್ ಮಾಡ್ತಿರೋ ಅಭಿಶೇಕ್ ಬೌಲರ್ಗಳನ್ನ ಚಿಂದಿ ಉಡಾಯಿಸ್ತಿದ್ದಾರೆ. ಆಡಿದ 5 ಪಂದ್ಯಗಳಲ್ಲೇ 14 ಬೌಂಡರಿ, 16 ಸಿಕ್ಸರ್ ಚಚ್ಚಿರುವ ಅಭಿಷೇಕ್ ಶರ್ಮಾ, ಬರೋಬ್ಬರಿ 208.23ರ ಸ್ಟ್ರೇಕ್ರೇಟ್ನಲ್ಲಿ ಘರ್ಜಿಸಿದ್ದಾರೆ.
ಕ್ಲಾಸೆನ್ ಖತರ್ನಾಕ್ ಆಟಕ್ಕೆ ಬ್ರೇಕ್ ಹಾಕೋದ್ಯಾರು?
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ ಕೂಡ ಅದ್ಭುತ ಫಾರ್ಮ್ನಲ್ಲಿದ್ದಾರೆ. ಸನ್ರೈಸರ್ಸ್ ಪಡೆಯ ಮಿಡಲ್ ಆರ್ಡರ್ ಬಲವಾಗಿರುವ ಕ್ಲಾಸೆನ್, ತನ್ನ ಖತರ್ನಾಕ್ ಆಟದಿಂದ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. 62.00ರ ರನ್ಗಳಿಕೆ ಸರಾಸರಿ ಹೊಂದಿರುವ ಕ್ಲಾಸೆನ್, ಬರೋಬ್ಬರಿ 17 ಸಿಕ್ಸರ್ಗಳನ್ನ ಚಚ್ಚಿದ್ದಾರೆ. 193.75ರ ಸ್ಟ್ರೈಕ್ರೇಟ್ನಲ್ಲಿ 186 ರನ್ಗಳಿಸಿರೋ ಕ್ಲಾಸೆನ್ ಆಟಕ್ಕೆ ಬ್ರೇಕ್ ಹಾಕೋದು ಹೇಗೆ ಆನ್ನೋದು ಆರ್ಸಿಬಿ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಬೌಲರ್ಗಳ ವೈಫಲ್ಯ.. ಆರ್ಸಿಬಿಯಲ್ಲಿ ಆತಂಕ..!
ಒಂದೆಡೆ ಹೈದ್ರಾಬಾದ್ ಬ್ಯಾಟ್ಸ್ಮನ್ಗಳು ಸಾಲಿಡ್ ಫಾರ್ಮ್ನಲ್ಲಿದ್ರೆ, ಆರ್ಸಿಬಿ ಬೌಲರ್ಗಳ ತೀವ್ರ ಕಳಪೆ ಪರ್ಫಾಮೆನ್ಸ್ ನೀಡ್ತಿದ್ದಾರೆ. ವೈಶಾಖ್ ವಿಜಯ್ ಕುಮಾರ್, ಯಶ್ ದಯಾಳ್ ಹೊರತುಪಡಿಸಿದ್ರೆ, ಉಳಿದೆಲ್ಲಾ ವೇಗಿಗಳು ಉದಾರವಾಗಿ ರನ್ ದಾನ ಮಾಡಿದ್ದಾರೆ. ಬೌಲಿಂಗ್ ಲೈನ್ ಅಪ್ ಅನ್ನ ಟ್ರ್ಯಾಕ್ಗೆ ತರೋದೆ ಸದ್ಯ ಆರ್ಸಿಬಿ ಮುಂದಿರೋ ಬಿಗ್ಗೆಸ್ಟ್ ಟಾಸ್ಕ್ ಆಗಿದೆ.
17 ಸೀಸನ್ನಲ್ಲಿ ಆರ್ಸಿಬಿ ಬೌಲರ್ಸ್
17ನೇ ಸೀಸನ್ನಲ್ಲಿ 3 ಪಂದ್ಯವನ್ನಾಡಿರುವ ಅಲ್ಜಾರಿ ಜೊಸೆಫ್, 11.89ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. 6 ಪಂದ್ಯವಾಡಿರುವ ಮೊಹಮ್ಮದ್ ಸಿರಾಜ್ 10.40 ಹಾಗೂ 5 ಪಂದ್ಯವನ್ನಾಡಿರುವ ಕ್ಯಾಮರೂನ್ ಗ್ರೀನ್ 9.40, ರೀಸೀ ಟಾಪ್ಲೆ 3 ಪಂದ್ಯದಿಂದ 9.09ರ ಎಕಾನಮಿ ಹೊಂದಿದ್ದಾರೆ.
ಬೌಲಿಂಗ್ ವಿಭಾಗಕ್ಕೆ ಹೋಲಿಸಿದ್ರೆ, ಕಳೆದ ಪಂದ್ಯದಲ್ಲಿ ಆರ್ಸಿಬಿಯ ಬ್ಯಾಟಿಂಗ್ ಲೈನ್ಅಪ್ ಸ್ವಲ್ಪ ಮಟ್ಟಿಗೆ ರಿಧಮ್ ಕಂಡುಕೊಂಡಿದೆ. ಆದ್ರೆ, ಹೈದ್ರಾಬಾದ್ ಪಾಳಯದಲ್ಲಿ ಘಟಾನುಘಟಿ ಬೌಲರ್ಗಳಿದ್ದು, ಇವರ ಮುಂದೆ ಆಟ ನಡೆಯುತ್ತಾ ಎಂಬ ಕುತೂಹಲವಿದೆ. ಒಟ್ಟಿನಲ್ಲಿ, ಇಂದಿನ ಕದನ ಹೋಮ್ಗ್ರೌಂಡ್ನಲ್ಲಿ ನಡೀತಾ ಇದ್ರೂ, ಆರ್ಸಿಬಿ ತಂಡದಲ್ಲಿ ಆತಂಕವೇ ಹೆಚ್ಚಾಗಿದೆ. ಆತಂಕವನ್ನ ಮೀರಿ ಆರ್ಸಿಬಿ ಗೆಲುವಿನ ಟ್ರ್ಯಾಕ್ಗೆ ಮರಳಲಿ ಅನ್ನೋದು ಫ್ಯಾನ್ಸ್ ಪ್ರಾರ್ಥನೆಯಾಗಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್