ಐಪಿಎಲ್ ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್ ಹೇಳುವುದೇನು?
43ನೇ ವಯಸ್ಸಿನಲ್ಲೂ MS ಧೋನಿಗೆ ಹ್ಯೂಜ್ ಫ್ಯಾನ್ ಬೇಸ್ ಇದೆ
ಸ್ಕೂಲ್ ಫೀಸ್ನಿಂದ IPL ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್
ಕ್ರೇಜ್ಗೆ ಇನ್ನೊಂದು ಹೆಸರೇ ಮಹೇಂದ್ರ ಸಿಂಗ್ ಧೋನಿ. 43ನೇ ವಯಸ್ಸಿನಲ್ಲಿ ತಲಾ ಧೋನಿಗೆ ಹ್ಯೂಜ್ ಫ್ಯಾನ್ ಬೇಸ್ ಇದೆ. ಐಪಿಎಲ್ ಬಂದ್ರಂತೂ ಮುಗಿದೆ ಹೋಯ್ತು. ಫ್ಯಾನ್ಸ್ ಮಾಹಿ ಆಟ ನೋಡಲು ನೋಡಲು ಎರಡು ತಿಂಗಳ ಟಿವಿ ಮುಂದೆ ಠಿಕಾಣಿ ಹೂಡ್ತಾರೆ. ಅದ್ರಲ್ಲೂ ತಮಿಳಿನಾಡಿನ ಕ್ರಿಕೆಟ್ ಪ್ರೇಮಿಗಳಂತೂ ಧೋನಿಯನ್ನ ದೇವರಂತೆ ಕಾಣ್ತಾರೆ. ಯಾರೊಬ್ಬರಿಗೂ ಸಿಗದಷ್ಟು ಪ್ರೀತಿ ಮಹಿಗೆ ಸಿಕ್ಕಿದೆ. ನಿಜಕ್ಕೂ ಧೋನಿ ಅದೃಷ್ಟವಂತ ಬಿಡಿ.
A CSK fan buys match tickets worth INR 64,000, delays payment of daughters.
He Said : "I didn't get the tickets, so I bought them in black. It was a total of ₹64,000. I am yet to pay the school fees. But we wanted to see MS Dhoni just once." 😶🌫️
— Vipin Tiwari (@Vipintiwari952) April 12, 2024
ಮಕ್ಕಳ ಸ್ಕೂಲ್ ಫೀಸ್ ಕಟ್ಟದೇ ಮ್ಯಾಚ್ ವೀಕ್ಷಿಸಿದ ತಂದೆ
ಅತಿಯಾದ್ರೆ ಅಮೃತವೂ ವಿಷ ಅಂತಾರೆ. ಸದ್ಯ ಆ ಮಾತು ಧೋನಿಯ ಅಭಿಮಾನಿಯ ಅಭಿಮಾನದ ವಿಚಾರದಲ್ಲಿ ನಿಜವಾಗಿದೆ.
ನಮಗೆ ಟಿಕೆಟ್ ಸಿಗಲಿಲ್ಲ. ಬ್ಲ್ಯಾಕ್ನಲ್ಲಿ 64,000 ರೂಪಾಯಿಗೆ ಟಿಕೆಟ್ ಖರೀದಿಸಿದೆ. ಮಕ್ಕಳ ಸ್ಕೂಲ್ ಫೀಸ್ ಕಟ್ಟಬೇಕು. ಆದರೆ ಅದನ್ನ ಆಮೇಲೆ ಕಟ್ಟಿದರೆ ಆಯ್ತು. ಮೊದಲು ಧೋನಿಯನ್ನ ನೋಡಬೇಕು. ನನ್ನ ಮಕ್ಕಳು ಧೋನಿಯನ್ನ ನೋಡಿದ್ರು. ತುಂಬಾ ಖುಷಿ ಆಯ್ತು. ಸಿಎಸ್ಕೆ ಗೆಲುವಿನ ಮೇಲೆ ಗೆಲುವು ದಾಖಲಿಸುತ್ತಲೇ ಇರುತ್ತೆ ಎಂದು ಟಿಕೆಟ್ ಖರೀದಿ ಮಾಡಿ ಮ್ಯಾಚ್ ನೋಡಿದ ವ್ಯಕ್ತಿ ಹೇಳಿದ್ದಾರೆ.
ಯಾವ ಟೈಪ್ ಫ್ಯಾನ್ಸ್ ಇರ್ತಾರೆ ಅನ್ನೋದನ್ನ ನಿಜಕ್ಕೂ ಊಹಿಸೋದೆ ಅಸಾಧ್ಯ. ಅದಕ್ಕೆ ತಾಜಾ ಉದಾಹರಣೆ ಧೋನಿಯ ಈ ಅಭಿಮಾನಿ. ಚೆಪಾಕ್ನಲ್ಲಿ ಸಿಎಸ್ಕೆ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ವು. ಈ ಪಂದ್ಯವನ್ನ ನೋಡಲು ಧೋನಿಯನ್ನ ನೋಡಲಂತನೇ ಬರೋಬ್ಬರಿ 64 ಸಾವಿರ ರೂಪಾಯಿ ಕೊಟ್ಟು ಬ್ಲ್ಯಾಕ್ನಲ್ಲಿ ಟಿಕೆಟ್ ಖರೀಸಿದ್ದ. ಅದು ಮಕ್ಕಳಿಗಾಗಿ ಕೂಡಿಟ್ಟ ಸ್ಕೂಲ್ ಫೀಸ್ನಲ್ಲಿ. ಮಹಿಯನ್ನ ನೋಡುವ ಒಂದೇ ಕಾರಣಕ್ಕೆ ಮಕ್ಕಳ ಶಿಕ್ಷಣವನ್ನ ಲೆಕ್ಕಿಸದೇ ತಂದೆ 64,000 ರೂಪಾಯಿ ಕೊಟ್ಟು ಮ್ಯಾಚ್ ವೀಕ್ಷಿಸಿದ್ದಾರೆ.
I don't have money to pay the School Fees of my children, but spent Rs 64,000 to get black tickets to watch Dhoni, says this father. I am at a loss for words to describe this stupidity. pic.twitter.com/korSgfxcUy
— Dr Jaison Philip. M.S., MCh (@Jasonphilip8) April 11, 2024
ಮಕ್ಕಳ ಶಿಕ್ಷಣಕ್ಕಿಂತ ಕ್ರಿಕೆಟ್ ಮ್ಯಾಚ್ ದೊಡ್ಡದಾಯ್ತಾ..?
ಧೋನಿ ಅಭಿಮಾನಿಯೊಬ್ಬ ಮಕ್ಕಳ ಸ್ಕೂಲ್ ಫೀಸ್ ಕಟ್ಟದೇ ಮ್ಯಾಚ್ ನೋಡಿದೆ ಅನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಜೊತೆಗೆ ಪರ ವಿರೋಧದ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಬಹುತೇಕರು ತಂದೆಯ ಈ ನಿರ್ಧಾರವನ್ನ ಟೀಕಿಸಿದ್ದಾರೆ. ಇದೊಂದು ಮೂರ್ಖತನದ ನಿರ್ಧಾರ. ಅಭಿಮಾನಕ್ಕಾಗಿ ಮಕ್ಕಳ ಭವಿಷ್ಯವನ್ನ ಬಲಿ ಕೊಡುವುದು ಎಷ್ಟು ಸರಿ ? ಮ್ಯಾಚ್ಗಿಂತ ಶಿಕ್ಷಣ ದೊಡ್ಡದು. ಇದು ಪ್ಯೂರ್ ಅಂದಾಭಿಮಾನ ಎಂದು ಕೆಲವರು ಹೇಳಿದ್ದಾರೆ. ಧೋನಿ ನೋಡುವ ಮಕ್ಕಳ ಆಸೆಯನ್ನ ತಂದೆ ಈಡೇರಿಸಿದ್ದಾರೆ ಎಂದು ಅವರ ಪರ ಬ್ಯಾಟ್ ಬೀಸಿದ್ದಾರೆ.
ಪರ-ವಿರೋಧದ ಚರ್ಚೆ ಏನೇ ಇರ್ಲಿ. ಫ್ಯಾನ್ಸ್ ನೆಚ್ಚಿನ ಆಟಗಾರರ ಮೇಲೆ ಅಭಿಮಾನ ವ್ಯಕ್ತಪಡಿಸುವುದು ತಪ್ಪಲ್ಲ. ಆದರೆ ಅಂದಾಭಿಮಾನ ತಲೆಗೇರಿಸಿಕೊಳ್ಳುವುದು ನಿಜಕ್ಕೂ ತಪ್ಪು. ಕ್ರಿಕೆಟ್ ಪ್ರೇಮಿಗಳು ಇನ್ನಾದ್ರೂ ಇದನ್ನ ಅರ್ಥ ಮಾಡಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ