newsfirstkannada.com

×

ಅದೇ ತಿಂಗಳು, ಅದೇ ದಿನಾಂಕ.. ಪತ್ನಿ ಸಾವನ್ನಪ್ಪಿದ ದಿನವೇ ದ್ವಾರಕೀಶ್​​ ನಿಧನ

Share :

Published April 16, 2024 at 3:04pm

    ಪತ್ನಿಯ ನೆನಪಲ್ಲೇ ಸಾವನ್ನಪ್ಪಿದರೇ ಹಿರಿಯ ನಟ ದ್ವಾರಕೀಶ್​

    81ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ಕನ್ನಡದ ಪ್ರಚಂಡ ಕುಳ್ಳ

    ಮಡದಿ ಅಂಬುಜಾಕ್ಷಿ ನಿಧನವಾದ ದಿನದಂದೇ ದ್ವಾರಕೀಶ್​ ಸಾವು

ಕನ್ನಡ ಚಿತ್ರರಂಗ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಕನ್ನಡದ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ದ್ವಾರಕೀಶ್​ ಇಂದು ಇಹಲೋಕ ತ್ಯಜಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಉಸಿರು ಚೆಲ್ಲಿದ್ದಾರೆ. ಅಚ್ಚರಿ ಸಂಗತಿ ಎಂದರೆ ಹೆಂಡತಿ ಸಾವನ್ನಪ್ಪಿದ ದಿನವೇ ಗಂಡ ದ್ವಾರಕೀಶ್​ ಕೂಡ ಕೊನೆಯುಸಿರೆಳೆದಿದ್ದಾರೆ.

ಹೌದು. ದ್ವಾರಕೀಶ್​​ ಮಡದಿ ಅಂಬುಜಾಕ್ಷಿ ನಿಧನವಾದ ತಿಂಗಳು ದಿನಾಂಕದಂದೇ ದ್ವಾರಕೀಶ್​ ನಿಧನರಾಗಿದ್ದಾರೆ.  ಅಂಬುಜಾಕ್ಷಿಯವರು 2021 ಏಪ್ರಿಲ್​ 16ರಂದು ಬೆಳಗ್ಗೆ 9:45 ಕ್ಕೆ ನಿಧನಾರಗಿದ್ದು. ಇವರು ಸಾವನ್ನಪ್ಪಿ 3 ವರ್ಷದ ಬಳಿಕ, ಇಂದು ದ್ವಾರಕೀಶ್​​ ಕೊನೆಯುಸಿರೆಳೆದಿದ್ದಾರೆ.

ಇಂದು ಏ.16 ಬೆಳಗ್ಗೆ 10 ಗಂಟೆಗೆ ಕನ್ನಡದ ಕುಳ್ಳ ಬದುಕಿನ ಹಾದಿ ಮುಗಿಸಿದ್ದಾರೆ. ಹೀಗಾಗಿ ದ್ವಾರಕೀಶ್​ ಸಾವು ಅಚ್ಚರಿಗೆ ಕಾರಣವಾಗಿದೆ. ಪತ್ನಿಯನ್ನೇ ನೆನೆದುಕೊಂಡು ದ್ವಾರಕೀಶ್​ ಸಾವನ್ನಪ್ಪಿದರೇ ಎಂದ ಪ್ರಶ್ನೆಯೊಂದು ಎಲ್ಲರನ್ನು ಕಾಡತೊಡಗಿದೆ.

ದ್ವಾರಕೀಶ್​ ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಸಿನಿಮಾಗಳನ್ನು ನೀಡಿದ ನಟ. ಹಲವು ಸಿನಿಮಾಗಳನ್ನು ಇವರು ನಿರ್ದೇಶನ ಕೂಡ ಮಾಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸದಾ ಚುರುಕಾಗಿ ಇದ್ದ ಇವರು ಫ್ಯಾಮಿಲಿ, ಮಕ್ಕಳೊಂದಿಗೆ ನಗು ನಗುತ್ತಾ ಜೀವನ ಕಳೆದವರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ದ್ವಾರಕೀಶ್ ವೈವಾಹಿಕ ಜೀವನಕ್ಕೆ ಕಾಲಿಟ್ರು.

ದ್ವಾರಕೀಶ್ -ಅಂಬುಜಾ ವಿವಾಹ

ಏಪ್ರಿಲ್ 26, 1967 ರಂದು ದ್ವಾರಕೀಶ್ ಅಂಬುಜಾ ಅವರನ್ನು ವಿವಾಹವಾದ್ರು. ಇವರಿಗೆ ಗಿರಿ ಹಾಗೂ ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ. ಮಗ ಗಿರಿ ದ್ವಾರಕೀಶ್​ ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದೇ ತಿಂಗಳು, ಅದೇ ದಿನಾಂಕ.. ಪತ್ನಿ ಸಾವನ್ನಪ್ಪಿದ ದಿನವೇ ದ್ವಾರಕೀಶ್​​ ನಿಧನ

https://newsfirstlive.com/wp-content/uploads/2024/04/Dwarakish-1.jpg

Load More