ಕಂಪ್ಲೀಟ್ ಬದಲಾದ ಕೊಹ್ಲಿಯಿಂದ ನಿಬ್ಬೆರಗಾಗಿಸೋ ಆಟ
ಸ್ಟ್ರೈಕ್ರೇಟ್ ಬಗ್ಗೆ ಟೀಕಿಸೋರಿಗೆ ತಕ್ಕ ಆನ್ಸರ್ ಕೊಟ್ಟ ಕಿಂಗ್
ಪವರ್ಪ್ಲೇ, ಮಿಡಲ್ ಆರ್ಡರ್ನಲ್ಲಿ ವಿರಾಟ್ ವಿರಾಟರೂಪ
ಕಿಂಗ್ ಕೊಹ್ಲಿ ಈ ಸೀಸನ್ ಆರಂಭಕ್ಕೂ ಮುನ್ನ ಇದು ಹೊಸ ಅಧ್ಯಾಯ ಅಂತ ಹೇಳಿದ್ರು. ಅದು ಬರೀ ಮಾತಾಗಿಯೇ ಉಳಿದಿದೆ. ಆರ್ಸಿಬಿ ಸತತ 5 ಸೋಲುಂಡು ಪ್ರಪಾತಕ್ಕೆ ಜಾರಿದೆ. ಆದರೆ ತಂಡ ಹೊಸ ಅಧ್ಯಾಯ ಆರಂಭಿಸದಿದ್ರೂ ಕಿಂಗ್ ಕೊಹ್ಲಿ ಮಾತ್ರ ಹೊಸ ಅವತಾರವನ್ನ ಎತ್ತಿದ್ದಾರೆ. ನೀವು ಹಿಂದೆಂದೂ ವಿರಾಟ್ರ ಇಂತಹ ಅವತಾರವನ್ನ ನೋಡಿಯೇ ಇಲ್ಲ.
ಇದು ಕಿಂಗ್ ಕೊಹ್ಲಿಯ ಹೊಸ ಅಧ್ಯಾಯ.. ಹೊಸ ಅವತಾರ..!
ಸಾಮಾನ್ಯ ಆನೆಯನ್ನೆ ನಿಯಂತ್ರಿಸೋದೆ ಕಷ್ಟ. ಅಂತ್ರದಲ್ಲಿ ಮದವೇರಿದ ಮದ್ದಾನೆಯನ್ನ ಕಂಟ್ರೋಲ್ ಮಾಡೋದಂದ್ರೆ ನಿಜಕ್ಕೂ ಕಷ್ಟವೇ ಬಿಡಿ. ಪ್ರಸಕ್ತ ಐಪಿಎಲ್ನಲ್ಲಿ ಕಿಂಗ್ ಕೊಹ್ಲಿ ಮದವೇರಿ ಮದ್ದಾನೆಯಂತೆ ಹೂಂಕರಿಸುತ್ತಿದ್ದಾರೆ. ಎದುರಾಳಿ ಪಡೆ ವಿರಾಟ್ ವಿರಾಟರೂಪಕ್ಕೆ ಬೆಸ್ತು ಬಿದ್ದಿದೆ. 147ರ ಸ್ಟ್ರೈಕ್ರೇಟ್ನಲ್ಲಿ ಬರೋಬ್ಬರಿ 361 ರನ್ ಕೊಳ್ಳೆ ಹೊಡೆದು, ಹಿಂದೆಂದೂ ಕಾಣದ ಹೊಸ ಅವತಾರವನ್ನೇ ಎತ್ತಿದ್ದಾರೆ.
17ನೇ ಐಪಿಎಲ್ನಲ್ಲಿ ನೀವು ನೋಡ್ತಿರೋದು ನಿಜಕ್ಕೂ ಹೊಸ ಅವತಾರವೇ. ಅದುವೇ 3.0 ವರ್ಸನ್. ಪ್ರಸಕ್ತ ಐಪಿಎಲ್ನ ಪವರ್ ಪ್ಲೇ, ಮಿಡಲ್ ಆರ್ಡರ್ ಹಾಗೂ ಸ್ಲಾಗ್ ಓವರ್ಗಳಲ್ಲಿ ಧೂಳೆಬ್ಬಿಸಿದ್ದಾರೆ. ಎಸ್ಪೆಶಲಿ ಅವರ ಸ್ಟ್ರೈಕ್ರೇಟ್ ಅನ್ನ ಗಣನೀಯ ರೀತಿಯಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಆ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಇದನ್ನೂ ಓದಿ:ಮತ್ತೆ ಪೋಷಕರ ನಿದ್ದೆಗೆಡಿಸಿದ ನೆಸ್ಲೆ ಕಂಪನಿ.. ನಿಮ್ಮ ಮಗುವಿಗೆ Cerelac ನೀಡುವ ಮುನ್ನ ಹುಷಾರ್..!
ಕಳೆದ 5 ಸೀಸನ್, 7-16 ಓವರ್ಸ್ನಲ್ಲಿ ಕೊಹ್ಲಿ..!
ಸೀಸನ್ 2020 ರಲ್ಲಿ ಕೊಹ್ಲಿ 110 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದರು. ಮರುವರ್ಷ 108 ಸ್ಟ್ರೈಕ್ರೇಟ್ನಲ್ಲಿ ಆಡಿದ್ರು. ಆದರೆ 2022 ರಲ್ಲಿ ಗೇರ್ ಚೇಂಜ್ ಮಾಡಿದ ವಿರಾಟ್ 116 ಸ್ಟ್ರೈಟ್ರೇಟ್ನಲ್ಲಿ ರನ್ ಗಳಿಸಿದ್ರೆ 2023 ರಲ್ಲಿ ಮತ್ತಷ್ಟು ವೈಲೆಂಟ್ ಆದ್ರು. 134ರ ಸ್ಟ್ರೈಕ್ರೇಟ್ನಲ್ಲಿ ಕೊಳ್ಳೆ ಹೊಡೆದ್ರು. ಇನ್ನೂ ಈ ಬಾರಿಯಂತೂ ಹಿಂದೆಂದೂ ಕಾಣದಷ್ಟು ಅಂದ್ರೆ 138ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಪವರ್ಪ್ಲೇನಲ್ಲಂತೂ ಕೊಹ್ಲಿ ಗಿಲ್ಲಿದಾಂಡಿ ಆಟವಾಡ್ತಿದ್ದಾರೆ. ಕಾದು ಆಡುವುದನ್ನ ಬಿಟ್ಟು ಅಗ್ರೆಸ್ಸಿವ್ ಅಪ್ರೋಚ್ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಸಿಕ್ಸರ್-ಬೌಂಡ್ರಿ ಮಳೆ ಸುರಿಸಿ ಫ್ಯಾನ್ಸ್ಗೆ ಅಸಲಿ ಟ್ರೀಟ್ ಕೊಡ್ತಿದ್ದಾರೆ.
ಇದನ್ನೂ ಓದಿ:CET Exam: ಇಂದಿನಿಂದ ಸಿಇಟಿ ಪರೀಕ್ಷೆ; ಪರೀಕ್ಷಾರ್ಥಿಗಳಿಗೆ ಡ್ರೆಸ್ಕೋಡ್, ಮಾರ್ಗಸೂಚಿ..!
ಪವರ್ಪ್ಲೇನಲ್ಲಿ ಕಿಂಗ್ ಕೊಹ್ಲಿ ಸಾಧನೆ
2016 ರಲ್ಲಿ ದಾಖಲೆಯ 4 ಶತಕ ಸಿಡಿಸಿದ್ದ ಕೊಹ್ಲಿ ಅದೇ ವರ್ಷ ಪವರ್ಪ್ಲೇನಲ್ಲಿ 119.55ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. 2023 ರಲ್ಲಿ ಮತ್ತಷ್ಟು ಕೆರಳಿದ ರನ್ ಮಷೀನ್ 136.81 ಸ್ಟ್ರೈಕ್ರೇಟ್ ಹೊಂದಿದ್ರೆ ಈ ವರ್ಷ ಬರೋಬ್ಬರಿ 145.61ರ ಸ್ಟ್ರೈಕ್ರೇಟ್ನಲ್ಲಿ ರನ್ ಗುಡ್ಡೆ ಹಾಕ್ತಿದ್ದಾರೆ. ಸ್ಲಾಗ್ ಓವರ್ಗಳಲ್ಲಿ ವಿರಾಟ್ ಹೆಚ್ಚಾಗಿ ಘರ್ಜಿಸಲ್ಲ. ಅವರೂ ಸ್ಟ್ರೈಕ್ರೇಟ್ ಹೆಚ್ಚಿಸಿಕೊಳ್ಳಬೇಕು ಅನ್ನೋ ವಾದ ಕೇಳಿ ಬಂದಿತ್ತು. ಅದಕ್ಕೀಗ ಫುಲ್ಸ್ಟಾಪ್ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್ ಆದವರ ಹೆಸರೂ ಇದೆ..!
ಕಳೆದ 5 ಸೀಸನ್, ಡೆತ್ ಓವರ್ಸ್ನಲ್ಲಿ ಕೊಹ್ಲಿ
2020 ರಿಂದ ವಿರಾಟ್ ಕೊಹ್ಲಿ ಇಲ್ಲಿತನಕ ಸ್ಲಾಗ್ ಓವರ್ಗಳಲ್ಲಿ 17 ಬಾರಿ ಕಣಕ್ಕಿಳಿದಿದ್ದಾರೆ. 123 ಬಾಲ್ ಎದುರಿಸಿ 206.50 ಸ್ಟ್ರೈಕ್ರೇಟ್ನಲ್ಲಿ ಬರೋಬ್ಬರಿ 254 ರನ್ ಚಚ್ಚಿದ್ದಾರೆ. ಒಟ್ಟಿನಲ್ಲಿ ಹಿಂದಿನ ಸೀಸನ್ಗಿಂತ ಕಿಂಗ್ ಕೊಹ್ಲಿ ಈ ಬಾರಿ ಸ್ಟ್ರೈಕ್ರೇಟ್ ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ಪಂದ್ಯಗಳಲ್ಲೂ ವಿರಾಟ್ ಇದೇ ದಮ್ದಾರ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ ಫ್ಯಾನ್ಸ್ ರಂಜಿಸುವಂತಾಗಲಿ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ