newsfirstkannada.com

ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!

Share :

Published April 18, 2024 at 12:10pm

  ಟಿ-20 ವಿಶ್ವಕಪ್ ಆಡಲು ಪಾಂಡ್ಯ vs ದುಬೆ ಮಧ್ಯೆ ಫೈಟ್..!

  ಹಾರ್ದಿಕ್ ಓವರ್​​​ಟೇಕ್ ಮಾಡ್ತಾರಾ ಶಿವಂ ದುಬೆ..?

  ವಿಧ್ವಂಸಕ ಬ್ಯಾಟರ್​​​​​​ಗೆ ತೆರೆಯುತ್ತಾ ವಿಶ್ವಕಪ್ ಬಾಗಿಲು..?

ಜಸ್ಟ್​ ಐದಿನೈದು ದಿನ. ಅಷ್ಟರೊಳಗೆ ಟಿ20 ವಿಶ್ವಕಪ್​​​​ಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಬೇಕಿದೆ. ಆಯ್ಕೆಯಂತೂ ಕಗ್ಗಂಟಾಗಿದೆ. ಎಸ್ಪೆಷಲಿ ಆಲ್​ರೌಂಡರ್ ಸ್ಲಾಟ್​​ಗಾಗಿ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಮಧ್ಯೆ ಮೆಗಾ ಫೈಟ್​ ಏರ್ಪಟ್ಟಿದೆ. ಯಾರು ಸೆಲೆಕ್ಟ್​ ಆಗ್ತಾರೆ ಅನ್ನೋದು ಇಲ್ಲಿ ತನಕ ಸಸ್ಪೆನ್ಸ್ ಆಗಿ ಉಳಿದಿದೆ.

ದೇಶದೆಲ್ಲೆಡೆ ಐಪಿಎಲ್​​ ಫೀವರ್ ಜೋರಾಗಿದೆ. ಇದರ ನಡುವೆ ಬಿಸಿಸಿಐಗೆ ದೊಡ್ಡ ಸವಾಲೊಂದು ಎದುರಾಗಿದೆ. ಅದೇನಂದ್ರೆ ಟಿ20 ವಿಶ್ವಕಪ್​​ಗೆ ಬಲಿಷ್ಠ ಸೈನ್ಯವನ್ನ ಪ್ರಕಟಿಸುವುದು. ಮೇ 1 ರ, ಒಳಗಾಗಿ ತಂಡವನ್ನ ಅನೌನ್ಸ್ ಮಾಡಬೇಕಿದ್ದು, ತಂಡದ ಆಯ್ಕೆ ಬಿಸಿಸಿಐಗೆ ಕಗ್ಗಂಟಾಗಿ ಪರಿಣಮಿಸಿದೆ.

ಇದನ್ನೂ ಓದಿ:ವಿದ್ಯಾರ್ಥಿಗಳು ಕೇಸರಿ ವಸ್ತ್ರ ಹಾಕೊಂಡು ಬಂದಿದ್ಕೆ ಪ್ರಿನ್ಸಿಪಾಲ್ ಗರಂ, ಮದರ್ ತೆರೆಸಾ ಸ್ಕೂಲ್​ನಲ್ಲಿ ಭಾರೀ ಗಲಾಟೆ

ಹಾರ್ದಿಕ್​​​​ ಪಾಂಡ್ಯ V/S ಶಿವಂ ದುಬೆ
ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲು ಹಾರ್ದಿಕ್​ ಪಾಂಡ್ಯ ಹಾಗೂ ಶಿವಂ ದುಬೆ ಮೆಗಾ ಫೈಟ್ ಏರ್ಪಟ್ಟಿದೆ. ಪ್ರಸಕ್ತ ಐಪಿಎಲ್​​​​​​ ಪರ್ಫಾಮೆನ್ಸ್​​​ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ಇಬ್ಬರಲ್ಲಿ ಯಾರು ಫಸ್ಟ್ ಚಾಯ್ಸ್​ ಆಲ್​ರೌಂಡರ್ ಆಗಿ ಸೆಲೆಕ್ಟ್ ಆಗ್ತಾರೆ ಅನ್ನೋದು ಮಿಲಿಯನ್​ ಡಾಲರ್ ಪ್ರಶ್ನೆಯಾಗಿದೆ. ಒಂದು ವೇಳೆ ಸೀಸನ್​​​​ 17ನೇ ಐಪಿಎಲ್​​ ಪ್ರದರ್ಶನವೇ ಆಯ್ಕೆಗೆ ಮಾನದಂಡವಾದ್ರೆ ಶಿವಂ ದುಬೆಗೆ ಲಾಟರಿ ಹೊಡೆಯೋದು ಪಕ್ಕಾ. ಯಾಕಂದ್ರೆ ಸಿಎಸ್​ಕೆ ಪರ ಸ್ಪಿನ್ ಬೀಸ್ಟ್​​ ಬ್ಲಾಕ್​ಬಸ್ಟರ್ ಪ್ರದರ್ಶನ ನೀಡಿದ್ದಾರೆ. ಆದರೆ ಸುದೀರ್ಘ ಸಮಯದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​​​ಗೆ ಮರಳಿದ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ.

ಇದನ್ನೂ ಓದಿ:ಅದೃಷ್ಟ ಗಟ್ಟಿ ಇತ್ತು, ಜೀವ ಉಳಿಸಿಕೊಂಡ ಬೈಕ್ ಸವಾರ; ವಿಡಿಯೋ ನೋಡಿದ್ರೆ ಮೈ ಝಮ್ ಎನ್ನುತ್ತೆ..!

ಪ್ರಸಕ್ತ ಐಪಿಎಲ್​ನಲ್ಲಿ ದುಬೆ-ಹಾರ್ದಿಕ್​​
17ನೇ ಸೀಸನ್​ ಐಪಿಎಲ್​​​​​ನಲ್ಲಿ ಹಾರ್ದಿಕ್​ ಪಾಂಡ್ಯ ಆರು ಪಂದ್ಯಗಳನ್ನಾಡಿದ್ದಾರೆ. 145.56ರ ಸ್ಟ್ರೈಕ್​ರೇಟ್​​ನಲ್ಲಿ 131 ರನ್ ಕೊಳ್ಳೆ ಹೊಡೆದಿದ್ದಾರೆ. ಒಂದೂ ಅರ್ಧಶತಕ ಆಗಲಿ ಅಥವಾ ಶತಕ ಮೂಡಿ ಬಂದಿಲ್ಲ. ಇನ್ನು ಪಾಂಡ್ಯರಷ್ಟೇ ಪಂದ್ಯಗಳನ್ನ ಆಡಿರುವ ಶಿವಂ ದುಬೆ 163.51ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದು, 242 ರನ್ ಬಾರಿಸಿದ್ದಾರೆ. ಎರಡು ಅರ್ಧಶತಕಗಳನ್ನ ಹೊಡೆದಿದ್ದಾರೆ.

ಪ್ರಚಂಡ ಫಾರ್ಮ್​ ಬಿಗ್​​ ಹಿಟ್ಟರ್​​ಗೆ ವರದಾನ
ಹಾರ್ದಿಕ್​​ ವರ್ಸಸ್​ ಶಿವಂ ದುಬೆ ಫೈಟ್​​ನಲ್ಲಿ ಫೈರಿ ಲೆಫ್ಟಿ ಬ್ಯಾಟರ್ ಒಂದು ಒಂದು ಹೆಜ್ಜೆ ಮುಂದಿದ್ದಾರೆ. ಬ್ಯಾಟ್​​ನಿಂದ ಸಿಕ್ಸರ್​​​​-ಬೌಂಡ್ರಿಗಳ ಸರಮಾಲೆಯನ್ನ ಕಟ್ತಿದ್ದಾರೆ. ಆದ್ರಲ್ಲೂ ಸ್ಪಿನ್ನರ್ಸ್​ ಪಾಲಿಗಂತೂ ದುಬೆ ವಿಲನ್ ಆಗಿದ್ದಾರೆ. ಆದರೆ ಬ್ಯಾಟಿಂಗ್​ನಲ್ಲಿ ರನ್ ಹೊಳೆ ಹರಿಸ್ತಿರೋ ದುಬೆ ಇಲ್ಲಿತನಕ ಬೌಲಿಂಗ್​​​​​​​​​ ಅನ್ನೆ ಮಾಡಿಲ್ಲ. ಸಿಎಸ್​​​ಕೆ ಅವರನ್ನ ಇಂಪ್ಯಾಕ್ಟ್​ ಪ್ಲೇಯರ್ ಆಗಿ ಬರಿ ಬ್ಯಾಟಿಂಗ್​ನಲ್ಲಿ ಬಳಸಿಕೊಳ್ತಿದೆ. ಈ ವೀಕ್ನೆಸ್​​ ಶಿವಂ ದುಬೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ರೋಹಿತ್ ಜೊತೆ ಬಿಸಿಸಿಐ ಹೈ-ವೋಲ್ಟೇಜ್ ಮೀಟಿಂಗ್; ಪಾಂಡ್ಯಗೆ ಶಾಕಿಂಗ್ ನ್ಯೂಸ್​ ಕೊಟ್ಟ ಆಯ್ಕೆ ಸಮಿತಿ..!

ಬ್ಯಾಟಿಂಗ್​​, ಬೌಲಿಂಗ್​ನಲ್ಲಿ ಹಾರ್ದಿಕ್ ಕನ್ಸಿಸ್ಟನ್ಸಿ ಮಾಯ
ಹಾರ್ದಿಕ್​ ಪಾಂಡ್ಯ ಮುಂಬೈ ನಾಯಕನಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲಿ ಕಾಂಟ್ರಿಬ್ಯೂಟ್ ನೀಡ್ತಿದ್ದಾರೆ. ಆದ್ರೆ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಒಂದು ಮ್ಯಾಚ್​ನಲ್ಲಿ ಅಬ್ಬರಿಸಿ, ಮತ್ತೊಂದು ಮ್ಯಾಚ್​​ನಲ್ಲಿ ನಿರಾಸೆ ಮೂಡಿಸ್ತಿದ್ದಾರೆ. ಜೊತೆಗೆ ಹಿಂದಿನ ಖದರ್ ಕೂಡ ಮಾಯವಾಗಿದೆ. ಒಟ್ಟಿನಲ್ಲಿ ಟಿ20 ವಿಶ್ವಕಪ್​ ಟಿಕೆಟ್​ಗಾಗಿ ಶಿವಂ ದುಬೆ ಹಾಗೂ ಹಾರ್ದಿಕ್​ ಪಾಂಡ್ಯ ನಡುವೆ ಪೈಪೋಟಿ ಏರ್ಪಟ್ಟಿರೋದಂತೂ ನಿಜ. ದುಬೆಗೆ ವೆಸ್ಟ್​ಇಂಡೀಸ್ ಹಾಗೂ ಅಮೆರಿಕಾ ಕಂಡಿಷನ್ ಸಖತ್ ಸೂಟ್ ಆಗುತ್ತೆ. ಇನ್ನೊಂದೆಡೆ ಅನುಭವಿ ಆಲ್​ರೌಂಡರ್ ಹಾರ್ದಿಕ್​​​​​​​ ರನ್ನ ಕಡೆಗಣಿಸುವಂತಿಲ್ಲ. ಹೀಗಾಗಿ ಆಲ್​ರೌಂಡರ್ ಆಯ್ಕೆ ಕಗ್ಗಂಟಾಗಿದೆ. ಆಯ್ಕೆಗಾರರು ಇದನ್ನ ಹೇಗೆ ಬಿಡಿಸ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!

https://newsfirstlive.com/wp-content/uploads/2024/04/HARDIK-PANDYA-AND-SHIVAM-DUBE.jpg

Load More