newsfirstkannada.com

ವಿದ್ಯಾರ್ಥಿಗಳು ಕೇಸರಿ ವಸ್ತ್ರ ಹಾಕೊಂಡು ಬಂದಿದ್ಕೆ ಪ್ರಿನ್ಸಿಪಾಲ್ ಗರಂ, ಮದರ್ ತೆರೆಸಾ ಸ್ಕೂಲ್​ನಲ್ಲಿ ಭಾರೀ ಗಲಾಟೆ

Share :

Published April 18, 2024 at 11:25am

    ಉದ್ರಿಕ್ತ ಗುಂಪಿನಿಂದ ಸ್ಕೂಲ್​​ ಮೇಲೆ ದಾಳಿ ನಡೆಸಿದ್ದಾರೆ

    ಪ್ರಿನ್ಸಿಪಾಲ್ ವಿರುದ್ಧ ಕೇಸ್ ದಾಖಲಿಸಿದ ವಿದ್ಯಾರ್ಥಿಗಳ ಪೋಷಕರು

    ಗಲಾಟೆಗೆ ಕಾರಣವಾಯ್ತು ಆ ಒಂದು ವಿಡಿಯೋ, ಏನದು?

ಉದ್ರಿಕ್ತ ಗುಂಪು ಸ್ಕೂಲ್​​ಗೆ ನುಗ್ಗಿ ಹಾನಿ ಮಾಡಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ. ಶಾಲೆಗೆ ವಿದ್ಯಾರ್ಥಿಗಳು ಧಾರ್ಮಿಕ ಉಡುಗೆಯಲ್ಲಿ ಬಂದಿದ್ದರು, ಇದನ್ನು ಪ್ರಾಂಶುಪಾಲರು ಪ್ರಶ್ನೆ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡು, ಶಾಲೆ ಮೇಲೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೇಸಿಗೆಯ ಆರೋಗ್ಯ: ಉರಿ ಬಿಸಿಲು ಹೃದಯಾಘಾತಕ್ಕೂ ಕಾರಣ ಆಗ್ತಿದೆ, ಅಪಾಯ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಆರೋಪ ಮೇಲೆ ಸ್ಕೂಲ್​ನ ಪ್ರಿನ್ಸಿಪಾಲ್ ಸೇರಿ ಇಬ್ಬರ ವಿರುದ್ಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪ ಹಾಗೂ ವಿವಿಧ ಸಮುದಾಯದ ನಡುವೆ ದ್ವೇಷ ಉಂಟಾಗುವಂತೆ ಮಾಡಿದ ಆರೋಪಗಳ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

ಹೈದರಾಬಾದ್​ನಿಂದ 250 ಕಿಲೋ ಮೀಟರ್ ದೂರದ ಕನ್ನೆಪಳ್ಳಿ ಗ್ರಾಮದಲ್ಲಿರುವ ಮದರ್ ತೆರೆಸಾ ಹೈಸ್ಕೂಲ್​​ನಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳು ಕೇಸರಿ ಬಣ್ಣದ ಡ್ರೆಸ್​ ತೊಟ್ಟುಕೊಂಡು ಸ್ಕೂಲ್​ಗೆ ಬಂದಿದ್ದರು. ಇದನ್ನು ಗಮನಿಸಿದ್ದ ಕೇರಳ ಮೂಲದ ಪ್ರಿನ್ಸಿಪಾಲ್ ಜೈಮೊನ್ ಜೊಸೆಫ್, ವಿದ್ಯಾರ್ಥಿಗಳಿಗೆ ವಾರ್ನಿಂಗ್ ಕೊಟ್ಟಿದ್ದರಂತೆ. ಆಗ ವಿದ್ಯಾರ್ಥಿಗಳು ತಾವು 21 ದಿನಗಳ ಕಾಲ ಹನುಮಾನ್ ದೀಕ್ಷಾ ವೃತದಲ್ಲಿರೋದಾಗಿ ತಿಳಿಸಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಪ್ರಿನ್ಸಿಪಾಲ್ ಪೋಷಕರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದರು.

ಇದನ್ನೂ ಓದಿ: ರಾಮನವಮಿ ಸಂಭ್ರಮದ ವೇಳೆ ಕಿರಿಕ್; ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ ಮಾಡಿದ್ದ ಮೂವರು ಅರೆಸ್ಟ್.!

ಯಾರೋ ಒಬ್ಬರು ಇಲ್ಲಿನ ಪ್ರಿನ್ಸಿಪಾಲರು ಹಿಂದೂಗಳಿಗೆ ಶಾಲೆಯೊಳಗೆ ಬರಲು ಬಿಡುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದುಬಿಟ್ಟಿದ್ದರು. ಬೆನ್ನಲ್ಲೇ, ಪರಿಸ್ಥಿತಿ ಉಲ್ಬಣಗೊಂಡಿತು. ಏಕಾಏಕಿ ಸ್ಕೂಲ್​ಗೆ ನುಗ್ಗಿದ ಗುಂಪು, ಶಾಲೆಯ ಬಾಗಿಲು, ಕಿಟಗಿ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇದನ್ನು ತಪ್ಪಿಸಲು ಬಂದ ಶಾಲಾ ಸಿಬ್ಬಂದಿ ಜೊತೆ ವಾಗ್ವಾದ ನಡೆದಿದೆ. ಜೈ ಶ್ರೀರಾಂ ಘೋಷಣೆಯನ್ನೂ ಕೂಗಿದ್ದಾರೆ. ನಂತರ ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳು ಕೇಸರಿ ವಸ್ತ್ರ ಹಾಕೊಂಡು ಬಂದಿದ್ಕೆ ಪ್ರಿನ್ಸಿಪಾಲ್ ಗರಂ, ಮದರ್ ತೆರೆಸಾ ಸ್ಕೂಲ್​ನಲ್ಲಿ ಭಾರೀ ಗಲಾಟೆ

https://newsfirstlive.com/wp-content/uploads/2024/04/SCHOOL-2.jpg

Load More