newsfirstkannada.com

ಬೇಸಿಗೆಯ ಆರೋಗ್ಯ: ಉರಿ ಬಿಸಿಲು ಹೃದಯಾಘಾತಕ್ಕೂ ಕಾರಣ ಆಗ್ತಿದೆ, ಅಪಾಯ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

Share :

Published April 18, 2024 at 10:29am

Update April 18, 2024 at 10:30am

    ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು?

    ಬೇಸಿಗೆಯಲ್ಲಿ ಬರುವ ಪ್ರಮುಖ ಮೂರು ರೋಗಗಳು ಯಾವುದು?

    ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ

ಬಿಸಿಲಿನ ತಾಪ ಸುಡುತ್ತಿದೆ. ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಅಂತಹ ವಾತಾವರಣ ಆರೋಗ್ಯಕ್ಕೆ ಒಳ್ಳೆಯದಲ್ಲ. ಉರಿ ಬಿಸಿಲು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಬೇಸಿಗೆಯಲ್ಲಿ ಅತಿ ದೊಡ್ಡ ಆರೋಗ್ಯದ ಸಮಸ್ಯೆ ಏನೆಂದರೆ ದೇಹದಲ್ಲಿ ನೀರಿನ ಕೊರತೆ ಅಂದರೆ ನಿರ್ಜಲೀಕರಣ. ನಿರ್ಜಲೀಕರಣದಿಂದ ಹೃದಯದ ಕೆಲಸ ಕೂಡ ಹದಗೆಡಬಹುದು. ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರ ವಹಿಸಬೇಕು ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ:UPSC ಟಾಪರ್​​ಗೂ ಕೊಹ್ಲಿಯೇ ಸ್ಫೂರ್ತಿ, ರಘುರಾಂ ರಾಜನ್​​ ಕೂಡ ಕೊಹ್ಲಿ ಬಗ್ಗೆ ಮಾತು..!

ಶಾಖದ ಅಲೆಯಿಂದ ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತದೆ. ಪರಿಣಾಮ ಆಯಾಸ, ದೌರ್ಬಲ್ಯ, ಪ್ರಜ್ಞಾಹೀನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಅದಕ್ಕೆ ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ಇದ್ದರೂ ಸಾಲದು.

ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

  • ದೇಹದಲ್ಲಿ ನಿರ್ಜಲೀಕರಣ ಆಗದಂತೆ ಎಚ್ಚರ ವಹಿಸಿ
  • ಪ್ರತಿ ಎರಡು ಗಂಟೆಗಳಿಗೊಮ್ಮೆ ನೀರು ಕುಡಿಯುತ್ತಿರಿ
  • ನೀವು ಮನೆಯಿಂದ ಹೊರಡುವಾಗ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ
  • ಬಿಸಿಲಿಗೆ ಹೋದರೆ ತಲೆಯನ್ನು ಮುಚ್ಚಿಕೊಳ್ಳಿ, ಕನ್ನಡಕವನ್ನು ಧರಿಸಿ
  • ಕಲ್ಲಂಗಡಿ ಸೇರಿದಂತೆ ನೀರಿನಂಶ ಇರುವ ಹಣ್ಣುಗಳನ್ನು ಸೇವಿಸಿ

ಈ 3 ರೋಗಗಳು ಬರುವ ಅಪಾಯ
ಆಹಾರ ವಿಷ: ವೈದ್ಯರ ಪ್ರಕಾರ ಬೇಸಿಗೆಯಲ್ಲಿ ಹೊಟ್ಟೆನೋವು, ವಾಂತಿ, ಬೇಧಿಯಂತಹ ಸಮಸ್ಯೆಗಳು ಬರಲಾರಂಭಿಸುತ್ತವೆ. ಇದಕ್ಕೆ ಕಾರಣ ಆಹಾರ ವಿಷ. ಆಹಾರವು ಬೇಗನೆ ಹಾಳಾಗುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇಂಥ ಆಹಾರಗಳು ದೇಹಕ್ಕೆ ವಿಷವಾಗುತ್ತದೆ. ಹೀಗಾಗಿ ದೀರ್ಘಕಾಲ ಇಟ್ಟುಕೊಂಡ ಆಹಾರವನ್ನು ಸೇವಿಸಬೇಡಿ, ಬೀದಿ ಆಹಾರ ಸೇವನೆಯಿಂದ ದೂರ ಇರಿ.

ಇದನ್ನೂ ಓದಿ:ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

ಟೈಫಾಯಿಡ್: ಬೇಸಿಗೆಯಲ್ಲಿ ಟೈಫಾಯಿಡ್ ಸಮಸ್ಯೆ ಕಾಡಬಹುದು. ಮಕ್ಕಳಲ್ಲಿ ಇಂತಹ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ. ಆಹಾರ ಪದ್ಧತಿಯಿಂದಲೂ ಈ ರೋಗ ಬರುತ್ತದೆ. ಜ್ವರ, ತಲೆನೋವು, ವಾಂತಿ, ಭೇದಿ, ಸುಸ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಟೈಫಾಯಿಡ್ ಪ್ರಕರಣಗಳೂ ಹೆಚ್ಚಿವೆ.

ಕಣ್ಣಿನ ಸೋಂಕು: ಬೇಸಿಗೆ ಕಾಲದಲ್ಲಿ ಉಂಟಾಗುವ ಬಿಸಿಲಿನ ತಾಪ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದಲ್ಲ. ಇದರಿಂದ ಸೋಂಕು ಹರಡುವ ಅಪಾಯ ಇರುತ್ತದೆ. ಪ್ರಕಾಶಮಾನವಾದ ಸೂರ್ಯನ ಬೆಳಕು ಕಣ್ಣಿನ ಸಮಸ್ಯೆ ಉಂಟುಮಾಡುತ್ತದೆ. ಬಿಸಿಲಿನಲ್ಲಿ ಹೋಗುವಾಗ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಕನ್ನಡಕ ಧರಿಸಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಬೇಕು.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಸಿಗೆಯ ಆರೋಗ್ಯ: ಉರಿ ಬಿಸಿಲು ಹೃದಯಾಘಾತಕ್ಕೂ ಕಾರಣ ಆಗ್ತಿದೆ, ಅಪಾಯ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

https://newsfirstlive.com/wp-content/uploads/2024/04/HEAT-WAVE-2.jpg

Load More