ಕಾಂಗ್ರೆಸ್ನ ಈ ಅಭ್ಯರ್ಥಿ ಶ್ರೀಮಂತ ವ್ಯಕ್ತಿ ಅಂದ್ರೆ ನಂಬ್ತೀರಾ?
ಒಂದಲ್ಲಾ ಎರಡಲ್ಲಾ, ಬರೋಬ್ಬರಿ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಗೊತ್ತಾ?
ಮೊದಲ ಹಂತದ ಚುನಾವಣೆಯಲ್ಲಿ 10 ಮಂದಿ ಅಭ್ಯರ್ಥಿಯ ಆಸ್ತಿ ಶೂನ್ಯ!
ದೇಶದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅತ್ಯಂತ ಶ್ರೀಮಂತ್ರ ಮತ್ತು ಬಡ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ 716 ಕೋಟಿ ಮೌಲ್ಯದಿಂದ ಹಿಡಿದು ಬರೀ 320 ಮೌಲ್ಯದ ಆಸ್ತಿಯಿರುವ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.
ಶುಕ್ರವಾರದಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ 1625 ಅಭ್ಯರ್ಥಿಗಳ ಪೈಕಿ 1618 ಅಭ್ಯರ್ಥಿಗಳನ್ನು ವಿಶ್ಲೇಷಿಸಿದೆ. ಅವರಲ್ಲಿ 10 ಮಂದಿ ತಮ್ಮ ಆಸ್ತಿ ಶೂನ್ಯ ಎಂದು ಘೋಷಿಸಿದ್ದಾರೆ.450 ಅಭ್ಯರ್ಥಿಗಳು ಅಂದರೆ ಒಟ್ಟು ಶೇ28ರಷ್ಟು ಮಂದಿ 1 ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ.
ಅತಿ ಶ್ರೀಮಂತ ಅಭ್ಯರ್ಥಿಗಳು
1) ಮಧ್ಯಪ್ರದೇಶದ ಚಿಂದ್ವಾರದ ಕಾಂಗ್ರೆಸ್ ಅಭ್ಯರ್ಥಿ ನಕುಲ್ ನಾಥ್ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 716 ಕೋಟಿ ಆಸ್ತಿಯನ್ನು ಇವರು ಹೊಂದಿದ್ದಾರೆ.
2) ಎಐಎಡಿಎಂಕೆ ಅಶೋಕ್ ಕುಮಾರ್ ಅವರು 662 ಕೋಟಿ ಆಸ್ಥಿಯನ್ನು ಘೋಷಿಸುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇವರು ತಮಿಳುನಾಡಿಮ ಈರೋಡ್ನಿಂದ ಸ್ಪರ್ಧಿಸುತ್ತಿದ್ದಾರೆ.
3) ಮೂವರೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ದೇವನಾಥ್ನ್ ಯಾದವ್ ಗುರುತಿಸಿಕೊಂಡಿದ್ದಾರೆ. ಸುಮಾರು 304 ಕೋಟಿ ಆಸ್ತಿ ಹೊಂದಿದ್ದಾರೆ. ಇವರು ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
4) ಉತ್ತರಾಖಂಡದ ತೆಹ್ರಿ ಗರ್ಲಲ್ನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಾಲಾ ರಾಜ್ಯ ಲಕ್ಷ್ಮೀ ಶಾ ಅವರು 206 ಕೋಟಿ ಮೌಲ್ಯದ ಆಸ್ಥಿ ಹೊಂದುವ ಮೂಲಕ 4ನೇ ಸ್ಥಾನದಲ್ಲಿದ್ದಾರೆ.
5) ಉತ್ತರ ಪ್ರದೇಶದ ಸಹರಾನ್ಪುರದಿಂದ ಸ್ಪರ್ಧಿಸುತ್ತಿರುವ ಬಿಎಸ್ಪಿಯ ಮಜೀದ್ ಅಲಿ 159 ಕೋಟಿ ಆಸ್ತಿಯನ್ನು ಹೊಂದುವ ಮೂಲಕ 5ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: VIDEO: ಜಪಾನ್ ಸುತ್ತಾಟ.. ಸ್ನೇಹಿತರೊಂದಿಗೆ ತುಂಟಾಟ.. ಯೂಟ್ಯೂಬ್ನಲ್ಲಿ ವ್ಲಾಗ್ ಹರಿಬಿಟ್ಟ ರಶ್ಮಿಕಾ
ಇನ್ನು ತಮಿಳುನಾಡಿದ ತೂತುಕುಡಿಯ ಸ್ವತಂತ್ರ ಅಭ್ಯರ್ಥಿ ಫೊನ್ ರಾಜ್ ಕೆ 320 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು ಮಹಾರಾಷ್ಟ್ರದ ರಾಮ್ಟೆಕ್ ಕ್ಷೇತ್ರ ಮತ್ತು ಚೆನ್ನೈ ಉತ್ತರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳಾದ ಕಾರ್ತಿಕ್ ಮತ್ತು ಸೂರ್ಯಮುತ್ತು 500 ಕೋಟಿ ಆಸ್ತಿ ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ