ನೇಹಾ ಕೊಲೆಯನ್ನು ಖಂಡಿಸಿದ ಸ್ಯಾಂಡಲ್ವುಡ್ ತಾರೆಯರು
ನ್ಯಾಯಕ್ಕಾಗಿ ಮೊರೆ ಇಟ್ಟ ಡಿಂಪಲ್ ಕ್ವೀನ್ ಮತ್ತು ನಟ ಧ್ರುವ ಸರ್ಜಾ
ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ ಎಂದ ರಚಿತಾ ರಾಮ್
ಬದುಕಿ ಬಾಳಬೇಕಾಗಿದ್ದ 23 ವರ್ಷದ ನೇಹಾ ಸ್ನೇಹಿತ ಫಯಾಜ್ ಕೈಯಾರೆ ಸಾವನ್ನಪ್ಪಿದ್ದಾಳೆ. ಕಾಲೇಜು ಆವರಣದಲ್ಲೇ ಉಸಿರುಚೆಲ್ಲಿದ್ದಾಳೆ. ಈಕೆ ಸಾವಿಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಸ್ಯಾಂಡಲ್ವುಡ್ ತಾರೆಯರೂ ಸಹ ಈ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ ರಚಿತಾ ರಾಮ್ ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೇಹಾ ಫೋಟೋ ಹಂಚುವ ಮೂಲಕ ನ್ಯಾಯಕ್ಕಾಗಿ ಕೂಗೆತ್ತಿದ್ದಾರೆ.
ಜಾತಿ, ಧರ್ಮ ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ. ಸರ್ಕಾರಕ್ಕೆ ನನ್ನ ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ #Wewantjustice ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: ಉಪ್ಪು ತಿಂದವನು ನೀರು ಕುಡಿಯಲೇ ಬೇಕು.. ಫಯಾಜ್ ಶಿಕ್ಷೆಯ ಬಗ್ಗೆ ತಾಯಿ ಮುಮ್ತಾಜ್ ಏನಂದ್ರು?
ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು 🙏
ಜೈ ಆಂಜನೇಯ 🙏 pic.twitter.com/z1gkJkEETU— Dhruva Sarja (@DhruvaSarja) April 19, 2024
ನಟ ಧ್ರುವ ಸರ್ಜಾ ಕೂಡ ನೇಹಾ ಹತ್ಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ. ಕ್ಯಾಂಪಸ್ನಲ್ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ. ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು. ಹಾಗೂ ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ