ಮಿಸ್ಟಿರಿಯಸ್ ಶಾಟ್ಸ್ ಬಾರಿಸೋದ್ರಲ್ಲಿ ಪಂಟರ್ಸ್
ಆಫ್ರಿಕನ್ ಎಬಿಡಿನಾ? ಇಂಡಿಯನ್ ಸೂರ್ಯನಾ?
ಇನೋವೇಟೆಡ್ ಶಾಟ್ಸ್ಗೆ ಇವರೇ ಕೇರ್ ಆಫ್ ಅಡ್ರೆಸ್
ಎಬಿ ಡಿವಿಲಿಯರ್ಸ್, ಸೂರ್ಯಕುಮಾರ್ ಯಾದವ್.. ಇವರಿಬ್ಬರು ಬ್ಯಾಟಿಂಗ್ಗಿಳಿದ್ರೆ ಸಾಕು, ಎದುರಾಳಿ ಬೌಲರ್ಗಳ ಎದೆಯಲ್ಲಿ ನಡುಕ ಶುರುವಾಗುತ್ತೆ. ಫೀಲ್ಡಿಂಗ್ ಸೆಟ್ ಮಾಡೋಕಾಗದೇ ಕ್ಯಾಪ್ಟನ್ ತಲೆ ಚಚ್ಚಿಕೊಳ್ಳಬೇಕಾಗುತ್ತೆ. ಇವರ ಆರ್ಭಟ ಶುರುವಾದ್ರೆ, ಎದುರಾಳಿಗಳ ಕಥೆ ಅಯೋಮಯವಾಗುತ್ತೆ. ಇದೀಗ ಇವರಿಬ್ಬರ ಮಧ್ಯೆ ಫೈಟ್ ಶುರುವಾಗಿದೆ. ಪ್ರಶ್ನೆ ಇಷ್ಟೇ. ಇವರಿಬ್ಬರಲ್ಲಿ ಯಾರು ರಿಯಲ್ ಮಿಸ್ಟರ್ 360 ಅನ್ನೋದು.
ಇದನ್ನೂ ಓದಿ:INSPIRING: ಹಳಿ ತಪ್ಪಿದ್ದ SRHಗೆ ಹೊಸ ದಾರಿ ತೋರಿಸಿದ ದಂಡನಾಯಕ, ಕಮ್ಮಿನ್ಸ್ ಯಶಸ್ಸಿನ ರೋಚಕ ಸ್ಟೋರಿ..!
ಎಬಿ ಡಿವಿಲಿಯರ್ಸ್.. ಸೂರ್ಯಕುಮಾರ್ ಯಾದವ್, ಇಬ್ಬರ ಆಟ ನೋಡುವುದೇ ಒಂದು ಅದ್ಭುತ. ಪರಿಸ್ಥಿತಿ ಯಾವುದೇ ಇರಲಿ, ಬಿರುಸಿನ ಬ್ಯಾಟಿಂಗ್ ಆಡಿ ಸೈ ಎನಿಸಿಕೊಳ್ಳುತ್ತಾರೆ. ಇವರಿಬ್ರು ಕ್ರೀಸ್ನಲ್ಲಿದ್ದಷ್ಟು ಹೊತ್ತು ಬೌಲರ್ಗಳಿಗೆ ನೆಮ್ಮದಿಯಿಲ್ಲ. ರಣ ತಂತ್ರವನ್ನು ಹೆಣೆದು ಹೆಣೆದು ಎದುರಾಳಿ ಪಡೆ ಸುಸ್ತಾಗ್ತಾರೆ. ಎಂತದ್ದೇ ಎಸೆತವಿರಲಿ ಬೌಂಡರಿ, ಸಿಕ್ಸರ್ಗಳ ಸಿಡಿಸಿ ನೋಡು ನೋಡುತ್ತಿದ್ದಂಗೆ ಪಂದ್ಯದ ಗತಿಯನ್ನ ಬದಲಿಸಿ ಬೀಡ್ತಾರೆ.
ಇನೋವೇಟಿವ್ ಶಾಟ್ಸ್ಗೆ ಇವರಿಬ್ಬರೇ ಬಾಸ್..!
ಇನೋವೇಟಿವ್ ಶಾಟ್ಸ್ ಬಾರಿಸೋದ್ರಲ್ಲಿ ಎಬಿಡಿ ಹಾಗೂ ಸೂರ್ಯ ಎತ್ತಿದ ಕೈ. ಎಂಥಹ ಚೆಂಡನ್ನಾಗಲಿ ಸರಾಗವಾಗಿ ಸಿಕ್ಸರ್ಗೆ ಅಟ್ಟುವ ಕಲೆಗಾರಿಕೆ ಹೊಂದಿರುವ ಇವರಲ್ಲಿ ಕೆಲ ಸ್ಪೆಷಲ್ ಶಾಟ್ಸ್ ಇವೆ. ಇದೀಗ ಇವರಿಬ್ಬರ ನಡುವೆ ಯಾರು ರಿಯಲ್ ಮಿಸ್ಟರ್ 360 ಎಂಬ ಪ್ರಶ್ನೆ ಉದ್ಭವಿಸಿದೆ. ಕ್ರಿಕೆಟ್ ಜಗತ್ತಿನ ಮಿಸ್ಟರ್ 360, ಅಂದ್ರೆ ನೆನಪಾಗೋದೇ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್. ಅಬ್ರಾಂಹಂ ಬೆಂಜಮಿನ್ ಡಿವಿಲಿಯರ್ಸ್.. ಈತನ ಬ್ಯಾಟಿಂಗ್ ನೋಡೋದೆ ಒಂದು ಹಬ್ಬ. ಅಷ್ಟದಿಕ್ಕೂಗಳಿಗೂ ಬೌಲ್ನ ದಿಗ್ಧದರ್ಶನ ಮಾಡಿಸ್ತಿದ್ದ ಈತನ ಪರಾಕ್ರಮಕ್ಕೆ ಮರುಳಾಗದವರೇ ಇಲ್ಲ.
ಇದನ್ನೂ ಓದಿ: ನೇಹಾ ಹಿರೇಮಠ್ ಕೊಲೆ ಕೇಸ್; ರಾಜ್ಯದ ಕ್ಷಮೆ ಕೇಳಿ ಗಳಗಳನೇ ಕಣ್ಣೀರಿಟ್ಟ ಆರೋಪಿ ಫಯಾಜ್ ತಾಯಿ
ಎಬಿಡಿ ಫೀಲ್ಡ್ಗೆ ಎಂಟ್ರಿಕೊಡ್ತಿದ್ರೆ ಅವತ್ತು ಬೌಲರ್ಸ್ಗೆ ಮಾರಿಹಬ್ಬ ಅಂತಾನೇ ಹೇಳಲಾಗ್ತಿತ್ತು. 360 ಡಿಗ್ರಿಯಲ್ಲಿ ಸ್ಟೇಡಿಯಂನ ಮೂಲೆಮೂಲೆಗೂ ಬಾಲನ್ನ INTRODUCE ಮಾಡ್ತಿದ್ದ ABD, ಕ್ರಿಕೆಟ್ ಲೋಕದ ಎಲ್ಲಾ ಕ್ರಿಕೆಟ್ ಶಾಟ್ಗಳನ್ನೂ ಆಡಿದ ಏಕೈಕ ಆಟಗಾರ ಆನಿಸಿಕೊಂಡಿದ್ರು. ಹೀಗಾಗಿ ಯಾರೂ ABDನ ಟಚ್ ಮಾಡೋಕೆ ಸಾಧ್ಯನೇ ಇಲ್ಲ ಎನ್ನಲಾಗಿತ್ತು. ಈಗ ಎಬಿಡಿಯನ್ನೂ ನಮ್ಮ ಸೂರ್ಯಕುಮಾರ್ ಮೀರಿಸಿದ್ದಾರೆ.
ಸೂರ್ಯ ಕುಮಾರ್ ರಿಯಲ್ ಮಿಸ್ಟರ್ 360ನಾ?
ಥೇಟ್ ಎಬಿಡಿಯಂತೆ ಮೈದಾನದ ಅಷ್ಟದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋ ಮತ್ತೊಬ್ಬ ಆಟಗಾರ ಅಂದ್ರೆ ಅದು ನಮ್ಮ ಭಾರತದ ಸೂರ್ಯಕುಮಾರ್ ಯಾದವ್. ಯಾವುದೇ ಸ್ಟೇಡಿಯಂನಲ್ಲಾದರೂ ಸರಿ, ಬ್ಯಾಟಿಂಗ್ನಲ್ಲಿ ಬಿರುಗಾಳಿ ಎಬ್ಬಿಸುವ ಪರಾಕ್ರಮಿ.. ramp shot, supla shot, ಸ್ವೀಪ್ ಶಾಟ್ಸ್ ಸೂರ್ಯಕುಮಾರ್ ಯಾದವ್ರ ಸ್ಪೆಷಲ್ ಶಾಟ್ಸ್ ಆಗಿವೆ. ಥೇಟ್ ಎಬಿಡಿಯಂತೆ ಬ್ಯಾಟ್ ಬೀಸಿರೋ ಸೂರ್ಯ ಅಸಾಧ್ಯವಾದ ಹೊಡೆತಗಳನ್ನೂ ಸ್ಟೇಡಿಯಂಗೆ ಲ್ಯಾಂಡ್ ಮಾಡಿ, ತನ್ನ ತಾಕತ್ತು ತೋರಿಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾಗೆ ಪೆಟ್ಟು ಕೊಡ್ತಿದೆ IPL ಇಂಪ್ಯಾಕ್ಟ್ ರೂಲ್; ಕ್ಯಾಪ್ಟನ್ ರೋಹಿತ್ ಶರ್ಮಾ ಅಪಸ್ವರ..!
ಎಬಿಡಿ ಕೂಡ ಸ್ವೀಪ್, ಫುಲ್ ಶಾಟ್, ರಿವರ್ಸ್ ಸ್ವೀಪ್ ಸೇರಿದಂತೆ ಕೆಲ ಮಿಸ್ಟಿರಿಯಸ್ ಶಾಟ್ಸ್ ಬಾರಿಸೋದ್ರಲ್ಲಿ ಪಂಟರ್ ಆಗಿದ್ರು. ಆದ್ರೆ, ಈಗ ಸೂರ್ಯ ಅವ್ರನ್ನ ಮೀರಿಸಿರೋದನ್ನ ಕ್ರಿಕೆಟ್ ಜಗತ್ತು ಒಪ್ಪಿದೆ. ಯಾಕಂದ್ರೆ, ಸೂರ್ಯ ಕುಮಾರ್ ಹೊಡೀತಾ ಇರೋ ಕೆಲ ಶಾಟ್ಗಳಿಗೆ ಹೆಸರಿಡಲು ಸಾಧ್ಯವಿಲ್ಲ. ವಿಚಿತ್ರ ಶಾಟ್ಗಳಿಗೆ ಹೆಸರು ಕ್ರಿಕೆಟ್ ಪುಸ್ತಕದಲ್ಲೂ ಇಲ್ಲ. ಕ್ರಿಕೆಟ್ ಪಂಡಿತರ ಬಳಿಯೂ ಇಲ್ಲ.
ಇದನ್ನೂ ಓದಿ: ಮಲಗಿದ್ದಲ್ಲೇ ಐವರ ಬರ್ಬರ ಹತ್ಯೆ ಪ್ರಕರಣ; ಶಂಕಿತ ಕೊಲೆ ಆರೋಪಿಗಳು ಇವರೇನಾ?
ಎಬಿಡಿಗಿಂತ ಸೂರ್ಯನೆ ಬೆಸ್ಟ್ ಅನ್ನೋ ಮಾತುಗಳನ್ನ ಕೆಲ ಕ್ರಿಕೆಟ್ ಪಂಡಿತರು ಹೇಳ್ತಿದ್ದಾರೆ. ಸೂರ್ಯನ ಮಿಸ್ಟಿರಿಯಸ್ ಹಾಗೂ ಇನೋವೇಟಿವ್ ಶಾಟ್ಗೆ ಎಲ್ಲಾ ಮರುಳಾಗಿದ್ದಾರೆ. ಪ್ರತಿ ಬಾಲ್ಗೂ ಭಿನ್ನ ವಿಭಿನ್ನ ಶಾಟ್ಸ್ ಪ್ಲೇ ಮಾಡ್ತಿರುವ ಮುಂಬೈಕರ್, ವಿಭಿನ್ನ ಆಟದ ವೈಖರಿಯಿಂದ ಮೋಸ್ಟ್ ಡೇಂಜರಸ್ ಆಗಿ ಕಾಣ್ತಿದ್ದಾರೆ. ಹೀಗಾಗಿ ಟಿ20ಯಲ್ಲಿ ಸೂರ್ಯ, ರಿಯಲ್ ಮಿಸ್ಟರ್ 360 ಅನ್ನೋ ನಿರ್ಧಾರಕ್ಕೆ ಕ್ರಿಕೆಟ್ ಲೋಕ ಬಂದಿದೆ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್