newsfirstkannada.com

ಟೀಂ ಇಂಡಿಯಾಗೆ ಪೆಟ್ಟು ಕೊಡ್ತಿದೆ IPL ಇಂಪ್ಯಾಕ್ಟ್​ ರೂಲ್; ಕ್ಯಾಪ್ಟನ್ ರೋಹಿತ್ ಶರ್ಮಾ ಅಪಸ್ವರ..!

Share :

Published April 20, 2024 at 11:34am

  ಆಟಗಾರರಿಗೆ ಅಸಲಿ ಸಾಮರ್ಥ್ಯ ಹೊರ ಹಾಕಲು ಅವಕಾಶ ಸಿಗುತ್ತಿಲ್ಲ

  ಭಾರತದ ಯುವ ಆಟಗಾರರ ಮೇಲೂ ‘ಇಂಪ್ಯಾಕ್ಟ್’ ರೂಲ್ ಎಫೆಕ್ಟ್!​

  ಟೀಮ್ ಇಂಡಿಯಾ ಪಾಲಿಗೆ ಈ ರೂಲ್​​ ಒಳ್ಳೆಯದಲ್ಲವೇ ಅಲ್ಲ, ಯಾಕೆ?

ಐಪಿಎಲ್​ನಲ್ಲಿ ಬಳಕೆಯಾಗ್ತಿರೋ ಇಂಪ್ಯಾಕ್ಟ್ ಪ್ಲೇಯರ್ ರೂಲ್. ಟೀಮ್ ಇಂಡಿಯಾಗೆ ಮಾರಕವಾಗಿದೆಯಾ?. ಈ ಒಂದು ರೂಲ್​ನಿಂದ ಟೀಮ್ ಇಂಡಿಯಾಗೆ ನಷ್ಟವಾಗ್ತಿದ್ಯಾ.? ಹೀಗೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ. ಇಷ್ಟಕ್ಕೂ ಭಾರತದ ನಾಯಕ ರೋಹಿತ್, ಈ ರೂಲ್ಸ್​​ ಸರಿಯಿಲ್ಲ ಅಂದಿರೋದ್ಯಾಕೆ.?

ಇಂಪ್ಯಾಕ್ಟ್​ ಪ್ಲೇಯರ್ ಐಪಿಎಲ್​ ಟೂರ್ನಿಗೆ ಹೊಸ ರಂಗನ್ನೇ ನೀಡಿದೆ. ಫ್ಯಾನ್ಸ್​ಗೆ ರೋಚಕ ಪಂದ್ಯಗಳ ಹಬ್ಬದೂಟ ಉಣಬಡಿಸ್ತಿದೆ. ಕೊನೆ ಕ್ಷಣದಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ಗಳಾಗಿ ಎಂಟ್ರಿ ನೀಡಿರುವ ಆಟಗಾರರು, ಪಂದ್ಯದ ಗತಿಯನ್ನೇ ಬದಲಿಸ್ತಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ತಂಡಗಳು ಬಿಗ್​ ಟಾರ್ಗೆಟ್​ ಸೆಟ್ ಮಾಡ್ತಿವೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂದು ಮೋದಿ ಮೇನಿಯಾ.. ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ನೋ ಎಂಟ್ರಿ

ಇಂಪ್ಯಾಕ್ಟ್​ ಪ್ಲೇಯರ್ ರೂಲ್​​​ನ ಇಂಪ್ಯಾಕ್ಟ್ ಐಪಿಎಲ್​ನ ರಂಗ್​ ಬದಲಿಸಿದೆ ನಿಜ. ಆದ್ರೆ, ಇದೇ ವೇಳೆ ಟೀಮ್ ಇಂಡಿಯಾ ಪಾಲಿಗೆ ವಿಲನ್ ಆಗಿಯೂ ಕಾಡ್ತಿದೆ. ಸ್ವತಃ ಟೀಮ್​ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾನೇ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ನಾನು ಈ ಇಂಪ್ಯಾಕ್ಟ್​ ಪ್ಲೇಯರ್ ರೂಲ್​ ಅಭಿಮಾನಿ ನಾನಲ್ಲ ಎಂದು ಬಹಿರಂಗವಾಗೇ ಹೇಳಿದ್ದಾರೆ.

ಕ್ರಿಕೆಟ್​ 11 ಮಂದಿ ಆಡುವ ಆಟ, 12 ಮಂದಿ ಅಲ್ಲ. ನಾನು ಇಂಪ್ಯಾಕ್ಟ್ ರೂಲ್​ ಅಭಿಮಾನಿ ಅಲ್ಲ. ಇದು ಪಂದ್ಯವನ್ನ ಬೇರೇ ಹಂತಕ್ಕೆ ಕೊಂಡೊಯ್ಯಬಹುದು. ಜನರಿಗೆ ಮನರಂಜನೆ ನೀಡಬಹುದು. ಆದ್ರೆ, ನ್ಯಾಯಯುತವಾಗಿ ನೋಡಿದ್ರೆ, ವಾಷಿಗ್ಟಂನ್ ಸುಂದರ್, ಶಿವಂ ದುಬೆ ಬೌಲಿಂಗ್ ಮಾಡಲು ಆಗ್ತಿಲ್ಲ. ಇದು ನಮಗೆ ಒಳ್ಳೆಯದಲ್ಲ.

ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ

ರೋಹಿತ್​​​ ಶರ್ಮಾ ಹೇಳ್ತಿರೋದು ಸರಿಯಾಗಿದೆ. ಟೀಮ್ ಇಂಡಿಯಾ ಪಾಲಿಗೆ ಈ ರೂಲ್​​ ಒಳ್ಳೆಯದಲ್ಲವೇ ಅಲ್ಲ. ಯಾಕೆ ಅನ್ನೋದನ್ನ ಒಂದೊಂದಾಗಿ ಎಕ್ಸ್​ಪ್ಲೈನ್ ಮಾಡ್ತೀವಿ ನೋಡಿ.

ಆಲ್​ರೌಂಡರ್​​ಗಳ ಮೇಲೆ ‘ರಾಂಗ್​ ಇಂಪ್ಯಾಕ್ಟ್​’.!

2023ರಲ್ಲಿ ಜಾರಿಗೆ ತಂದ ಈ ರೂಲ್, ಐಪಿಎಲ್​ ತಂಡಗಳ ಫ್ಲೆಕ್ಸಿಬಲಿಟಿಗೆ ಕಾರಣವಾಗ್ತಿದೆ. ಪರಿಸ್ಥಿತಿಗೆ ತಕ್ಕ ಪವರ್ ಹಿಟ್ಟರ್​, ಸ್ಪೆಷಲಿಸ್ಟ್ ಬೌಲರ್​ಗಳನ್ನ ಬಳಸಿಕೊಂಡು ಎದುರಾಳಿ ತಂಡಗಳಿಗೆ ಕೌಂಟರ್ ನೀಡ್ತಿವೆ. ಆದ್ರೆ, ಇದೇ ಇಂಪ್ಯಾಕ್ಟ್​ ರೂಲ್​ನಿಂದ ಶಿವಂ ದುಬೆ, ವಾಷಿಂಗ್ಟನ್ ಸುಂದರ್​​​​ರಂಥ ಆಲ್​ರೌಂಡರ್​ಗಳಿಗೆ ಅನ್ಯಾಯವಾಗ್ತಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಮಿಂಚಬೇಕಿದ್ದ ಶಿವಂ ದುಬೆ, ವಾಷಿಗ್ಟಂನ್​​ ಸುಂದರ್,​​ ಕೇವಲ ಬ್ಯಾಟಿಂಗ್​ ಅಥವಾ ಬೌಲಿಂಗ್​ ಒಂದಕ್ಕೆ ಸಿಮೀತ ಆಗ್ತಿದ್ದಾರೆ. ಆಟಗಾರರಿಗಿರುವ ಅಸಲಿ ಸಾಮರ್ಥ್ಯ ಹೊರ ಹಾಕಲು ಅವಕಾಶ ಸಿಗ್ತಿಲ್ಲ. ಆಟಗಾರರ ಬೆಳವಣಿಗೆಗೆ ಮಾರಕವಾಗಲಿದೆ.

ಇಂಪ್ಯಾಕ್ಟ್​ ರೂಲ್​​​ನಿಂದ ಹಾರ್ದಿಕ್​ ರಿಪ್ಲೇಸ್​ಮೆಂಟ್​ ಸಿಗ್ತಲ್ಲ.!

ಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ಆಲ್​​ರೌಂಡರ್. ಬ್ಯಾಟ್​​​​ ಹಾಗೂ ಬೌಲಿಂಗ್​ನಲ್ಲಿ ತಂಡಕ್ಕೆ ನೆರವಾಗುವ ಹಾರ್ದಿಕ್, ಟೀಮ್​​ಗೆ ಬ್ಯಾಲೆನ್ಸ್ ತರ್ತಾರೆ. ಇಂತಾ ಆಲ್​ರೌಂಡರ್​ಗೆ ಇಂದಿಗೂ ಸೂಕ್ತ ರಿಪ್ಲೇಸ್​ಮೆಂಟ್ ಆಟಗಾರ ಟೀಮ್ ಇಂಡಿಯಾಗೆ ಸಿಕ್ಕಿಲ್ಲ. ಐಪಿಎಲ್​ನಲ್ಲಿ ಇರೋ ಇಂಪ್ಯಾಕ್ಟ್​ ಪ್ಲೇಯರ್​ ಪರ್ಫೆಕ್ಟ್​ ಆಲ್​ರೌಂಡರ್​ ಹುಡುಕಾಟಕ್ಕೆ ಅವಕಾಶವನ್ನೂ ನೀಡ್ತಿಲ್ಲ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಗ್ಯಾಂಗ್​ನಿಂದ ಡೆಡ್ಲಿ ಅಟ್ಯಾಕ್​.. ಲಾಂಗ್​ನಿಂದ ಜಸ್ಟ್ ಮಿಸ್ ಆದ ರೌಡಿಶೀಟರ್​

ವಿಶ್ವವನ್ನ ಆಳ್ತಿರೋದೆ ಪೇಸ್​​​ ಆಲ್​ರೌಂಡರ್ಸ್​ ತಂಡಗಳು..!

ವಿಶ್ವ ಟಿ20 ಕ್ರಿಕೆಟ್​ನಲ್ಲಿ ಡಾಮಿನೇಟ್ ಮಾಡ್ತಿರೋದೇ ಪೇಸ್​​ ಆಲ್​ರೌಂಡರ್​​​​​​​​​​​ಗಳಿರೋ ತಂಡಗಳು. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್​ ಇಂಡೀಸ್ ತಂಡಗಳು ಟಿ20 ಕ್ರಿಕೆಟ್​​ನಲ್ಲಿ ಮೆರೆಯುತ್ತಿವೆ. ಟಿ20 ವಿಶ್ವಕಪ್​ನಲ್ಲಿ ಗೆದ್ದು ಬೀಗುತ್ತಿವೆ ಅಂದ್ರೆ, ಅದಕ್ಕೆ ಕಾರಣ ಆಯಾ ತಂಡಗಳಲ್ಲಿನ ಸೀಮ್​ ಬೌಲಿಂಗ್ ಆಲ್​​ರೌಂಡರ್​ಗ​​ಳು. ಬೆನ್ ಸ್ಟೋಕ್ಸ್, ಮಿಚೆಲ್ ಮಾರ್ಷ್​​​, ಆ್ಯಂಡ್ರೆ ರಸೆಲ್ ಸೇರಿದಂತೆ ಹಲವರಿದ್ದಾರೆ. ಬ್ಯಾಟಿಂಗ್ ಜೊತೆ ಬೌಲಿಂಗ್​ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವ ಇವರು, ತಂಡಕ್ಕೆ ಸಮತೋಲನ ತರ್ತಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ

ಆದ್ರೆ, ಐಪಿಎಲ್​ನಲ್ಲಿ ತಂದಿರೋ ಈ ಇಂಪ್ಯಾಕ್ಟ್​ ಪ್ಲೇಯರ್​ ರೂಲ್​, ಪರ್ಫೆಕ್ಟ್​ ಆಲ್​​ರೌಂಡರ್​ಗಳ ಬೆಳವಣಿಗೆಗೆ ಮತ್ತು ಹುಡುಕಾಟಕ್ಕೆ ಅಡ್ಡಿಯಾಗಿದೆ. ಇದು ಭವಿಷ್ಯದಲ್ಲಿ ಟೀಮ್​ ಇಂಡಿಯಾಗೆ ಮಾರಕವಾಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾಗೆ ಪೆಟ್ಟು ಕೊಡ್ತಿದೆ IPL ಇಂಪ್ಯಾಕ್ಟ್​ ರೂಲ್; ಕ್ಯಾಪ್ಟನ್ ರೋಹಿತ್ ಶರ್ಮಾ ಅಪಸ್ವರ..!

https://newsfirstlive.com/wp-content/uploads/2024/04/Surya_Rohit.jpg

Load More