ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಬೆಂಗಳೂರಿಗೆ ಆರು ಸೋಲು
ಹೈದರಾಬಾದ್ ವಿರುದ್ಧವೂ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಕೆಕೆಆರ್ ವಿರುದ್ಧ ನಡೆಯೋ ಪಂದ್ಯಕ್ಕೆ ಮುನ್ನ ಆರ್ಸಿಬಿಗೆ ಮತ್ತೊಂದು ಆಘಾತ
ಕಳೆದ ಮೂರು ದಿನಗಳ ಹಿಂದೆ ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಸೋಲು ಕಂಡಿತ್ತು. ಈ ಮೂಲಕ ಆರ್ಸಿಬಿ ಬ್ಯಾಕ್ ಟು ಬ್ಯಾಕ್ 6 ಪಂದ್ಯ ಸೋತಿದೆ. ಈ ಮಧ್ಯೆ ಆರ್ಸಿಬಿಗೆ ಬಿಗ್ ಶಾಕ್ ಕಾದಿದೆ.
ಹೌದು, ಮುಂಬೈ ವಿರುದ್ಧದ ವೇಳೆ ಮ್ಯಾಕ್ಸ್ವೆಲ್ಗೆ ಥಂಬ್ ಇಂಜೂರಿ ಆಗಿದೆ. ಕೈಗೆ ತೀವ್ರವಾದ ಗಾಯಗಳು ಆದ ಕಾರಣ ಮ್ಯಾಕ್ಸ್ವೆಲ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಏಪ್ರಿಲ್ 21ನೇ ತಾರೀಕು ನಡೆಯಲಿರೋ ಕೆಕೆಆರ್ ವಿರುದ್ಧ ಪಂದ್ಯದಿಂದ ಮ್ಯಾಕ್ಸಿ ಔಟ್ ಆಗಲಿದ್ದಾರೆ ಎಂದು ವರದಿಯಾಗಿದೆ.
ಸತತ 6 ಸೋಲಿನಿಂದ ಕಂಗೆಟ್ಟ ಆರ್ಸಿಬಿ ಕೆಕೆಆರ್ ವಿರುದ್ಧ ಪಂದ್ಯಕ್ಕಾಗಿ ತಂಡದಲ್ಲಿ ಭಾರೀ ಬದಲಾವಣೆ ಮಾಡೋ ಸಾಧ್ಯತೆ ಇದೆ. ಕಳೆದ 6 ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿರೋ ಸ್ಟಾರ್ ಆಲ್ರೌಂಡರ್ ಮ್ಯಾಕ್ಸಿ ಅವರು ಗಾಯಗೊಂಡ ಕಾರಣ ಕೈ ಬಿಡೋ ಸಾಧ್ಯತೆ ಇದೆ. ಇವರ ಬದಲಿಗೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ವಿಲ್ ಚಾಕ್ಸ್ಗೆ ಅವಕಾಶ ನೀಡಲಿದ್ದಾರೆ.
ಮ್ಯಾಕ್ಸ್ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್. ಇವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲ. ಹೀಗಾಗಿ ಇಂದು ಕೂಡ ಮ್ಯಾಕ್ಸಿ ಬದಲಿಗೆ ಇಂಗ್ಲೆಂಡ್ ಆಲ್ರೌಂಡರ್ ಆಗಿರುವ ವಿಲ್ ಜ್ಯಾಕ್ಸ್ ಆಯ್ಕೆ ಮಾಡಬಹುದು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್