ನಿನ್ನೆಯ ಪಂದ್ಯದಲ್ಲಿ ಆರ್ಸಿಬಿಗೆ ವಿರೋಚಿತ ಸೋಲು
ಕೊಹ್ಲಿ ಔಟ್ ಅಲ್ಲದಿದ್ದರೂ ಔಟ್ ಎಂದು ತೀರ್ಪು ಕೊಟ್ಟ ಅಂಪೈರ್
ಅಂಪೈರ್ ತೀರ್ಪಿನ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ ಕೊಹ್ಲಿ
ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಅಂಪೈರ್ ಅವರ ವಿವಾದಾತ್ಮಕ ತೀರ್ಪು ಭಾರೀ ಚರ್ಚೆಗೆ ಕಾರಣವಾಗ್ತಿದೆ. ಮೈದಾನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದ ಕಿಂಗ್ ಕೊಹ್ಲಿ, ಪೆವಿಲಿಯನ್ಗೆ ಬಂದ ಮೇಲೆಯೂ ಅಂಪೈರ್ ವಿರುದ್ಧ ಕಿಡಿ ಕಾರುತ್ತ ಕೂತಿದ್ದರು. ಇದೀಗ ಪಂದ್ಯ ಮುಗಿದ ಮೇಲೆಯೂ ಕೊಹ್ಲಿ ಅಂಪೈರ್ ಜೊತೆ ಮಾತುಕತೆ ನಡೆಸಿ, ತೀರ್ಪು ಸರಿ ಇಲ್ಲ ಎಂದು ಹೇಳಿದ್ದಾರೆ. ಆ ವಿಡಿಯೋ ಇದಿಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Virat Kohli had a chat with the umpire after the match. pic.twitter.com/mya45sbKW2
— Mufaddal Vohra (@mufaddal_vohra) April 21, 2024
ನಿನ್ನೆ ಆಗಿದ್ದೇನು..?
ಕೋಲ್ಕತ್ತಾ ಈಡನ್ ಗಾರ್ಡೆನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಕೆಆರ್ ಬರೋಬ್ಬರಿ 223 ರನ್ ಬಿಗ್ ಟಾರ್ಗೆಟ್ ಕೊಟ್ಟಿತ್ತು. ಕೆಕೆಆರ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಜೋಡಿ ಓಪನಿಂಗ್ ಮಾಡಿತ್ತು. ಅಗ್ರೆಸ್ಸಿವ್ ಆಗಿಯೇ ಬ್ಯಾಟಿಂಗ್ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್ನಲ್ಲಿ 2 ಸಿಕ್ಸರ್, 1 ಫೋರ್ ಸಮೇತ 18 ರನ್ ಚಚ್ಚಿ ಔಟಾದರು.
ಇದನ್ನೂ ಓದಿ:ಸೇಡು ತೀರಿಸಿಕೊಂಡ ಗುಜರಾತ್ ಟೈಟಾನ್ಸ್; ಹೀರೋ ಆದ ಸಾಯಿ ಕಿಶೋರ್
ಕೊಹ್ಲಿ ಔಟಾದ ದೊಡ್ಡ ಹೈಡ್ರಾಮ ನಡೆದು ಹೋಗಿದೆ. ಹರ್ಷಿತ್ ರಾಣಾ ಎಸೆದ ಬಾಲ್ನಲ್ಲಿ ಕೊಹ್ಲಿ ಕ್ಯಾಚ್ ಕೊಟ್ಟರು. ಕೊಹ್ಲಿ, ಹರ್ಷಿತ್ ರಾಣಾ ಎಸೆದದ್ದು ನೋ ಬಾಲ್ ಎಂದರೂ ಅಂಪೈರ್ ಕೇಳಲಿಲ್ಲ. ಬದಲಿಗೆ ಔಟ್ ಎಂದು ತೀರ್ಪು ನೀಡಿದ್ದರು. ಬಳಿಕ ಕೊಹ್ಲಿ ಅಂಪೈರ್ ಬಳಿಗೆ ಹೋಗಿ ಜಗಳ ಮಾಡಿದ್ದಾರೆ. ಈ ಜಗಳದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಷ್ಟೇ ಅಲ್ಲ ಡ್ರೆಸ್ಸಿಂಗ್ ರೂಮ್ಗೆ ಹೋಗುವಾಗ ಕೊಹ್ಲಿ ಕಾಲಲ್ಲಿ ಡಸ್ಟ್ಬಿನ್ಗೆ ಒದ್ದು ಹೊರಟರು. ಇನ್ನು ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ 1 ರನ್ಗಳ ವಿರೋಚಿತ ಸೋಲನ್ನು ಕಂಡಿತು.
ಇದನ್ನೂ ಓದಿ:ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕಿ ದಾರುಣ ಸಾವು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್