ಆರ್ಸಿಬಿ ಟೀಮ್, ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆದ ರೋಚಕ ಪಂದ್ಯ
ವಿವಾದಾತ್ಮಕ ತೀರ್ಪಿಗೆ ಬಲಿಯಾದ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಔಟ್ ಬೆನ್ನಲ್ಲೇ ಆರ್ಸಿಬಿ ಟೀಮ್ಗೆ ಮತ್ತೊಂದು ಮಹಾಮೋಸ
ಇತ್ತೀಚೆಗೆ ಕೋಲ್ಕತ್ತಾದ ಈಡನ್ ಗಾರ್ಡೆನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ 1 ರನ್ನಿಂದ ಸೋತಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ಗೆ 222 ರನ್ ಗಳಿಸಿ ಆರ್ಸಿಬಿಗೆ ಸವಾಲಿನ ಮೊತ್ತ ಟಾರ್ಗೆಟ್ ನೀಡಿತ್ತು. ಈ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ತಂಡ ನಿಗದಿತ 20 ಓವರ್ಗೆ 10 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ 1 ರನ್ನಿಂದ ರೋಚಕ ಸೋಲು ಕಂಡಿದೆ.
ಇಷ್ಟಾದ್ರೂ ವಿರಾಟ್ ಕೊಹ್ಲಿ ಅವರದ್ದು ಔಟೋ ಇಲ್ಲವೋ? ಎಂಬ ಚರ್ಚೆ ನಡೆಯುತ್ತಿದೆ. ಕೊಹ್ಲಿ ಔಟ್ ಆದ ರೀತಿ ವಿವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ಸುಯಶ್ ಪ್ರಭುದೇಸಾಯಿ ಸಿಡಿಸಿದ ಸಿಕ್ಸ್ ಅನ್ನು ಫೋರ್ ನೀಡಿ ಮತ್ತೊಂದು ವಿವಾದ ಸೃಷ್ಟಿಸಿದ್ರು.
I’m not thinking about Virat’s dismissal nor Narine’ No -ball… I need an answer on suyash prabhudesai’s six which was eventually given as four…This should not be sidelined by taking spotlight on virat’s dismissal @IPL @mufaddal_vohra @CricCrazyJohns pic.twitter.com/enKpOoO5cB
— Jaffrey Kiran (@JaffreyKiran1) April 22, 2024
ವಿರಾಟ್ ಕೊಹ್ಲಿ ಔಟಾದ ಬಾಲ್ ನೋ ಬಾಲ್ ಆಗಿತ್ತು ಅಂತ ಎಲ್ಲರಿಗೂ ಗೊತ್ತಿದೆ. ಇದರ ಜತೆಗೆ ಆರ್ಸಿಬಿಗೆ ಮತ್ತೊಂದು ಮಹಾಮೋಸ ಆಗಿದೆ. ಪ್ರಭುದೇಸಾಯಿ ಹೊಡೆದ ಸಿಕ್ಸರ್ನ ಅಂಪೈರ್ ಯಾವುದೇ ಪರಿಶೀಲನೆ ನಡೆಸದೇ ಫೋರ್ ಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಬಲಿ; ಅಂಪೈರ್ ವಿರುದ್ಧ ಆಕ್ರೋಶ ಹೊರಹಾಕಿದ ಎಬಿಡಿ ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್