ಹೊಡಿಬಡಿ ಆಟದಿಂದ ಹೆಸರು ಮಾಡುತ್ತಿರೋ ಯಂಗ್ಸ್ಟರ್ಸ್
ಅಭಿಷೇಕ್ ಶರ್ಮಾ ಅಖಾಡಕ್ಕಿ ಇಳಿದ್ರೆ ಸಾಕು ಬೌಲರ್ಸ್ಗೆ ಬೇಸರ
ಟಿ20 ಮಾಸ್ ಮಹಾರಾಜರನ್ನೆ ಯಂಗ್ಸ್ಟರ್ಸ್ನಿಂದ ಓವರ್ ಟೇಕ್
ಅಬ್ಬಾಬ್ಬ, ಇದಪ್ಪಾ ಚಿಂದಿ ಆಟ ಅಂದ್ರೆ. ಅಸಲಿಗೆ ಟಿ20 ಕ್ರಿಕೆಟ್ಗೆ ಬೇಕಿರೋದೆ ಇದೇ ಆಟ. ಕಣ್ಣು ಕುಕ್ಕಿಸುವ ಸ್ಟ್ರೈಕ್ರೇಟ್. ಅದ್ಭುತ ಎನ್ನಿಸುವ ಫೈಟಿಂಗ್ ಸ್ಪಿರಿಟ್. ಭಯಾನಕ ಆಟದ ಮೂಲಕ ಟಿ20 ಡಾನ್ ಕಿಂಗ್ ಕೊಹ್ಲಿ ಹಾಗೂ ರೋಹಿತ್ರನ್ನ ಓವರ್ ಮಾಡಿದ್ದಾರೆ. ಅಷ್ಟಕ್ಕೂ ಆ ಆಟಗಾರರು ಯಾರು?.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್ನ ಸೂಪರ್ ಸ್ಟಾರ್ಗಳು. ದಶಕಕ್ಕೂ ಅಧಿಕ ಕಾಲ ಟಿ20 ಕ್ರಿಕೆಟ್ನಲ್ಲಿ ಸಾಮ್ರಾಟರಾಗಿ ಮೆರೆದಾಡ್ತಿದ್ದಾರೆ. ಇವರ ಅಟ್ಯಾಕಿಂಗ್ ಸ್ಟೈಲ್, ಬೌಲರ್ಸ್ ದಂಡಿಸೋ ಪರಿ ಅದ್ಭುತ. ಚುಟುಕು ದುನಿಯಾದಲ್ಲಿ ಕೊಹ್ಲಿ-ರೋಹಿತ್ ಅಂದ್ರೆ ಎಂಟರ್ಟೈನ್ಮೆಂಟ್, ಎಂಟರ್ಟೈನ್ಮೆಂಟ್ ಅಂದ್ರೆ ಕೊಹ್ಲಿ-ರೋಹಿತ್ ಅನ್ನೋ ಮಾತಿತ್ತು. ಆದ್ರೀಗ ಇಂತಹ ಟಿ20 ಮಾಸ್ ಮಹಾರಾಜರನ್ನೆ ಯಂಗ್ಸ್ಟರ್ಸ್ ಓವರ್ ಟೇಕ್ ಮಾಡ್ತಿದ್ದಾರೆ. ತಮ್ಮ ವಿಧ್ವಂಸಕ ಆಟದಿಂದ ದಿಗ್ಗಜರನ್ನ ನೇಪಥ್ಯಕ್ಕೆ ಸರಿಸುತ್ತಿರೋ ಆ ಭಲೇ ಯಂಗ್ಸ್ಟರ್ಗಳನ್ನ ತೋರಿಸ್ತೀವಿ ನೋಡಿ.
ಇದನ್ನೂ ಓದಿ: ವಿಧಿಯ ಆಟ ಘೋರ! ಮುದ್ದಾದ ಕಂದಮ್ಮನ ಮೇಲೆ ಕಾರು ಹರಿಸಿದ ಅಪ್ಪ.. ಮಗು ಸಾವು
ಅಭಿಷೇಕ್ ಶರ್ಮಾ ಅಲ್ಲ, ರೌದ್ರಾಭಿಷೇಕ ಶರ್ಮಾ..!
17ನೇ ಸೀಸನ್ನಲ್ಲಿ ಹೈದ್ರಾಬಾದ್ ಅಭಿಷೇಕ್ ಶರ್ಮಾ ಬೌಲರ್ಗಳ ಮಾರಣಹೋಮ ನಡೆಸ್ತಿದ್ದಾರೆ. ಸ್ವಲ್ಪವೂ ಭಯ ಅನ್ನೋದೆ ಇಲ್ಲ. ಮೊದಲ ಬಾಲ್ನಿಂದಲೇ ದಂಡಿಸೋದೊಂದೆ ಗೊತ್ತು. 215ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಿರೋ ಈ ಟೆರರ್ ಬ್ಯಾಟ್ಸ್ಮನ್ 7 ಪಂದ್ಯದಿಂದ 257 ರನ್ ಚಚ್ಚಿದ್ದಾರೆ. ಈ ರೌದ್ರವತಾರ ಎದುರಾಳಿ ಪಾಳಯದಲ್ಲಿ ಇನ್ನಿಲ್ಲದ ನಡುಕು ಹುಟ್ಟಿಸಿದೆ.
ಸಿಕ್ಕಾಪಟ್ಟೆ ವೈಲೆಂಟ್ ಅಶುತೋಷ್ ಶರ್ಮಾ..!
ಅಶುತೋಷ್ ಶರ್ಮಾ ಒಂದು ತಿಂಗಳ ಹಿಂದೆ ಯಾರಿಗೂ ಗೊತ್ತಿರ್ಲಿಲ್ಲ. ಆದ್ರೀಗ ಇದೇ ಫೈರಿ ಬ್ಯಾಟ್ಸ್ಮನ್ ಎಲ್ಲರ ಮನೆ ಮಾತಾಗಿದ್ದಾರೆ. ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಬಿರುಸಿನ ಆಟವಾಡ್ತಿದ್ದಾರೆ. ಆಡಿದ ಐದೇ ಪಂದ್ಯವಾದ್ರು 189.29ರ ಇಂಪ್ರೆಸ್ಸಿವ್ ಸ್ಟ್ರೈಕ್ರೇಟ್ನಲ್ಲಿ 159 ರನ್ ಕೊಳ್ಳೆ ಹೊಡೆದಿದ್ದಾರೆ. ಏಕಾಂಗಿಯಾಗಿ ಪಂದ್ಯ ಗೆಲ್ಲಿಸೋ ಅಶುತೋಷ್, ಭಾರತ ತಂಡದ ಫ್ಯೂಚರ್ ಸ್ಟಾರ್ ಆಗಿ ಅಂತ ಬಿಂಬಿತವಾಗಿದ್ದಾರೆ.
ಸಿಡಿಗುಂಡಿನ ಶಶಾಂಕ್ ಆಟಕ್ಕೆ ಉಘೇ ಉಘೇ..!
ಶಶಾಂಕ್ ಸಿಂಗ್ ತಪ್ಪಾದ ಬಿಡ್ನಿಂದ ಪಂಜಾಬ್ ಪಾಲಾದ್ರು. ಆದ್ರಿಂದು ಇದೇ ಶಶಾಂಕ್ ಐಪಿಎಲ್ನಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಶಶಾಂಕ್ ಅಂಗಳಕ್ಕಿಳಿದ್ರೆ ಸಾಕು ಶಿಳ್ಳೆ ಚಪ್ಪಾಳೆಗಳ ಝೇಂಕಾರ ಮೊಳಗುತ್ತೆ. ಕ್ರೇಜಿ 168.10ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ, ಫ್ಯಾನ್ಸ್ ಅಸಲಿ ಮರಂಜನೆದೂಟ ಉಣಬಡಿಸ್ತಿದ್ದಾರೆ.
ಇದನ್ನೂ ಓದಿ: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಹೋರಾಟಕ್ಕೆ ಸಜ್ಜು.. ಮೋದಿ ಸರ್ಕಾರದ ವಿರುದ್ಧ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್ ಸಮರ
ಪರಾಗ್ ಅಂದ್ರೆ ಫಯರ್, ಕಾಲಿಟ್ರೆ ರನ್ ಮಳೆ..!
ಕಳೆದು ಐದು ಸೀಸನ್ಗಳಿಂದ ಪರಾಗ್ ಆಟ ಅಷ್ಟಕಷ್ಟೆ. ಆದ್ರೆ ಈ ಸಲ ಪರಾಗ್ ಹೊಸ ಅವತಾರವನ್ನೇ ತಾಳಿದ್ದಾರೆ. ಆರೆಂಜ್ ಕ್ಯಾಪ್ಗಾಗಿ ಕಿಂಗ್ ಕೊಹ್ಲಿ ಹಾಗೂ ಪರಾಗ್ ನಡುವೆ ಫೈಟ್ ಏರ್ಪಟ್ಟಿದೆ. 318 ರನ್ ಗಳಿಸಿ ಕೊಹ್ಲಿಗಷ್ಟೇ ಅಲ್ಲದೇ ಬೌಲರ್ಗಳಿಗೂ ಭಯ ಹುಟ್ಟಿಸಿದ್ದಾರೆ. 161.42 ಸ್ಟ್ರೈಕ್ರೇಟ್, 22 ಸಿಕ್ಸ್ ಪರಾಗ್ ಎಷ್ಟು ಡೇಂಜರ್ ಅನ್ನೋದೆ ಸಾಕ್ಷಿ.
ಎನಿವೇ.. ಮೇಲಿನ ಫೈರಿ ಯಂಗ್ಸ್ಟರ್ಸ್ ಐಪಿಎಲ್ನ ಫಸ್ಟ್ಹಾಫ್ನಲ್ಲಿ ಧೂಳೆಬ್ಬಿಸಿದ್ದಾರೆ. ಸೆಕೆಂಡ್ ಹಾಫ್ನಲ್ಲಿ ಇದೇ ದರ್ಬಾರ್ ನಡೆಸಿದ್ರೆ ಕಿಂಗ್ ಕೊಹ್ಲಿ, ಹಿಟ್ಮ್ಯಾನ್ ಜಪ ಮತ್ತಷ್ಟು ಗೌಣವಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ