ಆಕಾಶದಲ್ಲಿ 2 ಹೆಲಿಕಾಪ್ಟರ್ ಡಿಕ್ಕಿ ಆಗ್ತಿರುವುದು ಭಯಾನಕವಾಗಿದೆ
90ನೇ ವಾರ್ಷಿಕೋತ್ಸವಕ್ಕಾಗಿ ಪೂರ್ವಾಭ್ಯಾಸದ ವೇಳೆ ಅವಘಡ
ಮೃತಪಟ್ಟವರ ಗುರುತಿಗಾಗಿ ರಕ್ಷಣಾ ಪಡೆಯಿಂದ ತನಿಖೆ ಚುರುಕು
ರಾಯಲ್ ಮಲೇಷ್ಯಾ ನೇವಿಯ ಎರಡು ಹೆಲಿಕಾಪ್ಟರ್ಗಳು ಆಗಸದಲ್ಲಿ ಡಿಕ್ಕಿಯಾದ ಪರಿಣಾಮ ಒಳಗಿದ್ದ 10 ಸಿಬ್ಬಂದಿ ಸಾವನ್ನಪ್ಪಿದ್ದಾರೆ. 2 ಹೆಲಿಕಾಪ್ಟರ್ಗಳು ಡಿಕ್ಕಿಯಾಗುತ್ತಿರುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೆಲವೇ ಕ್ಷಣದಲ್ಲಿ ನೆಲಕ್ಕೆ ಬಿದ್ದ ಕಾಪ್ಟರ್ಸ್ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.
ಮಲೇಷ್ಯಾದ ಲುಮುಟ್ ಪಟ್ಟಣದ ನೌಕಾ ನೆಲೆಯಲ್ಲಿ ಹೆಲಿಕಾಪ್ಟರ್ಗಳು ಅಭ್ಯಾಸ ನಡೆಸುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ. ಪರಿಣಾಮ ಎರಡು ಹೆಲಿಕಾಪ್ಟರ್ನಲ್ಲಿದ್ದ 10 ಸಿಬ್ಬಂದಿ ಆಗಸದಲ್ಲೇ ಉಸಿರು ಚೆಲ್ಲಿದ್ದಾರೆ. ಒಂದು ಹೆಲಿಕಾಪ್ಟರ್ನಲ್ಲಿ 7 ಮಂದಿ, ಇನ್ನೊಂದು ಹೆಲಿಕಾಪ್ಟರ್ನಲ್ಲಿ ಮೂವರು ಮೃತಪಟ್ಟಿದ್ದಾರೆ. ಮಲೇಷ್ಯಾದ ಉತ್ತರ ಪೆರಾಕ್ ನೌಕಾ ನೆಲೆಯಲ್ಲಿ ನಡೆಯಲಿರುವ ರಾಯಲ್ ಮಲೇಷ್ಯಾ ನೇವಿಯ 90ನೇ ವಾರ್ಷಿಕೋತ್ಸವದ ಆಚರಣೆಯ ಪೂರ್ವಾಭ್ಯಾಸದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ ಎಂದು ಅಲ್ಲಿನ ನೌಕಾಪಡೆ ವರದಿ ಮಾಡಿದೆ.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಥ್ಯಾಂಕ್ಸ್ ಕೊಟ್ಟು, ತಬ್ಬಿಕೊಂಡಿದ್ದಕ್ಕೆ ಮಹಿಳಾ ASI ಅಮಾನತು
#BREAKING: Royal Malaysian Navy has confirmed that 10 people have died after two helicopters, identified as models HOM (M503-3) and Fennec (M502-6), collided and subsequently crashed at 9.32am during Navy Parade rehearsal. pic.twitter.com/mBlhS4Kxwg
— Aditya Raj Kaul (@AdityaRajKaul) April 23, 2024
ಇದನ್ನೂ ಓದಿ: ರೋಹಿತ್-ಕೊಹ್ಲಿರನ್ನ ಓವರ್ಟೇಕ್ ಮಾಡ್ತಿರೋ ಯಂಗ್ಸ್ಟರ್ಸ್.. ಯುವ ಆಟಗಾರರ ಬ್ಯಾಟಿಂಗ್ಗೆ ದಿಗ್ಗಜರು ಶಾಕ್
ಆಡುವ ಮೈದಾನಕ್ಕೆ ಒಂದು ಹೆಲಿಕಾಪ್ಟರ್ ಬಿದ್ದಿದ್ದರೇ ಇನ್ನೊಂದು ನೀರಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ಪಡೆ ತೆರಳಿದ್ದು ನೆಲದ ಬಿದ್ದಿರುವ ಅವಶೇಷಗಳನ್ನು ಸಂಗ್ರಹ ಮಾಡಲಾಗಿದೆ. ಈ ಅವಶೇಷಗಳನ್ನು ಆಸ್ಪತ್ರೆಗೆ ಕಳುಹಿಸುವ ಮೂಲಕ ಪರೀಕ್ಷೆ ನಂತರ ಘಟನೆಯಲ್ಲಿ ಯಾರು, ಯಾರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ