ಆಟಗಾರರದಿಂದ 20 ಕೋಟಿ ಸಮಾನ ಪರ್ಫಾಮೆನ್ಸ್..!
ಕೋಟಿ ವೀರರು ಠುಸ್.. ಲಕ್ಷಾಧೀಶರೇ ಸೂಪರ್ ಡೂಪರ್
ಕೋಟಿ ಕುಬೇರರಿಗೆ ಸೆಡ್ಡು ಹೊಡೆದ ಮೂಲಬೆಲೆ ಆಟಗಾರರು
ಇವರೆಲ್ಲರೂ ಐಪಿಎಲ್ ಹರಾಜಿನಲ್ಲಿ ಬೇಸ್ ಪ್ರೈಸ್ ಅಂದ್ರೆ 20 ಲಕ್ಷಕ್ಕೆ ಬಿಡ್ ಆದವರು. ಆದರೆ ಇಂದು ಇದೇ ಆಟಗಾರರು ಪರ್ಫಾಮೆನ್ಸ್ನಲ್ಲಿ ಕೋಟಿ ಕುಬೇರರನ್ನ ಮೀರಿಸಿದ್ದಾರೆ. ಆ ಮೂಲಕ ದುಬಾರಿ ಮೊತ್ತಕ್ಕೆ ಖರೀದಿಸಿದ ಆಟಗಾರರು ಉತ್ತಮ ಪ್ರದರ್ಶನ ನೀಡ್ತಾರೆ ಅನ್ನುವ ಫ್ರಾಂಚೈಸಿಗಳ ಲೆಕ್ಕಾಚಾರವನ್ನ ಸುಳ್ಳಾಗಿಸಿದ್ದಾರೆ.
20 ಲಕ್ಷ ಆಟಗಾರರದಿಂದ 20 ಕೋಟಿಯ ಪರ್ಫಾಮೆನ್ಸ್..!
ಐಪಿಎಲ್ನಲ್ಲಿ ಹಣದ ಹೊಳೆಯೇ ಹರಿಯುತ್ತೆ. ಒಂದು ಸೀಸನ್ನಿಂದ ಫ್ರಾಂಚೈಸಿಗಳು ನೂರಾರು ಕೋಟಿ ರೂಪಾಯಿ ಜೇಬಿಗಿಳಿಸಿಕೊಳ್ಳುತ್ತವೆ. ಹರಾಜಿನಲ್ಲಿ ಕೋಟಿ ಕೋಟಿ ಹಣ ಸುರಿದು ಬೇಕಾದ ಆಟಗಾರರನ್ನ ಖರೀದಿಸುತ್ತವೆ. ಹೆಚ್ಚು ದುಡ್ಡು ಕೊಟ್ಟು ಬಿಡ್ ಮಾಡಿದ ಸ್ಟಾರ್ಗಳು ಉತ್ತಮ ಪ್ರದರ್ಶನ ನೀಡ್ತಾರೆ ಅನ್ನೋದು ಫ್ರಾಂಚೈಸಿ ಮಾಲೀಕರ ಲೆಕ್ಕಚಾರ. ಆ ಲೆಕ್ಕಾಚಾರ ಪ್ರಸಕ್ತ ಐಪಿಎಲ್ನಲ್ಲಿ ಉಲ್ಟಾ ಆಗಿದೆ. 20 ಲಕ್ಷಕ್ಕೆ ಬಿಡ್ ಆದವರು 20 ಕೋಟಿ ಪಡೆದವರ ಸರಿ ಸಮಾನ ಪರ್ಫಾಮೆನ್ಸ್ ನೀಡಿ ಎಲ್ಲರ ಹುಬ್ಬೇರಿಸಿದ್ದಾರೆ.
ಇದನ್ನೂ ಓದಿ:ಬೈಕ್ನಲ್ಲಿ ಬಂದು JDU ಯುವ ಮುಖಂಡನ ಗುಂಡಿಟ್ಟು ಸಾಯಿಸಿ ಪರಾರಿ
20 ಲಕ್ಷದ ಅಶುತೋಷ್-ಶಶಾಂಕ್ ರಿಂದ ಜಬರ್ದಸ್ತ್ ಆಟ..!
ಶಶಾಂಕ್ ಸಿಂಗ್ ಹಾಗೂ ಅಶುತೋಷ್ ಶರ್ಮಾ. ಪಂಜಾಬ್ ಕಿಂಗ್ಸ್ನ ಈ ಜೋಡೆತ್ತು ಹೆಸರನ್ನ ಕೇಳದವರಿಲ್ಲ. ಡಿಸ್ಟ್ರಕಿವ್ ಆಟದಿಂದ ಐಪಿಎಲ್ಗೆ ರಂಗು ತಂದಿದ್ದಾರೆ. ಇಬ್ಬರನ್ನ ಪಂಜಾಬ್ ತಂಡ ತಲಾ 20 ಲಕ್ಷ ನೀಡಿ ಖರೀದಿಸಿತ್ತು. ಮೂಲ ಬೆಲೆಗೆ ಬಿಡ್ ಆದ ಈ ಆಟಗಾರರೇ ಪಂಜಾಬ್ ಮ್ಯಾಚ್ ವಿನ್ನರ್ಗಳಾಗಿದ್ದಾರೆ. ಶಶಾಂಕ್ 195 ಹಾಗೂ ಅಶುತೋಷ್ ಅಮೋಘ 159 ರನ್ ಸಿಡಿಸಿ, ಕೋಟಿ ವೀರರಿಗೆ ಸೆಡ್ಡು ಹೊಡೆದಿದ್ದಾರೆ.
ರಘುವಂಶಿ-ನಿತೀಶ್ ರೆಡ್ಡಿ ಅಮೋಘ ಪ್ರದರ್ಶನ
ಕೆಕೆಆರ್ನ ಆಂಗ್ಕ್ರಿಶ್ ರಘುವಂಶಿಗೆ ಇದು ಚೊಚ್ಚಲ ಐಪಿಎಲ್. 20 ಲಕ್ಷಕ್ಕೆ ತಂಡ ಸೇರಿದ ರಘುವಂಶಿ ದಮ್ದಾರ್ ಪ್ರದರ್ಶನ ನೀಡ್ತಿದ್ದಾರೆ. 161 ಸ್ಟ್ರೈಕ್ರೇಟ್ ಹೊಂದಿರೋ ಯಂಗ್ಗನ್ ಆಟ ಸ್ಟಾರ್ ಆಟಗಾರರನ್ನೇ ನಾಚಿಸುವಂತಿದೆ. ಹೈದ್ರಾಬಾದ್ನ ನಿತೀಶ್ ರೆಡ್ಡಿ ಕಥೆ ಕೂಡ ಸೇಮ್. ಮೂಲ ಬೆಲೆಗೆ ಹರಾಜಾದ ನಿತೀಶ್ ರಗಢ್ ಆಟ ಯಾವ ಕೋಟಿ ವೀರರಿಗೂ ಕಮ್ಮಿ ಇಲ್ಲ. 1 ಅರ್ಧಶತಕ ಸಹಿತ 115 ರನ್ ಚಚ್ಚಿ ದಿಲ್ ಗೆದ್ದಿದ್ದಾರೆ.
ಇದನ್ನೂ ಓದಿ:Video: ಪಂತ್ ಹೊಡೆದ ಬಾಲ್ನಿಂದ ಕ್ಯಾಮರಾಮ್ಯಾನ್ಗೆ ಪೆಟ್ಟು; ಕ್ಷಮೆ ಕೇಳಿ ವಿನಯತೆ ಮೆರೆದ ನಾಯಕ..!
ಹರ್ಷಿತ್ ರಾಣ -ಮಯಂಕ್ ಯಾದವ್.. ಬೆಂಕಿ ಬೌಲಿಂಗ್..!
ಹರ್ಷಿತ್ ರಾಣಾ ಹಾಗೂ ಮಯಂಕ್ ಯಾದವ್. ಸೀಸನ್ 17ರ ಯಂಗ್ ಸೆನ್ಸೆಷನ್ ಬೌಲರ್ಸ್. ಬ್ಯಾಟ್ಸ್ಮನ್ಗಳಿಗೆ ಇವರು ಕೊಡ್ತಿರೋ ಕಾಟ ಅಷ್ಟಿಷ್ಟಲ್ಲ. 20 ಲಕ್ಷ ಜೇಬಿಗಿಳಿಸಿ ಕೋಟಿ-ಕೋಟಿ ಬಾಚಿದವರನ್ನೆ ಮೀರಿಸಿದ್ದಾರೆ. ಲಕ್ನೋ ತಂಡದ ಮಯಾಂಕ್ ಆಡಿದ್ದು ಮೂರೇ ಪಂದ್ಯ. ಆದರೆ ಮಾಡಿದ ಇಂಪ್ಯಾಕ್ಟ್ ದೊಡ್ಡದು. 150+ ಕಿ. ಮೀ ಬೌಲಿಂಗ್, 6 ವಿಕೆಟ್ ಬೇಟೆ ಫ್ಯಾನ್ಸ್ ಮನದಲ್ಲಿ ಸ್ಥಾನ ಗಿಟ್ಟಿಸುವಂತೆ ಮಾಡಿದೆ. ಇನ್ನು ಹರ್ಷಿತ್ 9 ವಿಕೆಟ್ ಕಬಳಿಸಿದ್ದು ಭರವಸೆ ಹುಟ್ಟಿಸಿದ್ದಾರೆ.
ಯಶಸ್ವಿನ ಶಿಖರವೇರಿದ ಸ್ಪೀಡ್ಸ್ಟರ್ ಯಶ್ ಠಾಕೂರ್
ಪ್ರಸಕ್ತ ಐಪಿಎಲ್ನಲ್ಲಿ ಯುವವೇಗಿ ಯಶ್ ಠಾಕೂರ್ ಪ್ರದರ್ಶನ ಎಲ್ಲರ ಕಣ್ಣು ಕುಕ್ಕಿಸುತ್ತಿದೆ. ಈ ಇಂಪ್ರೆಸ್ಸಿವ್ ಬೌಲರ್ 20 ಲಕ್ಷ ರೂಪಾಯಿಗೆ ಲಕ್ನೋ ಪಾಲಾಗಿದ್ರು. ಅದಕ್ಕೆ ಮೋಸ ಮಾಡದ ಯಂಗ್ ಸ್ಪೀಡ್ ಗನ್ 6 ಪಂದ್ಯದಲ್ಲಿ 8 ವಿಕೆಟ್ ಸರಮಾಲೆ ಕಟ್ಟಿದ್ದಾರೆ. ಸ್ಲಾಗ್ ಓವರ್ನಲ್ಲಿ ಇಂಪ್ರೆಸ್ಸಿವ್ ದಾಳಿ ತಂಡಕ್ಕೆ ಗೆಲುವಿಗೆ ನೆರವಾಗ್ತಿದೆ. ಏನೇ ಹೇಳಿ, 20 ಲಕ್ಷ ಆಟಗಾರರ ಜಬರ್ದಸ್ತ್ ಪ್ರದರ್ಶನವನ್ನು ಮೆಚ್ಚಲೇಬೇಕು. ಹೊಸಬರಿಗೆ ದೊಡ್ಡ ಮೊತ್ತ ನೀಡೋದು ವ್ಯರ್ಥ, ಅವರಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯ ? ಅನ್ನೋ ಫ್ರಾಂಚೈಸಿ ಮಾಲೀಕರ ಯೋಚನೆಯನ್ನ ಮೇಲಿನ ಆಟಗಾರರು ಬದಲಿಸಿದ್ದಾರೆ. ಕೋಟಿ ಕುಬೇರರಿಗಿಂತ ನಾವೇನು ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿ ಕೊಟ್ಟಿದ್ದಾರೆ.
ಇದನ್ನೂ ಓದಿ:7 ಪಂದ್ಯಗಳಲ್ಲಿ ಸೋತು ಭಾರೀ ಮುಖಭಂಗ; ಆರ್ಸಿಬಿ ಪ್ಲೇಯಿಂಗ್-11ನಲ್ಲಿ ಇಂದು ಭಾರೀ ಬದಲಾವಣೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ