ಮನೆಯಲ್ಲಿ ನಾಲ್ವರು ಸೇರಿ ಬರ್ಗರ್ ತಿನ್ನುವಾಗ ನಡೆದ ಗಲಾಟೆ
ಗೆಳತಿಗಾಗಿ ತಂದಿದ್ದ ಬರ್ಗರ್ ಕಚ್ಚಿದ್ದಕ್ಕೆ ಕೊಲೆ ಮಾಡಿದ ಆರೋಪಿ
ಕೊಂಚ ಆತುರದಿಂದ ಬರ್ಗರ್ ಕಚ್ಚಿ ತಿಂದಿದ್ದೆ ಇಲ್ಲಿ ತಪ್ಪು ಆಯಿತಾ?
ಗೆಳತಿಗಾಗಿ ಆರ್ಡರ್ ಮಾಡಿ ತರಿಸಿದ್ದ ಬರ್ಗರ್ ಅನ್ನು ಸ್ನೇಹಿತ ಕಚ್ಚಿ ತಿಂದಿದ್ದಕ್ಕಾಗಿ ಯುವಕನೊಬ್ಬ ಕೋಪಗೊಂಡು ಶೂಟ್ ಮಾಡಿ ಕೊಲೆಗೈದಿದ್ದಾನೆ. ಈ ಘಟನೆಯು ಪಾಕಿಸ್ತಾನದ ಕರಾಚಿಯ ಡಿಫೆನ್ಸ್ ಫೇಸ್-5 ಪ್ರದೇಶದಲ್ಲಿ ನಡೆದಿದೆ.
ಪಾಕಿಸ್ತನಾದಲ್ಲಿನ ಸೆಷನ್ಸ್ ಕೋರ್ಟ್ವೊಂದರ ನ್ಯಾಯಾಧೀಶರ ಮಗ ಅಲಿ ಕೆರಿಯೊ ಮೃತಪಟ್ಟ ಯುವಕ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಒಬ್ಬರ ಪುತ್ರ ದಾನಿಯಾಲ್ ನಜೀರ್ ಕೊಲೆ ಮಾಡಿರುವ ಆರೋಪಿ. ಹತ್ಯೆ ಮಾಡಿರುವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಾಲಾರಾಮನ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?
ಇದನ್ನೂ ಓದಿ: ಹೊಸ ರೂಪದಲ್ಲಿ ಬರ್ತಿದೆ ಕಾಮಿಡಿ ಕಿಲಾಡಿಗಳು.. ಪ್ರತಿವಾರ 1 ಲಕ್ಷ ನಗದು ಬಹುಮಾನ ಕೊಡ್ತಾರಾ?
ಆರೋಪಿ ದಾನಿಯಾಲ್ ನಜೀರ್ ತನ್ನ ಗರ್ಲ್ಫ್ರೆಂಡ್ ಶಾಜಿಯಾ ಹಾಗೂ ಅಲಿ ಕೆರಿಯೊ ಮತ್ತು ಕೆರಿಯೊನ ಸಹೋದರ ಅಹ್ಮದ್ರನ್ನು ಮನೆಗೆ ಕರೆಯಿಸಿಕೊಂಡಿದ್ದನು. ಈ ವೇಳೆ ತಿನ್ನಲು ಎಂದು ಆನ್ಲೈನ್ ಮೂಲಕ ಎರಡು ಬರ್ಗರ್ಗಳನ್ನು ಆರ್ಡರ್ ಮಾಡಿದ್ದ. ಅದರಂತೆ ಬರ್ಗರ್ ಮನೆಗೆ ಬಂದ ಮೇಲೆ ನಾಲ್ವರು ಕುಳಿತು ಬರ್ಗರ್ ತಿನ್ನಲು ಮುಂದಾಗಿದ್ದಾರೆ. ಈ ವೇಳೆ ಕೆರಿಯೊ ಸ್ವಲ್ಪ ಆತುರದಿಂದ ದಾನಿಯಲ್ನ ಗರ್ಲ್ಫ್ರೆಂಡ್ಗಾಗಿ ತಂದಿದ್ದ ಬರ್ಗರ್ ಅನ್ನು ಕಚ್ಚಿ ತಿಂದಿದ್ದಾನೆ. ಇದರಿಂದ ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿದೆ.
ಇದನ್ನೂ ಓದಿ: ಮತದಾರರಿಗೆ ಸಿಎಂ, ಡಿಸಿಎಂ ಫೋಟೋ ಇರೋ ಸ್ಮಾರ್ಟ್ ಕಾರ್ಡ್ ಹಂಚಿಕೆ ಆರೋಪ.. ಎಲ್ಲೆಲ್ಲಿ?
ಗಲಾಟೆ ಅತಿರೇಕಕ್ಕೆ ಹೋಗಿದ್ದರಿಂದ ಆರೋಪಿಯು ಗನ್ ತೆಗೆದುಕೊಂಡು ಶೂಟ್ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು ತನಿಖೆ ಕೈಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ