newsfirstkannada.com

×

KKR vs PBKS; ಬೌಂಡರಿ, ಸಿಕ್ಸರ್​ಗಳಿಂದ 400 ರನ್ಸ್​.. ಪಂದ್ಯದಲ್ಲಿ ಏನೇನು ರೆಕಾರ್ಡ್​ ಆಗಿವೆ ಗೊತ್ತಾ?

Share :

Published April 27, 2024 at 10:03am

Update April 27, 2024 at 11:54am

    ಕೋಲ್ಕತ್ತಾ ನೀಡಿದ್ದ 262 ರನ್​ಗಳ ಟಾರ್ಗೆಟ್ ಮಾಡಿದ ಪಂಜಾಬ್

    ಹೊಡಿಬಡಿ ಆಟದಲ್ಲಿ ಹಲವು ದಾಖಲೆಗಳು, ಅವು ಯಾವ್ಯಾವುದು..?

    45 ಬಾಲ್​ನಲ್ಲಿ 8 ಫೋರ್, 9 ಸಿಕ್ಸರ್​ ಸಮೇತ ಬೈರ್​ಸ್ಟೋ ಸೆಂಚುರಿ

ಈಡನ್​ ಗಾರ್ಡನ್ಸ್​​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಪಂಜಾಬ್​​​ ಕಿಂಗ್ಸ್ ಭರ್ಜರಿ ಗೆಲವು ದಾಖಲಿಸಿದೆ. ಬರೋಬ್ಬರಿ 262 ರನ್​ಗಳ ಬಿಗ್​ ಟಾರ್ಗೆಟ್​ ಚೇಸ್​ ಮಾಡುವ ಮೂಲಕ ಇಡೀ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಬರೆದಿದೆ.

ಇದನ್ನೂ ಓದಿ: ರಾಡ್‌ನಿಂದ ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ.. ವೋಟಿಂಗ್ ಮುಗೀತಿದ್ದಂತೆ ಹಾಸನ ಜಿಲ್ಲೆಯಲ್ಲಿ ಏನಾಯಿತು?

ಕೋಲ್ಕತ್ತಾ ಟೀಮ್ ನೀಡಿದ 262 ರನ್​ಗಳ ಬೃಹತ್ ಮೊತ್ತ ಟಾರ್ಗೆಟ್ ಮಾಡಿದ ಪಂಜಾಬ್​ ಸ್ಟೇಡಿಯಂನಲ್ಲಿ ಬರೀ ಸಿಕ್ಸರ್​, ಬೌಂಡರಿಗಳನ್ನ ಬಾರಿಸುವ ಮೂಲಕ ಫ್ಯಾನ್ಸ್​ಗೆ ಫುಲ್ ಕಿಕ್​ ಕೊಟ್ಟಿದೆ. ಪಂದ್ಯದ ವೇಳೆ ಹಲವು ದಾಖಲೆಗಳು ಮೂಡಿ ಬಂದಿವೆ. ಇಡೀ ಐಪಿಎಲ್ ಇತಿಹಾಸದಲ್ಲೇ ಈ ರೀತಿ ಚೇಸ್ ಮಾಡಿರುವುದು ಇದೇ ಮೊದಲಾಗಿದೆ. ವಿಶ್ವದಲ್ಲೂ ಟಿ20 ಪಂದ್ಯಗಳಲ್ಲಿ ಇಷ್ಟೊಂದು ರನ್ಸ್ ಯಾರು ಚೇಸ್ ಮಾಡಿರಲಿಲ್ಲ.

  • 2024- ಕೋಲ್ಕತ್ತಾ ವಿರುದ್ಧ 262 ರನ್ ಚೇಸ್ ಮಾಡಿದೆ
  • 2023- ವೆಸ್ಟ್​ ಇಂಡೀಸ್​ ವಿರುದ್ಧ ಸೌತ್ ಆಫ್ರಿಕಾ 259 ರನ್ಸ್​ ಚೇಸ್ ಮಾಡಿತ್ತು.

ಪಂಜಾಬ್ ಮತ್ತು ಕೋಲ್ಕತ್ತಾ ಪಂದ್ಯದ ವೇಳೆ ಒಟ್ಟು 523 ರನ್​ಗಳು ಹರಿದು ಬಂದಿದ್ದು ಬೌಂಡರಿಗಳಿಗಿಂತ ಸಿಕ್ಸರ್​ಗಳನ್ನೇ ಹೆಚ್ಚಾಗಿ ಬ್ಯಾಟ್ಸ್​​ಮನ್​ಗಳು ಬಾರಿಸಿದ್ದಾರೆ. ಕೆಕೆಆರ್ ಬ್ಯಾಟ್ಸ್​​ಮನ್​​ಗಳು 18 ಸಿಕ್ಸರ್​, ಪಂಜಾಬ್ ಬ್ಯಾಟರ್ಸ್ 24 ಸಿಕ್ಸರ್​​ ಬಾರಿಸಿದ್ದಾರೆ. ಮ್ಯಾಚ್​ ವೇಳೆ ಅಮೋಘವಾದ 42 ಸಿಕ್ಸರ್​ಗಳು ಬಂದಿವೆ. ಅಂದರೆ 252 ರನ್​ಗಳು ಕೇವಲ ಸಿಕ್ಸರ್​​ಗಳಿಂದ ಮಾತ್ರ ಬಂದಿವೆ. 37 ಬೌಂಡರಿಗಳಿಂದ 148 ರನ್​ಗಳು ಬಂದಿವೆ. ಸಿಕ್ಸರ್​ ಮತ್ತು ಬೌಂಡರಿಗಳಿಂದಲೇ 400 ರನ್​ಗಳು ಎರಡೂ ಕಡೆಯಿಂದ ಬಂದಿವೆ. ಇದು ಐಪಿಎಲ್​​ನಲ್ಲಿ ದೊಡ್ಡ ದಾಖಲೆಯಾಗಿದೆ.

ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್​ಗಳು ಪಂಜಾಬ್ ಮತ್ತು ಕೋಲ್ಕತ್ತಾ ಪಂದ್ಯದ ವೇಳೆ ಬಂದಿವೆ. ಎರಡು ತಂಡಗಳು 250 ರನ್​ಗಳ ಗಡಿ ದಾಟಿ ಬ್ಯಾಟಿಂಗ್​​ನಿಂದ ಅಬ್ಬರಿಸಿವೆ. 45 ಬಾಲ್​ನಲ್ಲಿ 8 ಫೋರ್, 9 ಸಿಕ್ಸರ್​ ಸಮೇತ ಬೈರ್​ಸ್ಟೋ ಸೆಂಚುರಿ ಬಾರಿಸಿದ್ದು ದಾಖಲೆಯಾದ್ರೆ, ನಾಲ್ವರು ಬ್ಯಾಟ್ಸ್​ಮನ್​ಗಳು 25 ಬಾಲ್​ ಒಳಗೆ ಅರ್ಧಶತಕ ಚಚ್ಚಿರುವುದು ಮತ್ತೊಂದು ದಾಖಲೆಯಾಗಿದೆ. ಎರಡೂ ತಂಡದ ನಾಲ್ವರು ಆರಂಭಿಕರು ಒಂದೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಕೆಕೆಆರ್ ಪರ ಸುನಿಲ್ ನರೈನ್ 71 ರನ್, ಫಿಲ್ ಸಾಲ್ಟ್ 75 ಗಳಿಸಿದರೆ, ಪಂಜಾಬ್ ಪರ ಜಾನಿ ಬೈರ್​​ಸ್ಟೋ ಅಜೇಯ 108 ರನ್, ಪ್ರಭುಸಿಮ್ರಾನ್ ಸಿಂಗ್ 54 ರನ್ ಗಳಿಸಿದರು.

ಇದನ್ನೂ ಓದಿ: ಜನಪ್ರಿಯ ಬಿರಿಯಾನಿ ಹೌಸ್ ಹೋಟೆಲ್​​ಗೆ ಬೆಂಕಿ.. ಮಾಲೀಕನಿಗೆ ಲಕ್ಷ, ಲಕ್ಷ ರೂಪಾಯಿ ನಷ್ಟ

ಇದನ್ನೂ ಓದಿ: ಸಿಗರೇಟ್ ಕೊಟ್ಟಿಲ್ಲವೆಂದು ಹಲ್ಲೆ.. ಚಾಕು ಇರಿದು ಇಬ್ಬರ ಯುವಕರ ಕೊಂದ ಪಾಪಿಗಳು

ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್​, 20 ಓವರ್​​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 261 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್, ಇನ್ನೂ 8 ಎಸೆತಗಳನ್ನು ಬಾಕಿ ಉಳಿಸಿ ಗೆದ್ದು ಬೀಗಿತು. 2 ವಿಕೆಟ್ ನಷ್ಟಕ್ಕೆ 18.4 ಓವರ್​​ಗಳಲ್ಲಿ 262 ರನ್ ಗಳಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KKR vs PBKS; ಬೌಂಡರಿ, ಸಿಕ್ಸರ್​ಗಳಿಂದ 400 ರನ್ಸ್​.. ಪಂದ್ಯದಲ್ಲಿ ಏನೇನು ರೆಕಾರ್ಡ್​ ಆಗಿವೆ ಗೊತ್ತಾ?

https://newsfirstlive.com/wp-content/uploads/2024/04/KKR-1.jpg

Load More