ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್
4 ತಿಂಗಳ ಹಿಂದೆನೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಪತ್ರ ರವಾನೆ
ಪೆನ್ ಡ್ರೈವ್ ವಿಚಾರ ಗೊತ್ತಿದ್ರೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ್ರಾ?
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಾಸನದಲ್ಲಿ ಹರಿದಾಡಿದ ಪೆನ್ಡ್ರೈವ್ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಮಾಹಿತಿ ಇತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಬಿಜೆಪಿ ಮುಖಂಡ ದೇವರಾಜೇಗೌಡ ಅವರು 4 ತಿಂಗಳ ಹಿಂದೆನೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಪತ್ರ ಬರೆದಿದ್ದರಂತೆ. ಈ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಡಿಸಿ ಸಿ. ಸತ್ಯಭಾಮ!
ಹೌದು, ಹಾಸನ ಅಶ್ಲೀಲ ವಿಡಿಯೋ ಕೇಸ್ ಬಗ್ಗೆ 2023 ಡಿಸೆಂಬರ್ 8ರಂದು ಜಿ.ದೇವರಾಜೇಗೌಡ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಪತ್ರ ಬರೆಯುವ ಮೂಲಕ ಮಾಹಿತಿ ನೀಡಿದ್ದರಂತೆ. 2,976 ನೀಲಿ ಚಿತ್ರಗಳಲ್ಲಿ ಭಾಗಿಯಾಗಿದ್ದಾರೆ ಅಂತಾ ಉಲ್ಲೇಖ ಕೂಡ ಮಾಡಲಾಗಿತ್ತಂತೆ. ಹೀಗಾಗಿ ಲೋಕಸಭೆಯಲ್ಲಿ ಅವರಿಗೆ ಟಿಕೆಟ್ ನೀಡೋದು ಬೇಡ ಅಂತಾ ಕೂಡ ಹೇಳಲಾಗಿತ್ತಂತೆ. ಆದರೆ ಪೆನ್ ಡ್ರೈವ್ ವಿಚಾರ ಗೊತ್ತಿದ್ರೂ ಕೂಡ ಬಿಜೆಪಿ ಪಕ್ಷದವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ್ರಾ ಅಂತಾ ಅನುಮಾನ ವ್ಯಕ್ತವಾಗುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಜಿ.ದೇವರಾಜೇಗೌಡ ಬರೆದಿದ್ದ ಪತ್ರದಲ್ಲಿ ಏನಿದೆ..?
ಜಿ. ದೇವರಾಜೇಗೌಡ ಆದ ನಾನು ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ 2023ರ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹಲವಾರು ಕಾರಣಗಳಿಂದ ಪರಾಜಯಗೊಂಡಿರುತ್ತೇನೆ.
ಇತ್ತೀಚಿನ ದಿನಗಳಲ್ಲಿ ಪಕ್ಷದ ವರಿಷ್ಠರು ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅದೇ ರೀತಿಯಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ನಾಯಕರುಗಳು ಈಗಾಗಲೇ ಮೈತ್ರಿ ಪ್ರಕ್ರಿಯೆ ಮುಂದುವರೆದಿದೆ ಎಂಬ ಬಗ್ಗೆ ಅವರೇ ಹೇಳಿಕೆಯನ್ನು ಮಾಧ್ಯಮದಲ್ಲಿ ಹೇಳಿಕೆ ನೀಡಿ ಬಿಂಬಿಸಿಕೊಂಡಿವೆ. ಆದರೆ ಬಹಳ ಗಂಭೀರವಾದ ವಿಚಾರವೇನೆಂದರೆ ನಮ್ಮ ಭಾರತೀಯ ಜನತಾ ಪಕ್ಷ ವಿಶ್ವದಲ್ಲಿಯೇ ಪ್ರಥಮ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ರಾಷ್ಟ್ರದಲ್ಲಿ ನರೇಂದ್ರ ಮೋದೀಜಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಸತ್ಯ ಧರ್ಮ ಹಾಗೂ ಸಂಸ್ಕೃತಿ ಮತ್ತು ಸ್ತ್ರೀ ಕುಲವನ್ನು ಪೂಜ್ಯ ಭಾವನೆಯಿಂದ ನೋಡಿ ದೇಶದ ಮಹಿಳೆಯರ ಹೃದಯದಲ್ಲಿ ನೆಲೆಸಿದೆ. ಆದರೆ ನಾವು ಮೈತ್ರಿ ಮಾಡಿಕೊಳ್ಳುತ್ತಿರುವ ಜೆಡಿಎಸ್ ಪಕ್ಷದ ಹಾಸನದ ಪ್ರಮುಖ ನಾಯಕರಾದ ಹೆಚ್.ಡಿ ರೇವಣ್ಣನವರ ಕುಟುಂಬದ ಸದಸ್ಯರು, ಲೋಕಸಭಾ, ಸದಸ್ಯರಾದ ಪ್ರಜ್ವಲ್ ರೇವಣ್ಣ ಸಹಿತ ಅಪಹರಣ, ಹಲ್ಲೆ, ಮೋಸ, ವಂಚನೆ, ದರೋಡೆಯಂತಹ ಗಂಭೀರ ಪ್ರಕರಣಗಳ ಜೊತೆಗೆ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹೀನ ಕೃತ್ಯವಾದಂತಹ ಮಹಿಳೆಯರ ಅತ್ಯಾಚಾರ ಹಾಗೂ ಹೆಣ್ಣು ಮಕ್ಕಳ 2,976 ನೀಲಿ ಚಿತ್ರಗಳಲ್ಲಿ ಭಾಗಿಯಾಗಿದ್ದಾರೆ.
ನಂತರ ಬ್ಲಾಕ್ ಮೇಲೆ ಮಾಡಿ ನಿರಂತರವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವಿಡಿಯೋ ಮತ್ತು ಪೋಟೋಗಳಿರುವ ಪೆನ್ ಡ್ರೈವ್ ನನಗೆ ದೊರೆತಿವೆ. ಬಹಳ ಗಂಭೀರವಾದ ವಿಚಾರವೆಂದರೆ ಮತ್ತೊಂದು ಪೆನ್ ಡ್ರೈವ್ ಈ ಎಲ್ಲಾ ವಿಡಿಯೋ ಮತ್ತು ದಾಖಲೆಗಳು ಈಗಾಗಲೇ ಕಾಂಗ್ರೇಸ್‌ನ ರಾಷ್ಟ್ರೀಯ ನಾಯಕರ ಕೈ ಸೇರಿದೆ. ನಾವು ಹಾಸನದಲ್ಲಿ ಜೆ.ಡಿ.ಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಇದನ್ನೇ ಬ್ರಹ್ಮಾಸ್ತ್ರವಾಗಿ ಉಪಯೋಗಿಸಿಕೊಂಡು ಅತ್ಯಾಚಾರಿ ಪಕ್ಷದ ಕುಟುಂಬದೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷ ಎಂಬ ಕಳಂಕ ಶಾಶ್ವತವಾಗಿ ನಮ್ಮ ಪಕ್ಷಕ್ಕೆ ಬರುವುದು ಸತ್ಯ, ಇದರಿಂದ ರಾಷ್ಟ್ರದಲ್ಲಿ ನಮ್ಮ ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಪೆಟ್ಟು ಬೀಳುವುದು ಹಾಗೂ ಪಕ್ಷದ ವರ್ಚಸ್ಸಿಗೆ ಅಗೌರವ ಬರುವುದು ಸತ್ಯ. ತಾವು ಕೂಡಲೇ ಈ ಪತ್ರದ ಬಗ್ಗೆ ತಾತ್ಸರ ತೋರದೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಹಾಸನ ಜಿಲ್ಲೆಯಲ್ಲಿ ಹೆಚ್.ಡಿ ರೇವಣ್ಣನವರ ಕುಟುಂಬದ ಸದಸ್ಯರುಗಳ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಅವರ ಗಮನ ಸೆಳೆಯಬೇಕಾಗಿ ಮನವಿ ಮಾಡುತ್ತೇನೆ. ರಾಷ್ಟ್ರೀಯ ನಾಯಕರು ಈ ವಿಡಿಯೋ ಮತ್ತು ದಾಖಲೆಗಳನ್ನು ನೋಡಬೇಕೆಂದು ಬಯಸಿದರೆ ಅವುಗಳನ್ನು ತೋರಿಸಲು ನಾನು ಸಿದ್ದನಿದ್ದೇನೆ. ಕೇಂದ್ರ ಪ್ರಮುಖ ನಾಯಕರುಗಳಿಗೆ ಈ ಪತ್ರವನ್ನು ರವಾನಿಸಲು ತಮ್ಮ ಅನುಮತಿ ಕೋರುತ್ತೇನೆ.
– ಜಿ.ದೇವರಾಜೇಗೌಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ