ಪುಷ್ಪ 2 ಸೀಕ್ವೆಲ್ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರೋ ಫ್ಯಾನ್ಸ್
ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಪುಷ್ಪ 2 ದಿ ರೂಲ್ ಸಿನಿಮಾ
ಪುಷ್ಪ 2ಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಗುಡ್ನ್ಯೂಸ್
ಟಾಲಿವುಡ್ ಡ್ಯಾಷಿಂಗ್ ಡೈರೆಕ್ಟರ್ ಸುಕುಮಾರ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಮ್ಮೆ ಬಾಕ್ಸ್ಆಫೀಸ್ ಉಡೀಸ್ ಮಾಡೋದಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಸಿನಿಮಾಗಾಗಿ ಎಲ್ಲಾ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಪುಷ್ಪ ಸಿನಿಮಾ ಸೀಕ್ವೆಲ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: ಮತ್ತಷ್ಟೂ ಹೆಚ್ಚಾಯ್ತು ಪುಷ್ಪ- 2 ಮೇಲಿನ ನಿರೀಕ್ಷೆ.. ಆ ಒಂದು ಸೀನ್ಗಾಗಿ ಎಷ್ಟು ಕೋಟಿ ಖರ್ಚು ಮಾಡಿದ್ರು ಗೊತ್ತಾ?
ಪುಷ್ಪ 2: ದಿ ರೂಲ್ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ. ಮೊನ್ನೆ ಮೊನ್ನೆಯಷ್ಟೇ ಪುಷ್ಪ 2: ದಿ ರೂಲ್ ಸಿನಿಮಾ ತಂಡದಿಂದ ಹೊಸ ಪೋಸ್ಟರ್ವೊಂದನ್ನು ರಿಲೀಸ್ ಮಾಡಲಾಗಿತ್ತು. ಇದೀಗ ಅದೇ ಚಿತ್ರತಂಡ ಮತ್ತೊಂದು ಶುಭ ಸುದ್ದಿಯೊಂದನ್ನು ನೀಡಿದೆ. ನಾಳೆ ಪುಷ್ಪ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ. ಇದಕ್ಕೆ ಸಿನಿಮಾ ತಂಡ ನಿಗದಿತ ಸಮಯವನ್ನು ಅನೌನ್ಸ್ ಮಾಡಿದೆ.
S̶e̶n̶s̶a̶t̶i̶o̶n̶a̶l̶ s̶u̶r̶p̶r̶i̶s̶e̶
Sensational song ✅🔥🔥#Pushpa2FirstSingle out tomorrow at 5.04 PM in Telugu, Hindi, Tamil, Kannada, Malayalam & Bengali.#PushpaPushpa chant all the way 💥💥A Rockstar @ThisIsDSP Musical 🎵#Pushpa2TheRule Grand release worldwide on… pic.twitter.com/hsnPqqDhQd
— Pushpa (@PushpaMovie) April 30, 2024
ಹೌದು, ನಾಳೆ ಎಂದರೆ ಮೇ 1ಕ್ಕೆ ಪುಷ್ಪ ಚಾಪ್ಟರ್ 2 ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಲಿದೆ. ನಾಳೆ ಸಂಜೆ 5 ಗಂಟೆ 04 ನಿಮಿಷಕ್ಕೆ ‘ಪುಷ್ಪ ಪುಷ್ಪ’ ಹಾಡು ರಿಲೀಸ್ ಆಗಲಿದೆ. ಈ ಹಾಡಿಗೆ ದೇವಿಶ್ರೀ ಪ್ರಸಾದ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ನಾಳೆ ಬಿಡುಗಡೆಯಾಗುವ ಹೊಸ ಹಾಡನ್ನು ಕೇಳಲು ಅಭಿಮಾನಿಗಳಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ಪುಷ್ಪ ಚಾಪ್ಟರ್ 1ನ ಎಲ್ಲಾ ಹಾಡುಗಳು ಸಖತ್ ವೈರಲ್ ಆಗಿದ್ದವು. ಅದರಲ್ಲೂ ಸಾಮಿ, ಸಾಮಿ ಮತ್ತು ಉ ಅಂಟವಾ ಹಾಡು ಸಖತ್ ಹಿಟ್ ಆಗಿತ್ತು. ಇದೀಗ ಪುಷ್ಪ 2 ಸಿನಿಮಾ ಮೊದಲ ಹಾಡು ಯಾವ ರೀತಿಯಲ್ಲಿ ಟ್ರೆಂಡ್ ಸೃಷ್ಟಿಸಲಿದೆ ಎಂದು ಕಾದು ನೋಡಬೇಕಿದೆ.
ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪುಪ್ಪ 2 ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರಲಿದೆ. ಈ ಬಹುನೀರಿಕ್ಷಿತ ಸಿನಿಮಾದಲ್ಲಿ ಅಲ್ಲು ಅರ್ಜುನ್ಗೆ ಜೋಡಿಯಾಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸೇರಿದಂತೆ ಧನಂಜಯ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ರಾವ್ ರಮೇಶ್, ಅಜಯ್, ಮೈಮ್ ಗೋಪಿ, ಸುನಿಲ್, ಅನಸೂಯಾ ಭಾರದ್ವಾಜ್, ಶ್ರೀತೇಜ್, ಬ್ರಹ್ಮಾಜಿ ಮುಂತಾದವರು ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ