ತ್ರಿಮೂರ್ತಿಗಳ ಮೇಲೆ ಲಾಯಲ್ ಅಭಿಮಾನಿಗಳ ನಿರೀಕ್ಷೆ
'KGF' ಫ್ಲಾಪ್... ‘KJP' ಬ್ಲಾಕ್ಬಸ್ಟರ್ ಹಿಟ್..!
ಗುಜರಾತ್ ಟೈಟನ್ಸ್ ಕ್ಯಾಂಪ್ನಲ್ಲಿ ಟೆನ್ಶನ್.. ಟೆನ್ಶನ್.!
ಹೋಮ್ಗ್ರೌಂಡ್ನಲ್ಲಿ ಸತತ 3 ಸೋಲು ಕಂಡಿದ್ರೂ ಇಂದಿನ ಪಂದ್ಯದಲ್ಲೀ ಆರ್ಸಿಬಿಯೇ ಗೆಲ್ಲೋ ಫೇವರಿಟ್ ಅನಿಸಿಕೊಂಡಿದೆ. ಕಳಪೆ ಬೌಲಿಂಗ್ನಂತ ದೊಡ್ಡ ವೀಕ್ನೆಸ್ ಇದ್ರೂ, ಫ್ಯಾನ್ಸ್ ಗೆಲುವು ನಮ್ದೇ ಅಂತಿದ್ದಾರೆ. ಇದಕ್ಕೆ ಕಾರಣ ಈ ತ್ರಿಮೂರ್ತಿಗಳು. ಇವ್ರ ಅಬ್ಬರದ ಆಟ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿರೋದು ಮಾತ್ರವಲ್ಲ. ಎದುರಾಳಿ ಗುಜರಾತ್ ಪಾಳಯದಲ್ಲಿ ನಡುಕವನ್ನೂ ಹುಟ್ಟಿಸಿದೆ.
KGF.. ಕಿಂಗ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸಿ.. ಈ ಮೂವರು ಆರ್ಸಿಬಿ ಬಲವಾಗಿದ್ರು. ಈ ತ್ರಿಮೂರ್ತಿಗಳು ಅಬ್ಬರಿಸಿದ್ರೆ, ಆರ್ಸಿಬಿ ಗೆಲುವು ಪಕ್ಕಾ ಅನ್ನೋದು ಅಭಿಮಾನಿಗಳ ಮಾತಾಗಿತ್ತು. ಕಳೆದ 2 ಸೀಸನ್ಗಳಲ್ಲಿ ಇವ್ರ ಪರ್ಫಾಮೆನ್ಸ್ ಹಂಗೇ ಇತ್ತು ಬಿಡಿ. ಕೆಜಿಎಫ್ ಅಬ್ಬರಕ್ಕೆ ಎದುರಾಳಿಗಳು ಅಕ್ಷರಶಃ ಥಂಡಾ ಹೊಡೆದುಬಿಟ್ಟಿದ್ರು.
ಇದನ್ನೂ ಓದಿ:ಮಹಿಳೆ ಅಪಹರಣ ಆರೋಪ ಕೇಸ್ನಲ್ಲಿ ಬಂಧನದ ಭೀತಿ.. ಕೋರ್ಟ್ನಲ್ಲಿ ರೇವಣ್ಣ ಪರ ವಕೀಲರ ವಾದ ಏನು?
‘KGF’ ಫ್ಲಾಪ್.. ‘KJP’ ಬ್ಲಾಕ್ಬಸ್ಟರ್ ಹಿಟ್
ಈ ಸೀಸನ್ನಲ್ಲಿ ಕಿಂಗ್ ಕೊಹ್ಲಿ ಒಬ್ಬರೆ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಫಾಫ್ ಡುಪ್ಲೆಸಿ ಇನ್ಕನ್ಸಿಸ್ಟೆಂಟ್ ಆಗಿದ್ರೆ, ಮ್ಯಾಕ್ಸ್ವೆಲ್ ಮ್ಯಾಜಿಕ್ ಮಾಯವಾಗಿದೆ. ಕೊಹ್ಲಿ ಏಂಕಾಗಿಯಾದ ಪರಿಣಾಮವೇ ಫಸ್ಟ್ ಹಾಫ್ನಲ್ಲಿ ಆರ್ಸಿಬಿ ಹೀನಾಯ ಪರ್ಫಾಮೆನ್ಸ್ ನೀಡ್ತು. ಇದೀಗ ಆರ್ಸಿಬಿ ಗೆಲುವಿನ ಹಳಿಗೆ ಮರಳಿದೆ. ವಿರಾಟ್ ಕೊಹ್ಲಿಗೆ ಜೊತೆಗಾರರೂ ಸಿಕ್ಕಿದ್ದಾರೆ. ಇಂದಿನ ಪಂದ್ಯದಲ್ಲೀ ಇವ್ರ ಮೇಲೆಯೇ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟಿರೋದು.
ಕಿಂಗ್ ಕೊಹ್ಲಿ ಆಟ ನೋಡಲು ಫ್ಯಾನ್ಸ್ ಕಾತರ..!
ಈ ಸೀಸನ್ನಲ್ಲಿ ಆರ್ಸಿಬಿ ಫ್ಲಾಪ್ ಶೋ ನೀಡಿದೆ ನಿಜ. ಅಭಿಮಾನಿಗಳಿಗೆ ಅತೀವ ನಿರಾಸೆಯಾಗಿರೋದು ಅಷ್ಟೇ ಸತ್ಯ. ಆದ್ರೆ, ಕಿಂಗ್ ಕೊಹ್ಲಿ ಮಾತ್ರ ಫ್ಯಾನ್ಸ್ಗೆ ಸಖತ್ ಎಂಟರ್ಟೈನ್ಮೆಂಟ್ ನೀಡಿದ್ದಾರೆ. 71.43ರ ಸರಾಸರಿಯಲ್ಲಿ 500 ರನ್ ಚಚ್ಚಿದ್ದಾರೆ. ಕಿಂಗ್ ಕೊಹ್ಲಿ ಆಟಕ್ಕೆ ಫಿದಾ ಆಗಿರುವ ಫ್ಯಾನ್ಸ್, ಇಂದು ಚಿನ್ನಸ್ವಾಮಿ ಅಂಗಳದಲ್ಲೂ ಅದ್ದೂರಿ ಆಟದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ
ವಿಲ್ ಜಾಕ್ಸ್ರಿಂದ ಜಬರ್ದಸ್ತ್ ಆಟದ ನಿರೀಕ್ಷೆ
ಇದೇ ಗುಜರಾತ್ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ವಿಲ್ ಜಾಕ್ಸ್ ಎಲ್ಲರನ್ನೂ ಬೆರಗಾಗಿಸಿದ್ರು. ಕೇವಲ 6 ನಿಮಿಷಗಳಲ್ಲಿ ಗೇಮ್ ಚೇಂಜಿಂಗ್ ಇನ್ನಿಂಗ್ಸ್ ಕಟ್ಟಿದ್ದ ಜಾಕ್ಸ್, ಬೌಂಡರಿ, ಸಿಕ್ಸರ್ಗಳ ಸುನಾಮಿ ಎಬ್ಬಿಸಿದ್ರು. ನಮೋ ಅಂಗಳದಲ್ಲಿ ಗುಜರಾತ್ ಬೌಲರ್ಗಳ ಬೆಂಡೆತ್ತಿ ಸೆಂಚುರಿ ಸಿಡಿಸಿದ್ರು. ಇಂದಿನ ಪಂದ್ಯದಲ್ಲೂ ಯಂಗ್ ಟೈಗರ್ ವಿಲ್ ಜಾಕ್ಸ್ರಿಂದ ಜಬರ್ದಸ್ತ್ ಆಟದ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ.
ಫಾರ್ಮ್ ಕಂಡುಕೊಂಡ ಪಟಿದಾರ್, ಫ್ಯಾನ್ಸ್ ಖುಷ್..!
ಸೀಸನ್ನ ಫಸ್ಟ್ ಹಾಫ್ನಲ್ಲಿ ರನ್ಗಳಿಕೆಗೆ ಪರದಾಡಿದ ರಜತ್ ಪಟಿದಾರ್ ಸೆಕೆಂಡ್ ಹಾಫ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಎದುರಿಸೋ ಮೊದಲ ಎಸೆತದಿಂದಲೇ ಆರ್ಭಟಿಸಲು ಶುರುವಿಟ್ಟುಕೊಳ್ತಿದ್ದಾರೆ. ವಾಂಖೆಡೆ, ಈಡನ್ ಗಾರ್ಡನ್, ಹೈದ್ರಾಬಾದ್ನಲ್ಲಿ ಅಬ್ಬರದ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದೀಗ ಚಿನ್ನಸ್ವಾಮಿ ಅಂಗಳದಲ್ಲೂ ಅಂತದ್ದೇ ಅಬ್ಬರದ ಇನ್ನಿಂಗ್ಸ್ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ:Breaking News: ರಾಯಚೂರಲ್ಲಿ ಹೃದಯ ವಿದ್ರಾವಕ ಘಟನೆ.. ಇಬ್ಬರ ಬಲಿ ಪಡೆದ ರಣ ಬಿಸಿಲು
ಆರ್ಸಿಬಿ ಬೌಲರ್ಗಳು ಕಳಪೆ ಪರ್ಫಾಮೆನ್ಸ್ ಈ ಸೀಸನ್ನಲ್ಲಿ ಸರಿದಾರಿಗೆ ಬರೋ ಯಾವುದೇ ಲಕ್ಷಣಗಳೂ ಕಾಣ್ತಿಲ್ಲ. ಚಿನ್ನಸ್ವಾಮಿ ಅಂಗಳಲ್ಲಿ ನಡೆಯೋ ಇಂದಿನ ಪಂದ್ಯಕ್ಕೂ ಮುನ್ನವೂ ಬೌಲಿಂಗ್ ವಿಭಾಗವೇ ಟೆನ್ಶನ್ ಹೆಚ್ಚಿಸಿದೆ. ಆದ್ರೂ, ಫ್ಯಾನ್ಸ್ ಇಂದಿನ ಪಂದ್ಯದಲ್ಲಿ ಆರ್ಸಿಬಿ ಗೆಲ್ಲೋದು ಪಕ್ಕಾ ಅನ್ನೋ ವಿಶ್ವಾಸದಲ್ಲಿದ್ದಾರೆ. ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಟಿದಾರ್ ಆ ಆತ್ಮವಿಶ್ವಾಸದ ಹಿಂದಿನ ಸೀಕ್ರೆಟ್. ಈ ತ್ರಿಮೂರ್ತಿಗಳು ನಿರೀಕ್ಷೆಯಂತೆ ಅಬ್ಬರದ ಪರ್ಫಾಮೆನ್ಸ್ ನೀಡಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು ಆರೋಪ.. ಈ ಸಾವು ನ್ಯಾಯವೇ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್