ಹಿಟ್ಮ್ಯಾನ್ಗೆ ವಿಶ್ರಾಂತಿ ನೀಡುತ್ತಾ ಭಾರತದ ಕ್ರಿಕೆಟ್ ಮಂಡಳಿ..?
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬ್ಯಾಟಿಂಗ್ ಮಾಡಿದ್ದ ರೋಹಿತ್
ಕ್ಯಾಪ್ಟನ್ ರೋಹಿತ್ ಶರ್ಮಾಗೆ ಆಗಿರುವ ಇಂಜುರಿ ಆದ್ರೂ ಏನು?
ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟವಾಗಿ ಒಂದು ವಾರ ಕಳೆದಿಲ್ಲ. ಅದಾಗಲೇ ಭಾರತೀಯ ಕ್ರಿಕೆಟ್ ವಲಯದಲ್ಲಿ ಹೊಸ ಟೆನ್ಶನ್ ಶುರುವಾಗಿದೆ. ಇಷ್ಟು ದಿನ ಟೀಮ್ ಇಂಡಿಯಾ ಸಾರಥಿ ರೋಹಿತ್ ಶರ್ಮಾ ಫಾರ್ಮ್ನಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಇದೀಗ ಫಿಟ್ನೆಸ್ ಕೂಡ ಹೊಸ ಸಮಸ್ಯೆ ತಂದಿಟ್ಟಿದೆ. ಅಷ್ಟಕ್ಕೂ ರೋಹಿತ್ ಶರ್ಮಾಗೆ ಏನಾಯ್ತು.?
ಟಿ20 ವಿಶ್ವಕಪ್ ಆರಂಭಕ್ಕೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಉಳಿದಿವೆ. ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ತಂಡಗಳ ತಯಾರಿ ಜೋರಾಗಿದೆ. ಟೀಮ್ ಇಂಡಿಯಾ ಕೂಡ ಬಲಿಷ್ಠ ತಂಡವನ್ನ ಪ್ರಕಟಿಸಿದ್ದು, ಐಸಿಸಿ ಟ್ರೋಫಿ ಬರಕ್ಕೆ ಈ ಬಾರಿ ಬ್ರೇಕ್ ಹಾಕಲೇಬೇಕು ಎಂದು ಪಣ ತೊಟ್ಟಿದೆ. ಆದ್ರೆ, ಸಿದ್ಧತೆ ಆರಂಭಿಸೋಕು ಮುನ್ನವೇ ದೊಡ್ಡ ವಿಘ್ನ ಎದುರಾಗಿದೆ.
ವಿಶ್ವ ಸಮರವನ್ನ ಗೆಲ್ಲಲು ಟೀಮ್ ಇಂಡಿಯಾ ಬಲಿಷ್ಠ ತಂಡ ಪ್ರಕಟಿಸಿ ಇನ್ನೂ ಒಂದು ವಾರ ಕಳೆದಿಲ್ಲ. ಅದಾಗಲೇ ಟೀಮ್ ಇಂಡಿಯಾ ಹಿನ್ನಡೆ ಎದುರಾಗಿದೆ. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಇಂಜುರಿ ಕಾಟ ಶುರುವಾಗಿದೆ. ವಿಶ್ವಕಪ್ಗೂ ಮುನ್ನ ನಾಯಕನ ಇಂಜುರಿ, ಬಿಸಿಸಿಐ ವಲಯದಲ್ಲಿ ಹೊಸ ಆತಂಕವನ್ನ ಸೃಷ್ಟಿಸಿದೆ.
ಮೊನ್ನೆ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇಯಿಂಗ್ ಇಲೆವೆನ್ನಿಂದ ರೋಹಿತ್ ಹೊರಬಿದ್ದಿದ್ರು. ಇಂಪ್ಯಾಕ್ಟ್ ಪ್ಲೇಯರ್ ಲಿಸ್ಟ್ನಲ್ಲಿ ಕಾಣಿಸಿಕೊಂಡ ಹಿಟ್ಮ್ಯಾನ್, ಬ್ಯಾಟಿಂಗ್ ಮಾತ್ರ ಮಾಡಿದ್ರು. ಪಂದ್ಯದ ಬಳಿಕ ರೋಹಿತ್ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದಿದ್ಯಾಕೆ ಎಂಬ ಪ್ರಶ್ನೆಗೆ ಮುಂಬೈ ತಂಡದ ಪಿಯೂಶ್ ಚಾವ್ಲಾ ಉತ್ತರ ನೀಡಿದ್ದಾರೆ.
ಬ್ಯಾಕ್ ಸ್ಟಿಫ್ನೆಸ್ನಿಂದ ರೋಹಿತ್ ಬಳಲುತ್ತಿದ್ದಾರೆ. ಇದೊಂದು ಮುನ್ನೆಚ್ಚೆರಿಕಾ ಕ್ರಮವಾಗಿತ್ತು.
ಪಿಯೂಶ್ ಚಾವ್ಲಾ
ರೋಹಿತ್ಗೆ ಬೆನ್ನುನೋವು.. ಬಿಸಿಸಿಐ ವಲಯದಲ್ಲಿ ಟೆನ್ಶನ್.!
ರೋಹಿತ್ ಶರ್ಮಾ ಬೆನ್ನುನೋವಿನ ಸಮಸ್ಯೆಗೆ ತುತ್ತಾದ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಟೆನ್ಶನ್ ಶುರುವಾಗಿದೆ. ಸದ್ಯಕ್ಕೆ ಇದು ಮೈಲ್ಡ್ ಇಂಜುರಿ ಎಂದು ಟೀಮ್ ಮೆಂಬರ್ ಪಿಯೂಷ್ ಚಾವ್ಲಾ ಹೇಳಿದ್ದಾರೆ. ಹಾಗಿದ್ರೂ, ಮುಂದಿನ ದಿನಗಳಲ್ಲಿ ಉಲ್ಬಣವಾದ್ರೆ ಎನು ಗತಿ.? ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿದೆ.
ಉಳಿದ ಐಪಿಎಲ್ ಪಂದ್ಯಗಳಿಂದ ರೋಹಿತ್ಗೆ ರೆಸ್ಟ್.?
ರೋಹಿತ್ ಶರ್ಮಾ ಇಂಜುರಿ ವಿಶ್ವಕಪ್ ಸಿದ್ಧತೆಗೂ ಹಿನ್ನಡೆಯನ್ನ ಉಂಟು ಮಾಡಲಿದೆ. ಹೀಗಾಗಿ, ಈಗಾಗಲೇ ಪ್ಲೇ ಆಫ್ನಿಂದ ಹೊರ ಬಿದ್ದಿರೋದ್ರಿಂದ, ಉಳಿದ ಪಂದ್ಯಗಳಲ್ಲಿ ರೋಹಿತ್ಗೆ ರೆಸ್ಟ್ ನೀಡುವಂತೆ ಮುಂಬೈ ಫ್ರಾಂಚೈಸಿಗೆ ಬಿಸಿಸಿಐ ಮನವಿ ಮಾಡೋ ಸಾಧ್ಯತೆಯಿದೆ. ರೋಹಿತ್ ಶರ್ಮಾಗೂ ನೇರವಾಗಿ ವಿಶ್ರಾಂತಿ ಪಡೆಯುವಂತೆ ಸೂಚಿಸೋ ಸಾಧ್ಯತೆ ಇದೆ.
ಸತತ ವೈಫಲ್ಯದ ಬೆನ್ನಲ್ಲೇ ಇಂಜುರಿ ಆಘಾತ.!
ಇಂಜುರಿಯ ಸಮಸ್ಯೆ ಮಾತ್ರವಲ್ಲ.. ವಿಶ್ವಕಪ್ಗೂ ಮುನ್ನ ರೋಹಿತ್ ಶರ್ಮಾರ ಫಾರ್ಮ್ ಕೂಡ ದೊಡ್ಡ ತಲೆನೋವು ತಂದಿಟ್ಟಿದೆ. ಈ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಶತಕ ಸಿಡಿಸಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಕಳೆದ 5 ಪಂದ್ಯಗಳಲ್ಲಂತೂ ರನ್ಗಳಿಕೆಗೆ ಹಿಟ್ಮ್ಯಾನ್ ಪರದಾಡಿದ್ದಾರೆ.
ಕಳೆದ 5 ಪಂದ್ಯಗಳಲ್ಲಿ ರೋಹಿತ್
ಕಳೆದ 5 ಪಂದ್ಯಗಳಲ್ಲಿ ರೋಹಿತ್ ಬ್ಯಾಟಿಂಗ್ನಲ್ಲಿ ಅಟ್ಟರ್ಫ್ಲಾಪ್ ಆಗಿದ್ದಾರೆ. ಪಂಜಾಬ್ ಕಿಂಗ್ಸ್ ಎದುರು 36 ರನ್ಗಳಿಸಿದ್ದ ರೋಹಿತ್, ರಾಜಸ್ತಾನ್ ರಾಯಲ್ಸ್ ಎದುರು 6 ರನ್ಗಳಿಸಿ ನಿರ್ಗಮಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8, ಲಕ್ನೋ ಎದುರು 04 ಹಾಗೂ ಕೆಕೆಆರ್ ಎದುರು 11 ರನ್ಗಳಿಸಿ ಔಟಾಗಿದ್ದಾರೆ.
ಒಂದೆಡೆ ಫ್ಲಾಪ್ ಪ್ರದರ್ಶನ, ಇನ್ನೊಂದೆಡೆ ಇಂಜುರಿ ಆಘಾತ.. ರೋಹಿತ್ ಶರ್ಮಾ ಫಾರ್ಮ್ ಹಾಗೂ ಫಿಟ್ನೆಸ್ ಸದ್ಯ ಟೀಮ್ ಇಂಡಿಯಾ ವಲಯದಲ್ಲಿ ಆತಂಕವನ್ನ ಹುಟ್ಟಿಸಿದೆ. ರೋಹಿತ್ ಶರ್ಮಾ ಆದಷ್ಟು ಬೇಗ ಫಿಟ್ನೆಸ್ ಸಾಧಿಸಲಿ, ಕಠಿಣ ಅಭ್ಯಾಸ ನಡೆಸಿ ಫಾರ್ಮ್ ಕಂಡುಕೊಳ್ಳಲಿ ಅನ್ನೋದು ಅಭಿಮಾನಿಗಳ ಹಾರೈಕೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ