ಧರ್ಮಶಾಲಾ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮಳೆ
ಇಂದು ನಡೆಯುತ್ತಿದ್ದ ಆರ್ಸಿಬಿ, ಪಂಜಾಬ್ ನಡುವಿನ ಪಂದ್ಯ ರದ್ದು!
10 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದ್ದ ಆರ್ಸಿಬಿ ಟೀಮ್
ಇಂದು ಧರ್ಮಶಾಲಾ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೆ ಮಡಿ ಅನ್ನೋ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿವೆ.
ಇನ್ನು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಸ್ಯಾಮ್ ಕರನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ಆರ್ಸಿಬಿ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಮತ್ತೆ ಕೈ ಕೊಟ್ಟರು. 7 ಬಾಲ್ನಲ್ಲಿ 2 ಫೋರ್ ಸಮೇತ ಕೇವಲ 9 ರನ್ ಗಳಿಸಿ ಔಟಾದ್ರು. ಕನ್ನಡಿಗ ಕಾವೇರಪ್ಪ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರ ನಡೆದರು.
ಫಾಫ್, ವಿಲ್ ಜಾಕ್ಸ್ ಔಟಾದ ಬಳಿಕ ಕ್ರೀಸ್ಗೆ ಬಂದ ರಜತ್ ಪಾಟೀದಾರ್ ಆರ್ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ರು.
ಎದುರಾಳಿ ಬೌಲರ್ ಯಾರು ಎಂದು ನೋಡದೆ ಹಿಗ್ಗಾಮುಗ್ಗಾ ಚಚ್ಚಿದ್ರು. ಕೇವಲ 21 ಬಾಲ್ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ರು. ಅದರಲ್ಲೂ 6 ಭರ್ಜರಿ ಸಿಕ್ಸರ್, 3 ಫೋರ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 250ಕ್ಕೂ ಹೆಚ್ಚಿತ್ತು.
ಜತೆಗೆ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿದ್ರು. ಕೇವಲ 23 ಬಾಲ್ನಲ್ಲಿ 2 ಸಿಕ್ಸರ್, 4 ಫೋರ್ನೊಂದಿಗೆ 42 ರನ್ ಸಿಡಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 180ಕ್ಕೂ ಹೆಚ್ಚಿತ್ತು. ಆರ್ಸಿಬಿ 10 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಸಿಡಿಸಿದೆ. ಸದ್ಯ ಮಳೆ ಬಂದ ಕಾರಣ ಪಂದ್ಯ ರದ್ದಾಗಿದೆ.
ಇದನ್ನೂ ಓದಿ: 6,6,6,6,6,6,4,4,4; ಕೇವಲ 21 ಬಾಲ್ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ರಜತ್ ಪಾಟಿದಾರ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್