ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಇಂದು ಆರ್ಸಿಬಿ, ಪಂಜಾಬ್ ಕಿಂಗ್ಸ್ ನಡುವೆ ರೋಚಕ ಪಂದ್ಯ..!
ಪಂಜಾಬ್ ವಿರುದ್ಧ ಗೆದ್ದ ಆರ್ಸಿಬಿ ಪ್ಲೇ ಆಫ್ ಕನಸು ಜೀವಂತ
ಇಂದು ನಡೆದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ. ಬರೋಬ್ಬರಿ 60 ರನ್ಗಳಿಂದ ಗೆದ್ದು ಪ್ಲೇ ಆಫ್ ಕನಸು ಜೀವಂತವಾಗಿ ಇರಿಸಿಕೊಂಡಿದೆ.
ಆರ್ಸಿಬಿ ನೀಡಿದ 242 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಪರ ಓಪನರ್ ಆಗಿ ಬಂದ ಜಾನಿ ಬೇರ್ಸ್ಟೋ 16 ಬಾಲ್ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 27 ರನ್ ಸಿಡಿಸಿದ್ರು. ಇವರಿಗೆ ಸಾಥ್ ನೀಡಿದ ರಿಲೀ ರೋಸೋ 27 ಬಾಲ್ನಲ್ಲಿ 3 ಭರ್ಜರಿ ಸಿಕ್ಸರ್, 9 ಫೋರ್ ಸಮೇತ 61 ರನ್ ಚಚ್ಚಿದ್ರು. ಶಶಾಂಕ್ 37, ಸ್ಯಾಮ್ ಕರನ್ 22 ರನ್ ಗಳಿಸಿದ್ರು. ಪಂಜಾಬ್ 17 ಓವರ್ನಲ್ಲಿ 181 ರನ್ಗಳಿಗೆ ಆಲೌಟ್ ಆಗಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಮತ್ತೆ ಕೈ ಕೊಟ್ಟರು. 7 ಬಾಲ್ನಲ್ಲಿ 2 ಫೋರ್ ಸಮೇತ ಕೇವಲ 9 ರನ್ ಗಳಿಸಿ ಔಟಾದ್ರು. ಕನ್ನಡಿಗ ಕಾವೇರಪ್ಪ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರ ನಡೆದರು.
ಫಾಫ್, ವಿಲ್ ಜಾಕ್ಸ್ ಔಟಾದ ಬಳಿಕ ಕ್ರೀಸ್ಗೆ ಬಂದ ರಜತ್ ಪಾಟೀದಾರ್ ಆರ್ಸಿಬಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಎದುರಾಳಿ ಬೌಲರ್ ಯಾರು ಎಂದು ನೋಡದೆ ಹಿಗ್ಗಾಮುಗ್ಗಾ ಚಚ್ಚಿದ್ರು. ಕೇವಲ 21 ಬಾಲ್ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ರು. ಅದರಲ್ಲೂ 6 ಭರ್ಜರಿ ಸಿಕ್ಸರ್, 3 ಫೋರ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 250ಕ್ಕೂ ಹೆಚ್ಚಿತ್ತು.
ಜತೆಗೆ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿದ್ರು. ಕೇವಲ 47 ಬಾಲ್ನಲ್ಲಿ 6 ಸಿಕ್ಸರ್, 7 ಫೋರ್ನೊಂದಿಗೆ 92 ರನ್ ಸಿಡಿಸಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 195ಕ್ಕೂ ಹೆಚ್ಚಿತ್ತು. ಕ್ಯಾಮೆರಾನ್ ಗ್ರೀನ್ 27 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 46 ಮತ್ತ ದಿನೇಶ್ ಕಾರ್ತಿಕ್ 7 ಬಾಲ್ನಲ್ಲಿ 2 ಸಿಕ್ಸರ್, 1 ಫೋರ್ನೊಂದಿಗೆ 18 ರನ್ ಚಚ್ಚಿದ್ರು. ಇದರ ಪರಿಣಾಮ ಆರ್ಸಿಬಿ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 241 ರನ್ ಕಲೆ ಹಾಕಿತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್.. ಪಂಜಾಬ್ಗೆ ಆರ್ಸಿಬಿ ಬರೋಬ್ಬರಿ 242 ರನ್ ಬಿಗ್ ಟಾರ್ಗೆಟ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್