ಸಂಗೀತಾ ಶೃಂಗೇರಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭ ಹಾರೈಕೆ
ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ ಬಿಗ್ಬಾಸ್ ಸ್ಪರ್ಧಿಗಳು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅಣ್ಣ ತಂಗಿಯ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ನಿನ್ನೆ ಅದ್ಧೂರಿಯಾಗಿ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ನೆಚ್ಚಿನ ನಟಿಯ ಹುಟ್ಟು ಹಬ್ಬದ ನಿಮಿತ್ತ ಅಭಿಮಾನಿಗಳು ಹೊಸ, ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡು ಶುಭ ಕೋರಿದ್ದರು.
ಇದನ್ನೂ ಓದಿ: ಆಹಾ.. ನನ್ನ ಮದುವೆಯಂತೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆ್ಯಂಕರ್ ಅನುಶ್ರೀ; ಹುಡುಗ ಯಾರು?
ಇದೀಗ ಬಿಗ್ಬಾಸ್ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಡ್ರೋನ್ ಪ್ರತಾಪ್ ಪ್ರೀತಿಯ ಅಕ್ಕ ಸಂಗೀತಾ ಶೃಂಗೇರಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ಬಿಗ್ಬಾಸ್ ಸ್ಪರ್ಧಿ ನೀತು ಕೂಡ ಭಾಗಿಯಾಗಿದ್ದರು. ಇನ್ನೂ, ಹುಟ್ಟು ಹಬ್ಬದ ನಿಮಿತ್ತ ಡ್ರೋನ್ ಪ್ರತಾಪ್ ಹಾಗೂ ನೀತು ವನಜಾಕ್ಷಿ ಅವರು ಕೇಕ್ ತೆಗೆದುಕೊಂಡು ಸಂಗೀತಾ ಶೃಂಗೇರಿ ಅವರ ಮನೆಗೆ ಆಗಮಿಸಿದ್ದರು. ಜೊತೆಗೆ ರಕ್ಷಕ್ ಬುಲೆಟ್, ವಿನಯ್ ಗೌಡ, ನಮ್ರತಾ ಗೌಡ, ಅವರು ಎಲ್ಲರ ಜೊತೆಗೆ ಗ್ರ್ಯಾಂಡ್ ಆಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.
ಸಂಗೀತಾ ಶೃಂಗೇರಿ ಅವರ ಮನೆಗೆ ಭೇಟಿ ಕೊಟ್ಟ ಡ್ರೋನ್ ಪ್ರತಾಪ್ ಅವರಿಗಾಗಿಯೇ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಡ್ರೋನ್ ಪ್ರತಾಪ್ ಪ್ರೀತಿಯ ಅಕ್ಕ ಸಂಗೀತ ಶೃಂಗೇರಿಗೆ ತಿಳಿ ಹಸಿರು ಬಣ್ಣದ ಚೂಡಿದಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಜೊತೆಗೆ ಪ್ರೀತಿಯ ಅಕ್ಕ ಜೊತೆಗಿರುವೆ ಸದಾ ಅಂತಾ ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಈ ಇಬ್ಬರಿಗೂ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ