ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಮುಕ್ತಾಯ ಹಂತಕ್ಕೆ!
ಸತತ 6 ಪಂದ್ಯ ಗೆದ್ದು ಪ್ಲೇ ಆಫ್ ರೇಸ್ನಲ್ಲಿರೋ ಬೆಂಗಳೂರು ಟೀಮ್
ಭರ್ಜರಿ ಬ್ಯಾಟಿಂಗ್ ಮಾಡಿ ದಾಖಲೆ ಬರೆದ ಸ್ಟಾರ್ ಪ್ಲೇಯರ್ ಪಾಟಿದಾರ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಮುಕ್ತಾಯ ಹಂತಕ್ಕೆ ಬಂದಿದೆ. ಸತತ 6 ಪಂದ್ಯ ಗೆದ್ದು ಪ್ಲೇ ಆಫ್ ರೇಸ್ನಲ್ಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಚೆನ್ನೈ ವಿರುದ್ಧ ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಚೆನ್ನೈ ವಿರುದ್ಧ ಕೇವಲ 18 ರನ್ನಿಂದ ಗೆದ್ದರೆ ಸಾಕು ಆರ್ಸಿಬಿ ಪ್ಲೇ ಆಫ್ಗೆ ಹೋಗೋದು ಪಕ್ಕಾ. ಈ ಮಧ್ಯೆ ಆರ್ಸಿಬಿ ಫ್ಯೂಚರ್ ಕ್ಯಾಪ್ಟನ್ ರಜತ್ ಪಾಟಿದಾರ್ ಹೊಸ ದಾಖಲೆ ಬರೆದಿದ್ದಾರೆ.
ಮೊದಲರ್ಧ ಸೀಸನ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ರಜತ್ ಪಾಟಿದಾರ್ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಕಳೆದ ಐದು ಪಂದ್ಯಗಳಲ್ಲೂ ಪಾಟಿದಾರ್ ಬ್ಯಾಕ್ ಟು ಬ್ಯಾಕ್ 5 ಅರ್ಧಶತಕ ಸಿಡಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 200ಕ್ಕೂ ಹೆಚ್ಚು ಇದೆ. ಆರ್ಸಿಬಿ ಗೆಲುವಿನಲ್ಲಿ ರಜತ್ ಪಾಟಿದಾರ್ ಪ್ರಮುಖ ಪಾತ್ರವಹಿಸಿದ್ದಾರೆ.
ಪಾಟಿದಾರ್ ಈ ಸೀಸನ್ನಲ್ಲಿ ಆಡಿರೋ 11 ಇನ್ನಿಂಗ್ಸ್ನಲ್ಲಿ 178 ಬಾಲ್ನಲ್ಲಿ ಬರೋಬ್ಬರಿ 320 ರನ್ ಚಚ್ಚಿದ್ದಾರೆ. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 180 ಇತ್ತು. ಬರೋಬ್ಬರಿ 27 ಸಿಕ್ಸ್ ಮತ್ತು 17 ಫೋರ್ ಸಿಡಿಸಿದ್ದಾರೆ ರಜತ್.
ಇದನ್ನೂ ಓದಿ: ಹಾರ್ದಿಕ್ T20 ವಿಶ್ವಕಪ್ ಆಯ್ಕೆಗೆ ಕ್ಯಾಪ್ಟನ್ ರೋಹಿತ್ ಭಾರೀ ವಿರೋಧ; ಹೊರಬಿತ್ತು ಶಾಕಿಂಗ್ ಸತ್ಯ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್