ಹೈದರಾಬಾದ್ ವಿರುದ್ಧ ಲಕ್ನೋ ತಂಡಕ್ಕೆ ಹೀನಾಯ ಸೋಲು!
ಕ್ಯಾಪ್ಟನ್ ರಾಹುಲ್ ಮೇಲೆ ಲಕ್ನೋ ಟೀಮ್ ಮಾಲೀಕ ಕೂಗಾಟ
ಫ್ಯಾನ್ಸ್ ಆಕ್ರೋಶ ಬೆನ್ನಲೇ ಕ್ಷಮೆ ಕೇಳಿದ ಸಂಜೀವ್ ಗೋಯೆಂಕಾ
ಕಳೆದ ಕೆಲವು ದಿನಗಳ ಹಿಂದೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯವಾಗಿ ಸೋಲನ್ನಪ್ಪಿತ್ತು.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ ಅದ್ಭುತ ಪ್ರದರ್ಶನ ತೋರಿ ಕೇವಲ 9.4 ಓವರ್ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯಭೇರಿ ಬಾರಿಸಿತ್ತು.
ಹೈದರಾಬಾದ್ ಪರ ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡಿದ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 8 ಸಿಕ್ಸರ್, 8 ಫೋರ್ ಸಮೇತ 89 ರನ್ ಸಿಡಿಸಿದ್ರು. ಇನ್ನೊಂದೆಡೆ ಇವರಿಗೆ ಸಾಥ್ ನೀಡಿದ ಅಭಿಷೇಕ್ ಶರ್ಮಾ ಕೇವಲ 28 ಬಾಲ್ನಲ್ಲಿ 8 ಬೌಂಡರಿ, 6 ಸಿಕ್ಸರ್ ಸಮೇತ 75 ರನ್ ಚಚ್ಚಿದ್ರು.
ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್ ರೂಮ್ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್ ಕೆ.ಎಲ್ ರಾಹುಲ್ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಕೆ.ಎಲ್ ರಾಹುಲ್ ಕ್ಷಮೆ ಕೇಳಿದ ಗೋಯೆಂಕಾ
ಇನ್ನು, ಮಾಜಿ ಕ್ರಿಕೆಟರ್ಸ್ ಮತ್ತು ಫ್ಯಾನ್ಸ್ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಎಚ್ಚೆತ್ತ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್ ಕೆ.ಎಲ್ ರಾಹುಲ್ ಕ್ಷಮೆ ಕೇಳಿದ್ದಾರೆ. ನನ್ನಿಂದ ತಪ್ಪಾಗಿದ್ರೆ ದಯವಿಟ್ಟು ಕ್ಷಮಿಸಿ. ಅಭಿಮಾನಿಗಳು, ಸಪೋರ್ಟಿಂಗ್ ಸ್ಟ್ಯಾಫ್ ಮತ್ತು ಕೆ.ಎಲ್ ರಾಹುಲ್ಗೆ ಕ್ಷಮೆ ಕೇಳುತ್ತೇನೆ ಎಂದು ವಿಡಿಯೋ ಮಾಡಿದ್ದಾರೆ. ಅದರಲ್ಲೂ ರಾಹುಲ್ ಲಕ್ನೋ ತೊರೆದು ಆರ್ಸಿಬಿ ಸೇರಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ.
Sanjiv Goenka apologizes to Kl Rahul and the supporting staff of Lucknow Super Giants !!
Great Gesture 🙌🏼#DCvsLSG #DCvLSG #KLRahul pic.twitter.com/H29k55Ibme
— Crazy Arpita (@ArpitaKiVines) May 14, 2024
ಇದನ್ನೂ ಓದಿ: ‘ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್ ರಾಹುಲ್ ಆರ್ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್