ಪ್ಲೇ ಆಫ್ ರೇಸ್ನಲ್ಲಿರೋ ಆರ್ಸಿಬಿ ಟೀಮ್ಗೆ ಬಿಗ್ ಶಾಕ್
ಆರ್ಸಿಬಿ ಫ್ಯಾನ್ಸ್ಗೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ..!
ನಿವೃತ್ತಿ ಸುಳಿವು ಕೊಟ್ಟ ವಿರಾಟ್ ಕೊಹ್ಲಿ ಹೇಳಿದ್ದೇನು?
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಹೇಗಾದ್ರೂ ಮಾಡಿ ಪ್ಲೇ ಆಫ್ಗೆ ಹೋಗಲೇಬೇಕು ಎಂದು ಆರ್ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಹಾಗಾಗಿ ಮೇ 18ಕ್ಕೆ ನಡೆಯಲಿರೋ ಮೆಗಾ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಲು ಆರ್ಸಿಬಿ ಕಾತುರದಿಂದ ಕಾಯುತ್ತಿದೆ. ಇದರ ಮಧ್ಯೆ ವಿರಾಟ್ ಕೊಹ್ಲಿ ನಿವೃತ್ತಿ ಸುಳಿವು ನೀಡಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಬಹುದು ಅನ್ನೋ ಚರ್ಚೆ ಎಷ್ಟೋ ದಿನಗಳಿಂದ ನಡೆಯುತ್ತಲೇ ಇದೆ. ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಭಾರತ ಟಿ20 ತಂಡದಿಂದ ಔಟ್ ಆಗಲಿದ್ದಾರೆ. 35 ವರ್ಷದ ಕೊಹ್ಲಿಗೆ ಇದು ಕೊನೆ ಟಿ20 ವಿಶ್ವಕಪ್ ಎನ್ನಲಾಗಿತ್ತು. ಈ ಬಗ್ಗೆ ಕೊಹ್ಲಿ ಮೌನಮುರಿದಿದ್ದಾರೆ.
ನಾನು ಒಬ್ಬ ಕ್ರಿಕೆಟರ್. ನನಗೂ ಕೊನೆ ದಿನಾಂಕ ಎಂಬುದು ಇದೆ. ಅಯ್ಯೋ! ಮುಂದೇನು ಮಾಡೋದು ಅನ್ನೋ ಯೋಚನೆಯಲ್ಲೇ ನನ್ನ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಲು ಇಷ್ಟವಿಲ್ಲ. ಕಾರಣ ನಾನು ಸದಾ ಹೀಗೆ ಇರಲು ಸಾಧ್ಯವಿಲ್ಲ. ನಾನು ಸುಮ್ಮನೇ ನಿವೃತ್ತಿ ಘೋಷಿಸಲು ಸಾಧ್ಯವಿಲ್ಲ. ಒಮ್ಮೆ ನನ್ನ ಕೆಲಸ ಮುಗಿದರೆ ನಾನು ನಿವೃತ್ತಿ ಘೋಷಿಸುತ್ತೇನೆ. ನಿವೃತ್ತಿ ಘೋಷಿಸಿದ ನಂತರ ನಾನು ಯಾರಿಗೂ ಕಾಣಲ್ಲ. ಹಾಗಾಗಿ ನಾನು ಕ್ರಿಕೆಟ್ ಆಡುವತನಕ ಎಲ್ಲಾ ರೀತಿಯಲ್ಲೂ ತಂಡಕ್ಕೆ ಕೊಡುಗೆ ನೀಡಲು ಬಯಸುತ್ತೇನೆ ಎಂದರು.
ಅದ್ಭುತ ಫಾರ್ಮ್ನಲ್ಲಿರೋ ಕೊಹ್ಲಿ!
2024ರ ಐಪಿಎಲ್ನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತಾನು ಇದುವರೆಗೂ ಆಡಿರೋ 13 ಪಂದ್ಯಗಳಲ್ಲಿ 661 ರನ್ ಗಳಿಸಿದ್ದಾರೆ. ಈ ಪೈಕಿ 1 ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: RCB ಪ್ಲೇ ಆಫ್ಗೆ ಹೋಗೋ ಚಾನ್ಸ್ ಎಷ್ಟಿದೆ..? ಏನಿದು ಮಾಜಿ ಕ್ರಿಕೆಟರ್ಸ್ ಹೊಸ ಲೆಕ್ಕಾಚಾರ?