ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಇಂದು ಚೆನ್ನೈ ಸೂಪರ್ ಕಿಂಗ್ಸ್, ಆರ್ಸಿಬಿ ತಂಡದ ಮಧ್ಯೆ ರೋಚಕ ಪಂದ್ಯ
ಆರ್ಸಿಬಿ ಫಸ್ಟ್ ಬ್ಯಾಟಿಂಗ್, ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ಬೌಲಿಂಗ್!
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಕೆಕೆಆರ್, ರಾಜಸ್ತಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇ ಆಫ್ಗೆ ಹೋಗಿವೆ. ಉಳಿದ 1 ಸ್ಥಾನಕ್ಕಾಗಿ ಸಿಎಸ್ಕೆ, ಆರ್ಸಿಬಿ ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಇಂದು ನಡೆಯೋ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಲೇಬೇಕು ಎಂದು ಚೆನ್ನೈ, ಆರ್ಸಿಬಿ ತಂಡಗಳು ಎದುರು ನೋಡುತ್ತಿವೆ.
ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಆರ್ಸಿಬಿ ಫಸ್ಟ್ ಬ್ಯಾಟಿಂಗ್ ಮಾಡುತ್ತಿದೆ.
ಇನ್ನು, ಇಂದು ಗೆಲ್ಲಲೇಬೇಕಾದ ಕಾರಣ ಆರ್ಸಿಬಿ ಪ್ಲೇಯಿಂಗ್ ಎಲೆವೆನ್ನಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ವಿಲ್ ಜಾಕ್ಸ್ ಜಾಗಕ್ಕೆ ಮ್ಯಾಕ್ಸಿ ಬಂದಿದ್ದಾರೆ. ಸ್ವಪ್ನಿಲ್ ಸಿಂಗ್ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು ಎಂದು ವರದಿಯಾಗಿದೆ.
ಬ್ಯಾಟಿಂಗ್ ಶುರು ಮಾಡಿದ ಆರ್ಸಿಬಿ ಪರ ಎಂದಿನಂತೆ ಓಪನರ್ಸ್ ಆಗಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಬಂದಿದ್ದಾರೆ. ಆರ್ಸಿ ಮೊಲದ ಮೂರು ಓವರ್ಗಳಲ್ಲಿ 31 ರನ್ ಸಿಡಿಸಿದೆ. ಕೊಹ್ಲಿ 19 ಮತ್ತು ಫಾಫ್ 12 ರನ್ ಚಚ್ಚಿದ್ದಾರೆ. ಸದ್ಯ ಮಳೆ ಬಂದಿದ್ದು, ಪಂದ್ಯ ದಿಢೀರ್ ನಿಂತು ಹೋಗಿದೆ.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಮ್ಗೆ ಮ್ಯಾಚ್ ನೋಡಲು ಬಂದ ಆರ್ಸಿಬಿ ಫ್ಯಾನ್ಸ್ಗೆ ಬಿಗ್ ಶಾಕ್; ಏನಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ