newsfirstkannada.com

ಚಿನ್ನಸ್ವಾಮಿ ಸ್ಟೇಡಿಯಮ್​ಗೆ ಮ್ಯಾಚ್​​ ನೋಡಲು ಬಂದ ಆರ್​​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಏನಾಯ್ತು?​​

Share :

Published May 18, 2024 at 7:34pm

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮೇಲೆ ವೀಕ್ಷಕರಿಂದ ಗಂಭೀರ ಆರೋಪ

    ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ಸ್ಟೇಡಿಯಂ ಮೇಲೆ​ ದಾಳಿ

    ಕಳಪೆ ಆಹಾರ ಪೂರೈಕೆ ಮಾಡಿ ಕ್ರಿಕೆಟ್​​ ಪ್ರೇಮಿಗಳ ಜೀವದ ಜೊತೆ ಚೆಲ್ಲಾಟ

ಬೆಂಗಳೂರು: ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಚಿನ್ನಸ್ವಾಮಿ ಸ್ಟೇಡಿಯಂ ಮೇಲೆ ದಿಢೀರ್​​ ದಾಳಿ ನಡೆಸಿದ್ದಾರೆ. ಸ್ಟೇಡಿಯಂನ ಆಡಳಿತಾಧಿಕಾರಿಗಳು ಮತ್ತು ಕ್ಯಾಂಟಿನ್​ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿರೊ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮ್ಯಾಚ್​​ ನೋಡಲು ಬಂದಿದ್ದ ವೀಕ್ಷಕರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆಡಳಿತ ಮಂಡಳಿ ಕಳಪೆ ಗುಣಮಟ್ಟದ ಆಹಾರ ಪೂರೈಸಿರೊ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ನಂ​-18 ಅಂದ್ರೆ ವಿರಾಟ್​ ಧಗಧಗ ಉರಿತಾರೆ.. ಮೇ 18ರಂದೇ​ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?

ಕಳಪೆ ಆಹಾರ ಪೂರೈಕೆ ಮಾಡಿ ಕ್ರಿಕೆಟ್​​ ಪ್ರೇಮಿಗಳ ಜೀವದ ಜೊತೆ ಚೆಲ್ಲಾಟ ಆಡಿರೊ ಬಗ್ಗೆ ದೂರು ದಾಖಲಾದ ಬೆನ್ನಲ್ಲೇ, ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳ ತಂಡ ಚಿನ್ನಸ್ವಾಮಿ ಸ್ಟೇಡಿಯಂ ಮೇಲೆ ದಿಢೀರ್​ ದಾಳಿ ನಡೆಸಿದೆ. ಆಯುಕ್ತ ಕೆ. ಶ್ರೀನಿವಾಸ್​ ನಿರ್ದೇಶನದಂತೆ ನಿನ್ನೆ ಸಂಜೆ ಅಧಿಕಾರಿಗಳ ತಂಡ ಭೇಟಿ ನೀಡಿ ಕ್ಯಾಂಟಿನ್​​ನಲ್ಲಿ ಗ್ರಾಹಕರಿಗೆ ವಿತರಿಸೊ ಆಹಾರ ಪದಾರ್ಥಗಳ ಸ್ಯಾಂಪಲ್​​ ಪಡೆದು ಲ್ಯಾಬ್​​​ಗೆ ಕಳುಹಿಸಲಾಗಿದೆ.

ಮೇ 12ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಪಂದ್ಯ ವೀಕ್ಷಿಸಲು ಬಂದಿದ್ದ ಚೈತನ್ಯ ತಮ್ಮ ಸ್ನೇಹಿತನ ಜತೆ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸಿದ್ರು. ಆಹಾರ ಸೇವಿಸಿದ ಬಳಿಕ ಇಬ್ಬರೂ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು. ವೈದ್ಯರು, ಆಹಾರದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ಚೈತನ್ಯ ಕಳಪೆ ಆಹಾರ ನೀಡಲಾಗಿದೆ ಅಂತಾ ಆರೋಪಿಸಿ ಕ್ರೀಡಾಂಗಣದ ಕ್ಯಾಂಟೀನ್‌ ವ್ಯವಸ್ಥಾಪಕ ಹಾಗೂ ಆಡಳಿತ ವಿಭಾಗದ ವಿರುದ್ಧ ಕಬ್ಬನ್​​ಪಾರ್ಕ್​​​ ಪೊಲೀಸ್​ ಠಾಣೆಗೆ ದೂರು ನೀಡಿದ್ರು.

ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ, ಕ್ರೀಡಾಂಗಣದ ಕ್ಯಾಂಟೀನ್‌ ನಲ್ಲಿ ನೀಡುವ ಆಹಾರವನ್ನ ಪರೀಕ್ಷೆಗೆ ಒಳಪಡಿಸಿದೆ. ಒಟ್ಟಿನಲ್ಲಿಮ ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು, ಸಾರ್ವಜನಿಕರಿಗೆ ನೀಡುವ ಆಹಾರದ ಗುಣಮಟ್ಟ ಇದೀಗ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ತನಿಖೆ ಮುಂದುವರಿಸಲಾಗಿದ್ದು, ಕ್ಯಾಂಟೀನ್‌ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಲಾಗಿದೆ. ಆಹಾರ ಪರೀಕ್ಷೆಯ ವರದಿ ಬಂದ ಬಳಿಕ ಬೇರೆನಾದ್ರು ಮಿಶ್ರಣ ಮಾಡಲಾಗಿದೆಯಾ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನಸ್ವಾಮಿ ಸ್ಟೇಡಿಯಮ್​ಗೆ ಮ್ಯಾಚ್​​ ನೋಡಲು ಬಂದ ಆರ್​​ಸಿಬಿ ಫ್ಯಾನ್ಸ್​ಗೆ ಬಿಗ್​ ಶಾಕ್; ಏನಾಯ್ತು?​​

https://newsfirstlive.com/wp-content/uploads/2023/10/BNG_CHINNASWAMY_STADIUM.jpg

Load More