newsfirstkannada.com

×

ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​​.. ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತ; ಓರ್ವ ಸಾವು

Share :

Published May 19, 2024 at 6:58pm

Update May 19, 2024 at 6:59pm

    ಬೆಂಗಳೂರಲ್ಲಿ ಕುಡಿದು ಅಡ್ಡಾದಿಡ್ಡಿ ಕಾರ್​ ಚಾಲಕನ ಡ್ರೈವಿಂಗ್​

    ಹಿಂದಿನಿಂದ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದ ಕಾರ್​​!

    ಕಾರ್​ ಗುದ್ದಿದ ರಭಸಕ್ಕೆ ಬೈಕ್​ ಸವಾರ ಚಿಕಿತ್ಸೆ ಫಲಿಸದೆ ಸಾವು

ಬೆಂಗಳೂರು: ಬೈಕ್​​, ಕಾರ್​ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಸುಬ್ರಮಣ್ಯ ನಗರದ ವಿನಯ್​​ (32) ಮೃತ ಬೈಕ್​ ಸವಾರ.

ಕಾರ್​​ ಚಾಲಕನೋರ್ವ ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​ ಮಾಡಿದ್ದಾನೆ. ಮೊದಲು ವೇಗವಾಗಿ ಬಂದು ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಹಿಂದಿನಿಂದ ಬಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಕಾರ್​ ಗುದ್ದಿದ ರಭಸಕ್ಕೆ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್​ನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಇನ್ನು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಾರ್​ ಚಾಲಕ ಹರಿನಾಥ್​​ನನ್ನು ಮಲ್ಲೇಶ್ವರಂ ಟ್ರಾಫಿಕ್​ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಕಾರಿನಲ್ಲಿ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದ ಅಪ್ರಾಪ್ತ.. ಸ್ಥಳದಲ್ಲೇ ಇಬ್ಬರು ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​​.. ಕಾರ್​​, ಬೈಕ್​ ಮಧ್ಯೆ ಭೀಕರ ಅಪಘಾತ; ಓರ್ವ ಸಾವು

https://newsfirstlive.com/wp-content/uploads/2024/05/Bike-Accident-1.bmp

Load More