newsfirstkannada.com

×

ವಿಲನ್​ಗಳೇ ಹೀರೋಗಳಾದ ಕಥೆ.. ಈ ಯಂಗ್​ ಪ್ಲೇಯರ್ ಆಡಿದ ಪಂದ್ಯಗಳಲ್ಲಿ RCBಗೆ ರೋಚಕ ಗೆಲುವು

Share :

Published May 20, 2024 at 12:55pm

    ಸಾಲಿಡ್​ ಬ್ಯಾಟಿಂಗ್​, ಬೌಲಿಂಗ್​ ಪರ್ಫಾಮೆನ್ಸ್​ ನೀಡಿರುವ ಮ್ಯಾಕ್ಸ್​​ವೆಲ್

    ಎಲ್ಲ ಚಾಲೆಂಜ್​ಗಳನ್ನು ಎದುರಿಸಿ ಟೀಕೆಗಳಿಗೆ ಗೆಲುವಿನೊಂದಿಗೆ ಉತ್ತರ

    ಫಸ್ಟ್​​ ಹಾಫ್​ನಲ್ಲಿ ಹೀನಾಯ ಸ್ಥಿತಿ ತಲುಪಿದ್ದ ಆರ್​ಸಿಬಿ ಬೌಲಿಂಗ್, ಈಗ?

ಈ ಸೀಸನ್​ ಐಪಿಎಲ್​ನಲ್ಲಿ ಪಾತಾಳಕ್ಕೆ ಕುಸಿದಿದ್ದ ಆರ್​​ಸಿಬಿ ಫೀನಿಕ್ಸ್​ ಮೇಲೆದ್ದು ಬಂದಿದೆ. ಎಲ್ಲರ ಲೆಕ್ಕಾಚಾರವನ್ನ ತಲೆಕೆಳಗಾಗಿಸಿ ಪ್ಲೇ ಆಫ್​ಗೂ ರಾಯಲ್​ ಎಂಟ್ರಿ ಕೊಟ್ಟಿದೆ. ಸೋತು ಸುಣ್ಣವಾಗಿದ್ದ ಆರ್​​ಸಿಬಿ ಗೆಲುವಿನ ಹಳಿಗೆ ಮರಳಿದ್ರ ಹಿಂದೆ ಕೆಲ ಆಟಗಾರರ ಅಪಾರ ಶ್ರಮವಿದೆ. ಹೀನಾಯ ಸ್ಥಿತಿಗೆ ತಲುಪಿದ್ದಾಗ ವಿಲನ್​​ಗಳಾಗಿದ್ದವರು, ಇಂದು ಹೀರೋಗಳಾಗಿದ್ದಾರೆ.

ಐಪಿಎಲ್​ ಸೀಸನ್​ನ ಮೊದಲ​ 8 ಪಂದ್ಯಗಳಲ್ಲಿ ಆರ್​​ಸಿಬಿ ಗೆದ್ದಿದ್ದು ಕೇವಲ 1 ಪಂದ್ಯ ಮಾತ್ರ. ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದ್ದ ಆರ್​​ಸಿಬಿ, ಆ ಬಳಿಕ ರಣ ರೋಚಕ ರೀತಿಯಲ್ಲಿ ಕಮ್​​ಬ್ಯಾಕ್​ ಮಾಡ್ತು. ಸತತ 5 ಪಂದ್ಯ ಗೆದ್ದು ಪ್ಲೇ ಆಫ್​ ಕನಸನ್ನು ಜೀವಂತವಾಗಿಸಿರಿಕೊಂಡಿದ್ದ ಆರ್​​ಸಿಬಿ ಮುಂದೆ, ಚೆನ್ನೈ ವಿರುದ್ಧ ಭರ್ಜರಿ ಗೆಲುವಿನ ಟಾರ್ಗೆಟ್​ ಇತ್ತು. ಆ ಸವಾಲನ್ನೂ ಮೆಟ್ಟಿ ನಿಂತು ಪ್ಲೇ ಆಫ್​ಗೆ ರಾಯಲ್​ ಎಂಟ್ರಿ ಕೊಟ್ಟಿದೆ. ತಂಡದಂತೆ ಕೆಲ ಆಟಗಾರರು ಕೂಡ ಫಸ್ಟ್​ ಹಾಫ್​ನಲ್ಲಿ ಫ್ಲಾಪ್​​ ಆಗಿದ್ರು. ಈಗ ಅವ್ರು ಕಮ್​ಬ್ಯಾಕ್​ ಮಾಡಿದ್ರು. ತಂಡ ಕೂಡ ಪ್ಲೇ ಆಫ್​ಗೆ ಎಂಟ್ರಿ ಕೊಡ್ತು.

ಇದನ್ನೂ ಓದಿ: ರಸ್ತೆ ಮಧ್ಯೆ ಕೆಟ್ಟು ನಿಂತ 2 KSRTC ಬಸ್​..‌ ಕಿಲೋ ಮೀಟರ್​ವರೆಗಿನ ಟ್ರಾಫಿಕ್​ನಲ್ಲಿ ನಿಂತ ಆ್ಯಂಬುಲೆನ್ಸ್​; ಎಲ್ಲಿ?

ಅಖಾಡದಲ್ಲಿ ಮರುಕಳಿಸಿದ ಮಿಯಾನ್​ ಮ್ಯಾಜಿಕ್​.!

ಆರ್​​ಸಿಬಿ ತಂಡದ ಮೇನ್​ ವೆಪನ್​ ಮೊಹಮ್ಮದ್​ ಸಿರಾಜ್​ ಈ ಸೀಸನ್​ ಆರಂಭದಲ್ಲಿ ವೈಫಲ್ಯದ ಸುಳಿಗೆ ಸಿಲುಕಿದ್ರು. ಪವರ್​ಲೆಸ್​ ಪರ್ಫಾಮೆನ್ಸ್​ ನೀಡ್ತಿದ್ದ ಸಿರಾಜ್​, ತಂಡಕ್ಕೆ ಹೊರೆಯಾಗಿದ್ರು. ಆದ್ರೆ, ಕಳೆದ 5 ಪಂದ್ಯಗಳಲ್ಲಿ ಸಿರಾಜ್​ ಕಮ್​ಬ್ಯಾಕ್​ ಮಾಡಿದ್ದಾರೆ. ವಿಕೆಟ್​ ಬೇಟೆಯಾಡ್ತಿರುವ ಸಿರಾಜ್​, ಕಳೆಗುಂದಿದ್ದ ಆರ್​​ಸಿಬಿಗೆ ಶಕ್ತಿ ತುಂಬಿದ್ದಾರೆ.

ಕೋಟಿ ವೀರ ಕ್ಯಾಮರೂನ್​ ಗ್ರೀನ್​ ಆಲ್​​ರೌಂಡ್​ ಆಟ.!

ಬರೋಬ್ಬರಿ 18.5 ಕೋಟಿ ಮುಂಬೈ ಇಂಡಿಯನ್ಸ್​ನಿಂದ ಆರ್​ಸಿಬಿಗೆ ಟ್ರೇಡ್​ ಆಗಿದ್ದ ಕ್ಯಾಮರೂನ್​ ಗ್ರೀನ್​, ಆರಂಭದಲ್ಲಿ ಪ್ಲಾಫ್​ ಶೋ ನೀಡಿದ್ರು. ಯಾಕಪ್ಪಾ ಬೇಕಿತ್ತು ಈ ಟ್ರೇಡಿಂಗ್​ ಎಂದು ಕ್ರಿಕೆಟ್​ ಲೋಕವೇ ಪ್ರಶ್ನಿಸಿತ್ತು. ಈ ಎಲ್ಲ ಪ್ರಶ್ನೆಗಳಿಗೆ ಗ್ರೀನ್​ ಇದೀಗ ಪರ್ಫಾಮೆನ್ಸ್​ನ ಉತ್ತರ ಕೊಟ್ಟಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಕಮಾಲ್​ ಮಾಡ್ತಿರೋ ಗ್ರೀನ್​, ತಂಡದ ಫೈಟಿಂಗ್​ ಸ್ಪಿರಿಟ್​ ಹೆಚ್ಚಿಸಿದ್ದಾರೆ.

ಸ್ವಪ್ನಿಲ್​ ಸಿಂಗ್, RCB ಪ್ಲೇಯರ್

ಬೌಲಿಂಗ್​ ಬಲ ಹೆಚ್ಚಿಸಿದ ವೇಗಿ ಲಾಕಿ ಫರ್ಗ್ಯುಸನ್​.!

ಬೌಲಿಂಗ್​ ವೈಫಲ್ಯವೇ ಆರ್​​ಸಿಬಿ ಫಸ್ಟ್​​ ಹಾಫ್​ನಲ್ಲಿ ಹೀನಾಯ ಸ್ಥಿತಿ ತಲುಪುವಂತೆ ಮಾಡಿತ್ತು. ಆದ್ರೆ, ಕಳೆದ ಕೆಲ ಪಂದ್ಯಗಳಿಂದ ಆರ್​​ಸಿಬಿಯ ಬೌಲಿಂಗ್ ಕಂಪ್ಲೀಟ್​ ಚೇಂಜ್​ ಆಗಿದೆ. ಸಿರಾಜ್​ ಜೊತೆಗೆ ಲಾಕಿ ಫರ್ಗ್ಯೂಸನ್​ ಕೂಡ ಕಮ್​ಬ್ಯಾಕ್​ ಮಾಡಿದ್ದಾರೆ. ಕಳೆದ 3 ಪಂದ್ಯಗಳಿಂದ ವಿಕೆಟ್​ ಬೇಟೆಯಾಡ್ತಿರೋ ಫರ್ಗ್ಯೂಸನ್​, ರನ್​ಗಳಿಕೆಗೂ ಕಡಿವಾಣ ಹಾಕುವಲ್ಲಿ ಸಕ್ಸಸ್​ ಕಂಡಿದ್ದಾರೆ.

ಡು ಆರ್​​ ಡೈ ಕದನದಲ್ಲಿ ಮ್ಯಾಕ್ಸ್​ವೆಲ್​ ಮ್ಯಾಜಿಕ್​.!

ಫ್ಲಾಫ್​ ಶೋ ನೀಡಿ ಬೆಂಚ್​ ಸೀಮಿತವಾಗಿದ್ದ ಗ್ಲೆನ್​ ಮ್ಯಾಕ್ಸ್​ವೆಲ್​ ಕಮ್​ಬ್ಯಾಕ್​ ಪಂದ್ಯದಲ್ಲೇ, ಮ್ಯಾಜಿಕ್​ ಮಾಡಿಬಿಟ್ರು. ಸಿಎಸ್​​ಕೆ ಎದುರು ಕಮ್​​ಬ್ಯಾಕ್​ ಮಾಡಿದ ಮ್ಯಾಕ್ಸ್​ವೆಲ್​, ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿದ್ರು. ಬೌಲಿಂಗ್​ನಲ್ಲಿ ಮೊದಲ ಎಸೆತದಲ್ಲೆ ವಿಕೆಟ್​ ಉರುಳಿಸಿದ್ರು. ಸಾಲಿಡ್​ ಬೌಲಿಂಗ್​ ಪರ್ಫಾಮೆನ್ಸ್​ ನೀಡಿದ ಮ್ಯಾಕ್ಸಿ, ಪ್ಲೇ ಆಫ್​ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಇದನ್ನೂ ಓದಿ: ಲೋಕಲ್​ ಬಾಯ್ಸ್​​ನಂತೆ ಹೆಗಲ ಮೇಲೆ ಕೈ ಹಾಕೊಂಡು ಭರ್ಜರಿ ಸ್ಟೆಪ್ಸ್.. ಕಾರ್ತಿಕ್, ಸಿರಾಜ್ ಡ್ಯಾನ್ಸ್ ಹೇಗಿದೆ?

ಆರ್​​ಸಿಬಿಯ ಲಕ್​ ಬದಲಿಸಿದ ಸ್ವಪ್ನಿಲ್ ಸಿಂಗ್​.!

ಈ ಸ್ವಪ್ನಿಲ್​ ಸಿಂಗ್​ನ ಆರ್​​ಸಿಬಿಯ ಲಕ್ಕಿ ಮ್ಯಾನ್​ ಅಂದ್ರೂ ತಪ್ಪಿಲ್ಲ. ಸತತ ಸೋಲಿನ ಸುಳಿಗೆ ಸಿಲುಕಿ ಕಂಗೆಟ್ಟಿದ್ದ ಸಂದರ್ಭದಲ್ಲಿ ಸ್ವಪ್ನಿಲ್​ ಸಿಂಗ್​ ಚಾನ್ಸ್​​ ಗಿಟ್ಟಿಸಿಕೊಂಡ್ರು. ಅಲ್ಲಿಂದ ಈವರೆಗೂ ಆರ್​​ಸಿಬಿ ಸೋತೆ ಇಲ್ಲ. ಸ್ವಪ್ನಿಲ್​ ಆಡಿದ 6 ಪಂದ್ಯದಲ್ಲೂ ಆರ್​​ಸಿಬಿಯದ್ದೇ ಗೆಲುವು. ಲಕ್ಕಿ ಅನ್ನೋ ವಿಚಾರ ಮಾತ್ರವಲ್ಲ.. ಈ ಸ್ಪಿನ್ನರ್​​ ಪರ್ಫಾಮೆನ್ಸ್​ ಕೂಡ ಸಖತ್​​.. 6 ಪಂದ್ಯದಲ್ಲಿ 6 ವಿಕೆಟ್​ ಬೇಟೆಯಾಡಿರೋ, ಸ್ವಪ್ನಿಲ್​​ ಕೇವಲ 8.76ರ ಎಕಾನಮಿಯಲ್ಲಿ ರನ್​ ಬಿಟ್ಟು ಕೊಟ್ಟಿದ್ದಾರೆ. ಅಂತಿಮ ಹಂತದಲ್ಲಿ ಬ್ಯಾಟ್​ ಹಿಡಿದೂ ಘರ್ಜಿಸಿದ್ದಾರೆ.

ಫಸ್ಟ್​ ಹಾಫ್​​ನಲ್ಲಿ ಮಂಕಾಗಿದ್ದ ಆರ್​​ಸಿಬಿ ಸ್ಟಾರ್ಸ್​​, ಸೆಕೆಂಡ್​ ಹಾಫ್​ನಲ್ಲಿ ಕಮಾಲ್​ ಮಾಡಿದ್ದಾರೆ. ಈ ಆಟಗಾರರ ಕಮ್​ಬ್ಯಾಕ್​ನಿಂದ​ ತಂಡ ಕೂಡ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದೆ. ಇದೇ ಕನ್ಸಿಟ್ಟೆಂಟ್​ ಪರ್ಫಾಮೆನ್ಸ್​ ಅನ್ನ ಮುಂದಿನ ಪಂದ್ಯಗಳಲ್ಲೂ ಇವ್ರು ಮುಂದುವರೆಸಲಿ ಅನ್ನೋದು ಫ್ಯಾನ್ಸ್​ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಲನ್​ಗಳೇ ಹೀರೋಗಳಾದ ಕಥೆ.. ಈ ಯಂಗ್​ ಪ್ಲೇಯರ್ ಆಡಿದ ಪಂದ್ಯಗಳಲ್ಲಿ RCBಗೆ ರೋಚಕ ಗೆಲುವು

https://newsfirstlive.com/wp-content/uploads/2024/05/RCB_Swapnil_Singh.jpg

Load More