newsfirstkannada.com

×

ದಿನೇಶ್ ಕಾರ್ತಿಕ್​​ಗೆ ಇನ್ನೂ ಕಾಡ್ತಿದೆ ಅದೊಂದು ಕೊರಗು.. ಧೋನಿ ಸಣ್ಣ ಮನಸ್ಸು ಮಾಡಿದ್ರೂ ಈಡೇರಿಬಿಡ್ತಿತ್ತು..!

Share :

Published May 21, 2024 at 11:51am

    ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ರನ್​​ ಸುನಾಮಿ ಎಬ್ಬಿಸುವ ಆಟಗಾರ DK

    ದಿನೇಶ್​ ಕಾರ್ತಿಕ್​​ಗೆ ಐಪಿಎಲ್​​​ ಎಲ್ಲವನ್ನೂ ಕೊಟ್ಟಿದೆ, ಆದರೆ..!

    ನೇಮ್​​ ಅಂಡ್ ಫೇಮ್​ ಇದ್ರೂ ಡಿಕೆಗೆ ಈಗಲೂ ಒಂದು ಕೊರಗು

ದಿನೇಶ್​ ಕಾರ್ತಿಕ್​​ಗೆ ಐಪಿಎಲ್​​​ ಎಲ್ಲವನ್ನ ಕೊಟ್ಟಿದೆ. ಅಭಿಮಾನಿಗಳು ದೇವರುಗಳು ಡಿಕೆಯನ್ನು ತಲೆಮೇಲೆ ಹೊತ್ತು ಮೆರೆಸ್ತಿದ್ದಾರೆ. ಇಷ್ಟೆಲ್ಲಾ ನೇಮ್​​ ಅಂಡ್ ಫೇಮ್​ ಇದ್ರೂ ಡಿಕೆಗೆ ಈಗಲೂ ಒಂದು ಕೊರಗು ಕಾಡ್ತಿದೆ.

ದಿನೇಶ್ ಕಾರ್ತಿಕ್​​​..! ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ರನ್​​ ಸುನಾಮಿ ಎಬ್ಬಿಸುವ ಆಟಗಾರ. ಈತನಿಗೆ ಬೌಲರ್​​​ ಮ್ಯಾಟರ್ ಅಲ್ಲವೇ ಅಲ್ಲ. ಗೊತ್ತಿರೋದೊಂದೇ ದಂಡಂ ದಶಗುಣಂ ಆಟ. ಹೀಗಾಗಿನೇ ಡಿಕೆ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಐಪಿಎಲ್​ನಲ್ಲಿ ಆರ್​ಸಿಬಿ ಪರ ಡಿಕೆ ಆರ್ಭಟ ಜೋರಾಗಿದೆ. ಫಿನಿಶಿಂಗ್​ನಲ್ಲಿ ಜಾದೂ ಮಾಡ್ತಿದ್ದಾರೆ. ಐಪಿಎಲ್​ನಿಂದ ಮನೆಮಾತಾದ ದಿನೇಶ್​ ಕಾರ್ತಿಕ್​​ಗೆ ಅದೇ ಐಪಿಎಲ್​​ ಎಂದೆಂದೂ ಮರೆಲಾಗದ ನೋವನ್ನು ಕೊಟ್ಟಿದೆ. ಎಲ್ಲಾ ಇದ್ರೂ ಆ ಒಂದು ಡ್ರೀಮ್ ಈಡೇರಲಿಲ್ಲ ಅನ್ನೋ ಕೊರಗು ಈಗಲೂ ಅವರನ್ನು ಕಾಡ್ತಿದೆ.

ಇದನ್ನೂ ಓದಿ:ಧೋನಿಯನ್ನು ಹುಡ್ಕೊಂಡು ಹೋಗಿದ್ದ ಕೊಹ್ಲಿಗೆ ಸಿಕ್ಕಿದೆ ಸ್ಪೆಷಲ್ ಮೆಸೇಜ್.. ಇದು RCB ಫ್ಯಾನ್ಸ್​ಗೆ ಖುಷಿ ಸುದ್ದಿ..!

2008 ರಲ್ಲಿ ಐಪಿಎಲ್​ ಜನ್ಮತಾಳಿತು. ಆಗ ತಾನೇ ಪ್ರವರ್ಧಮಾನಕ್ಕೆ ಬಂದಿದ್ದ ಡಿಕೆ ಹರಾಜಿನಲ್ಲಿ ಸಿಎಸ್​ಕೆ ತಂಡ ತನ್ನನ್ನ ಖರೀದಿಸುತ್ತೆ ಅನ್ನೋ ಅತಿಯಾದ ವಿಶ್ವಾಸದಲ್ಲಿದ್ರು. ಯಾಕಂದ್ರೆ ಸಿಎಸ್​ಕೆ ಮಾಲೀಕ ತಮಿಳುನಾಡಿನವರು. ತಾನು ಕೂಡ ಅದೇ ರಾಜ್ಯದವನು. ಹಾಗಾಗಿ ತಾನು ಚೊಚ್ಚಲ ಐಪಿಎಲ್​ನಲ್ಲಿ ತವರಿನ ಫ್ರಾಂಚೈಸಿ ಪರ ಆಡುವುದು ಫಿಕ್ಸ್​ ಎಂದೇ ಭಾವಿಸಿದ್ರು. ಧೋನಿಯನ್ನ ಸಿಎಸ್​ಕೆ ಬಿಡ್ ಮಾಡಿದ ಮೇಲಂತೂ ಆ ನಿರೀಕ್ಷೆ ಇನ್ನಷ್ಟು ಹೆಚ್ಚಾಯ್ತು. ಯಾಕಂದ್ರೆ ಡಿಕೆ, ಧೋನಿ ಜೊತೆಗೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಂಡಿದ್ರು.

ಇದನ್ನೂ ಓದಿ:Rain alert: ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ

ಹಾಗಾಗಿ ಕಣ್ಣು ಪಿಟುಕಿಸದೇ ನಾಲ್ಕು ತಾಸು ಇಂಗ್ಲೆಂಡ್​ನಲ್ಲಿ ಟಿವಿ ಮುಂದೆ ಕೂತಿದ್ರು. ಆದ್ರೆ ಚೆನ್ನೈ ತಂಡ ಡಿಕೆಯನ್ನ ಖರೀದಿಸಲೇ ಇಲ್ಲ. ಇದರಿಂದ ಬೇಸರಗೊಂಡಿದ್ದ ಡಿಕೆ ರೂಮ್​ನಿಂದ ಹೊರನಡೆದಿದ್ರು. ಕೊನೆಗೆ ದಿನೇಶ್ ಕಾರ್ತಿಕ್​​​​ರನ್ನ ಡೆಲ್ಲಿ ಕ್ಯಾಪಿಟಲ್ಸ್​​ ಬಿಡ್​ ಮಾಡ್ತಂತೆ. ಈ ವಿಚಾರವನ್ನ ಡಿಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದಿನೇಶ್ ಕಾರ್ತಿಕ್​​ಗೆ ಇನ್ನೂ ಕಾಡ್ತಿದೆ ಅದೊಂದು ಕೊರಗು.. ಧೋನಿ ಸಣ್ಣ ಮನಸ್ಸು ಮಾಡಿದ್ರೂ ಈಡೇರಿಬಿಡ್ತಿತ್ತು..!

https://newsfirstlive.com/wp-content/uploads/2024/05/DINESH-KARTHIK-3-1.jpg

Load More