ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಸಮರ
ಇಂದು ಮಿನಿ ಸಮರದಲ್ಲಿ ಹೈದರಾಬಾದ್, ಕೆಕೆಆರ್ ತಂಡಗಳು ಸೆಣಸಾಟ!
ಕ್ವಾಲಿಫೈಯರ್ ರೋಚಕ ಪಂದ್ಯಕ್ಕೆ ಮುನ್ನವೇ ಹೈದರಾಬಾದ್ಗೆ ಬಿಗ್ ಶಾಕ್
ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ನೇ ಮಿನಿ ಸಮರದಲ್ಲಿ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಇನ್ನು, ಇಂದು ಗೆದ್ದ ತಂಡ ನೇರ ಫೈನಲ್ಗೆ ಹೋಗಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಬಳಿಕ ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜತೆಗೆ ಸೋತ ಟೀಮ್ ಮತ್ತೆ ಕಣಕ್ಕಿಳಿಯಲಿದೆ.
ಸದ್ಯ ನಡೆಯುತ್ತಿರೋ ಐಪಿಎಲ್ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಹೈದರಾಬಾದ್ ಉತ್ತಮ ಪ್ರದರ್ಶನ ನೀಡಿವೆ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನದಲ್ಲಿದೆ. ಇಂದು ಹೇಗಾದ್ರೂ ಗೆದ್ದು ಗೆದ್ದು ಫೈನಲ್ಗೆ ಹೋಗಬೇಕು ಎಂದು ಹೈದರಾಬಾದ್ ಜಿದ್ದಿಗೆ ಬಿದ್ದಿದೆ.
ರೋಚಕ ಪಂದ್ಯಕ್ಕೆ ಮುನ್ನವೇ ಹೈದರಾಬಾದ್ಗೆ ಶಾಕಿಂಗ್ ನ್ಯೂಸ್ ಇದೆ. ತಂಡದ ಪರ ಅಭಿಷೇಕ್ ಶರ್ಮಾ ಅವರೊಂದಿಗೆ ಟ್ರಾವಿಸ್ ಹೆಡ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಇದು ಹೈದರಾಬಾದ್ಗೆ ಬಹಳ ನೆರವಾಗುತ್ತಿತ್ತು. ಈಗ ಟ್ರಾವಿಸ್ ಹೆಡ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇಲ್ಲ. ಹಾಗಾಗಿ ಇದು ಹೈದರಾಬಾದ್ಗೆ ಭಾರೀ ಹಿನ್ನಡೆ ಆಗಿದೆ.
ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಮುನ್ನವೇ ಕೆಕೆಆರ್ಗೆ ಬಿಗ್ ಶಾಕ್.. ಇದು ಆರ್ಸಿಬಿಗೂ ಗುಡ್ನ್ಯೂಸ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್