ಇಂದು ರಾಜಸ್ಥಾನ್ ರಾಯಲ್ಸ್, ಬೆಂಗಳೂರು ಟೀಮ್ ಮಧ್ಯೆ ರೋಚಕ ಪಂದ್ಯ
ರೋಚಕ ಪಂದ್ಯದಲ್ಲಿ ರಾಜಸ್ಥಾನ್ಗೆ ಸಾಧಾರಣ ಟಾರ್ಗೆಟ್ ಕೊಟ್ಟ ಆರ್ಸಿಬಿ!
ಆರ್ಸಿಬಿ ವಿರುದ್ಧ ಗೆದ್ದು ಕ್ವಾಲಿಫೈಯರ್ 2ಗೆ ಎಂಟ್ರಿ ಕೊಟ್ಟ ರಾಜಸ್ಥಾನ್ ಟೀಮ್
ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ 17ನೇ ಸೀಸನ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆದ್ದು ಬೀಗಿದೆ. ಈ ಮೂಲಕ ಕ್ವಾಲಿಫೈಯರ್ 2ಕ್ಕೆ ಎಂಟ್ರಿ ಕೊಟ್ಟಿದೆ.
ಆರ್ಸಿಬಿ ನೀಡಿದ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. 30 ಬಾಲ್ನಲ್ಲಿ 8 ಫೋರ್ನೊಂದಿಗೆ 45 ರನ್ ಚಚ್ಚಿದ್ರು. ಕ್ಯಾಡ್ಮೋರ್ 20, ಸ್ಯಾಮ್ಸನ್ 17, ರಿಯಾನ್ ಪರಾಗ್ 36, ಶಿಮ್ರಾನ್ ಹೆಟ್ಮೇರ್ 26 ರನ್ ಗಳಿಸಿದ್ರು. ರಾಜಸ್ಥಾನ್ ರಾಯಲ್ಸ್ ಇನ್ನೂ ಒಂದು ಓವರ್ ಬಾಕಿ ಇರುವಂತೆ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಗೆದ್ದು ಬೀಗಿದೆ.
ಟಾಸ್ ಸೋತ್ರೂ ಫಸ್ಟ್ ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಕೇವಲ 14 ಬಾಲ್ನಲ್ಲಿ 17 ರನ್ ಗಳಿಸಿ ಔಟಾದ್ರು. ಈ ಪೈಕಿ 1 ಸಿಕ್ಸರ್, 2 ಫೋರ್ ಗಳಿಸಿದ್ರು. ಬೌಂಡರಿ ಬಾರಿಸಲು ಹೋಗಿ ಟ್ರೆಂಟ್ ಬೌಲ್ಟ್ ಓವರ್ನಲ್ಲಿ ಕ್ಯಾಚ್ ನೀಡಿದ್ರು.
ಇವರ ಬಳಿಕ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ್ದ ವಿರಾಟ್ ಕೊಹ್ಲಿ 24 ಬಾಲ್ನಲ್ಲಿ 33 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಚಹಾಲ್ ಬೌಲಿಂಗ್ನಲ್ಲಿ ಸಿಕ್ಸ್ ಬಾರಿಸಲು ಹೋಗಿ ಕ್ಯಾಚ್ ಕೊಟ್ಟರು. ಈ ಪೈಕಿ ಕೊಹ್ಲಿ 1 ಸಿಕ್ಸರ್, 3 ಫೋರ್ ಬಾರಿಸಿದ್ರು.
ಬಳಿಕ ಬಂದ ಕ್ಯಾಮೆರಾನ್ ಗ್ರೀನ್ 21 ಬಾಲ್ನಲ್ಲಿ 1 ಸಿಕ್ಸರ್, 2 ಫೋರ್ ಸಮೇತ 27 ರನ್ ಸಿಡಿಸಿದ್ರು. ರಜತ್ ಪಾಟಿದಾರ್ 22 ಬಾಲ್ನಲ್ಲಿ 2 ಸಿಕ್ಸರ್, 2 ಫೋರ್ ಸಮೇತ 34 ರನ್ ಚಚ್ಚಿದ್ರು. ಮಹಿಪಾಲ್ ಲೋಮ್ರೋರ್ 17 ಬಾಲ್ನಲ್ಲಿ 2 ಸಿಕ್ಸರ್, 2 ಫೋರ್ ಸಮೇತ 32 ರನ್ ಬಾರಿಸಿದ್ರು. ದಿನೇಶ್ ಕಾರ್ತಿಕ್ ಕೇವಲ 11 ರನ್ಗೆ ವಿಕೆಟ್ ಒಪ್ಪಿಸಿದ್ರು. ಆರ್ಸಿಬಿ ನಿಗದಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಕಲೆ ಹಾಕಿತ್ತು.
ಇದನ್ನೂ ಓದಿ: ಕ್ರಿಕೆಟ್ ಸಹವಾಸವೇ ಬೇಡ ಎಂದಿದ್ದ ಆಟಗಾರನನ್ನು ಆರ್ಸಿಬಿಗೆ ಕರೆ ತಂದ ಕೊಹ್ಲಿ.. ಯಾರು ಆ ಪ್ಲೇಯರ್?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ