newsfirstkannada.com

×

ಫಾಫ್​ಗೆ ಸೆಂಡ್​ ಆಫ್​​ ನೀಡಲು ಕೌಂಟ್​​ಡೌನ್.. ತೆರೆಮರೆಯಲ್ಲಿ RCB ಭಾರೀ ತಯಾರಿ..!

Share :

Published May 24, 2024 at 2:59pm

    IPL ಸೀಸನ್​​ 17ರಲ್ಲಿ ಆರ್​​ಸಿಬಿ ಆಟ ಅಂತ್ಯ

    ಕಪ್​ ಬರ ನೀಗಲಿಲ್ಲ.. ಕನಸು ನನಸಾಗಲಿಲ್ಲ..!

    ಥ್ಯಾಂಕ್ಯೂ ಫಾಫ್​.. ನಾಯಕನಿಗೆ ಸೋಲಿನ ವಿದಾಯ?

ಐಪಿಎಲ್ ಸೀಸನ್​​ 17ರಲ್ಲಿ ಆರ್​​ಸಿಬಿ ಆಟ ಅಂತ್ಯವಾಗಿದೆ. ಟೂರ್ನಿಗೆ ಸೋಲಿನ ವಿದಾಯ ಹೇಳಿದ ಬೆನ್ನಲ್ಲೇ, ಆರ್​​ಸಿಬಿಯಲ್ಲೀಗ ಬದಲಾವಣೆಯ ಸದ್ದು ಜೋರಾಗಿದೆ. ನಾಯಕ ಫಾಫ್​ ಡುಪ್ಲೆಸಿಗೆ ಸೆಂಡ್​ ಆಫ್​​ ನೀಡಲು ಕೌಂಟ್​​ಡೌನ್​​ ಶುರುವಾಗಿದೆ.

ಸೀಸನ್​ 17ರ ಐಪಿಎಲ್​ಗೆ ಆರ್​​ಸಿಬಿ ಸೋಲಿನ ವಿದಾಯ ಹೇಳಿದೆ. ಅತ್ಯಂತ ಹೀನಾಯ ಆರಂಭ ಮಾಡಿ ಆ ಬಳಿಕ ಫಿನಿಕ್ಸ್​​ನಂತೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಆರ್ಮಿ ಈ ಸೀಸನ್​​ನಲ್ಲಿ ಎದ್ದು ಬಂದಿತ್ತು. ಆರ್​​ಸಿಬಿ ರಣರೋಚಕ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿದ ಶೈಲಿ ಈ ಸಲ ಕಪ್​ ನಮ್ದೇ ಅನ್ನೋ ಭರವಸೆಯನ್ನು ಹೆಚ್ಚಿಸಿತ್ತು. ಸತತ 6 ಪಂದ್ಯ ಗೆದ್ದು ಪ್ಲೇ ಆಫ್​​ಗೆ ಎಂಟ್ರಿ ಕೊಟ್ಟ ಆರ್​​ಸಿಬಿ, ಎಲಿಮಿನೇಟರ್​ ಫೈಟ್​ನಲ್ಲಿ ಎಡವಿತು.

ಇದನ್ನೂ ಓದಿ:Breaking News: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್​.. ಐದು ದಿನ ಎಣ್ಣೆ ಎಲ್ಲೂ ಸಿಗಲ್ಲ..!

ಕಪ್​ ಬರ ನೀಗಲಿಲ್ಲ.. ಕನಸು ನನಸಾಗಲಿಲ್ಲ

ನಮೋ ಮೈದಾನದಲ್ಲಿ ರಾಜಸ್ಥಾನ್​ ಎದುರು ಸೋತ ಆರ್​ಸಿಬಿ, ಟೂರ್ನಿಯಿಂದ ಹೊರಬಿತ್ತು. ಇದ್ರೊಂದಿಗೆ ಕಪ್​ ಕನಸೂ ನುಚ್ಚು ನೂರಾಯ್ತು. ಇಷ್ಟೇ ಅಲ್ಲ.. ಆರ್​​ಸಿಬಿಯೊಂದಿಗೆ ನಾಯಕ ಫಾಫ್​ ಡುಪ್ಲೆಸಿಯ ಭಾಂದವ್ಯ ಕೂಡ ಬಹುತೇಕ ಅಂತಿಮ ಘಟ್ಟ ತಲುಪಿದೆ. ಕಳೆದ 3 ಸೀಸನ್​ಗಳಿಂದ ಆರ್​​ಸಿಬಿಯನ್ನ ಮುನ್ನಡೆಸಿದ ನಾಯಕ ಡುಪ್ಲೆಸಿ, ಮುಂದಿನ ಸೀಸನ್​ನಲ್ಲಿ ಆರ್​​ಸಿಬಿ ಪರ ಆಡೋದು ಅನುಮಾನ.

ಮೆಗಾ ಆಕ್ಷನ್​​ಗೂ ಮುನ್ನ ತಂಡದಿಂದ ರಿಲೀಸ್​

ಸೌತ್​ ಆಫ್ರಿಕಾದ ಫಾಫ್​ ಡುಪ್ಲೆಸಿ ಆರ್​​ಸಿಬಿಗೆ ಬಂದು 3 ವರ್ಷ ಆಯ್ತು. ಡುಪ್ಲೆಸಿ ತಂಡ ಸೇರಿದಾಗಿಂದ ಹೀನಾಯ ಪರ್ಫಾಮೆನ್ಸ್​ ಏನು ನೀಡಿಲ್ಲ. ನಾಯಕನಾಗಿ ಬ್ಯಾಟ್ಸ್​ಮನ್​ ಆಗಿ ತಂಡಕ್ಕೆ ನೆರವಾಗಿದ್ದಾರೆ. 3 ವರ್ಷದಲ್ಲಿ 2 ಬಾರಿ ತಂಡವನ್ನೂ ಪ್ಲೇ ಆಫ್​ಗೆ ಕೊಂಡೊಯ್ದಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ, ಮುಂಬರೋ ಮೆಗಾ ಆಕ್ಷನ್​ನಲ್ಲಿ ಡುಪ್ಲೆಸಿಯನ್ನ ತಂಡದಿಂದ ಕೈ ಬಿಡೋ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಕಾರಣಗಳು ಇವೆ.

ಇದನ್ನೂ ಓದಿ:ಕಪ್ ಗೆಲ್ಲಬೇಕು ಅಂದರೆ ಕೊಹ್ಲಿ RCB ತೊರೆಯಬೇಕು -ಕಿಡಿ ಹೊತ್ತಿಸಿದ ಮಾಜಿ ಆಟಗಾರ

39ರ ಗಡಿ ದಾಟಿದ ವಯಸ್ಸು, ಆಟವೂ ಇನ್​ಕನ್ಸಿಸ್ಟೆಂಟ್​​​​

ಫಾಫ್​ ಡುಪ್ಲೆಸಿ ವಯಸ್ಸು ಸದ್ಯ 39ರ ಗಡಿ ದಾಟಿದೆ. ಮುಂದಿನ ಜುಲೈ ಬಂದ್ರೆ 40ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅತ್ಯದ್ಭುತ ಫಿಟ್​ನೆಸ್​ ಹೊಂದಿದ್ದಾರೆ ನಿಜ. ಹಳೆಯ ಚಾರ್ಮ್​​ ಕಳೆದು ಹೋಗಿದೆ. ಬ್ಯಾಟಿಂಗ್​ನಲ್ಲಂತೂ ಇನ್​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಈ ಸೀಸನ್​​ನ ಆರಂಭಿಕ ಪಂದ್ಯಗಳಲ್ಲಂತೂ ರನ್​ಗಳಿಕೆಗೆ ಪರದಾಡಿದ್ರು. ಒಟ್ಟಾರೆ, 15 ಪಂದ್ಯವನ್ನಾಡಿದ ಫಾಫ್​ ಡುಪ್ಲೆಸಿ ಕೇವಲ 29.20ರ ಸರಾಸರಿಯಲ್ಲಿ ರನ್​ಗಳಿಸಿದ್ರು.

ಭವಿಷ್ಯದ ನಾಯಕನ ಹುಡುಕಾಟದಲ್ಲಿ ಆರ್​​ಸಿಬಿ
ಈ ಬಾರಿಯ ಮೆಗಾ ಆಕ್ಷನ್​ಗೂ ಮುನ್ನ ತಂಡದಲ್ಲಿ ಎಷ್ಟು ಆಟಗಾರರನ್ನ ರಿಟೈನ್​​ ಮಾಡಿಕೊಳ್ಳಬಹುದು ಅನ್ನೋದ್ರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆರ್​​ಸಿಬಿ ಮ್ಯಾನೇಜ್​ಮೆಂಟ್​ ಮೇಜರ್​ ಸರ್ಜರಿ ಮಾಡೋ ಸಾಧ್ಯತೆ ದಟ್ಟವಾಗಿದೆ. ಹಿರಿಯ ಆಟಗಾರರಿಗೆ ಕೊಕ್​ ಕೊಟ್ಟು, ಯುವ ಆಟಗಾರನ್ನು ಉಳಿಸಿಕೊಳ್ಳೋ ಲೆಕ್ಕಾಚಾರ ಫ್ರಾಂಚೈಸಿಯದ್ದಾಗಿದೆ. ನಾಯಕನ ವಿಚಾರದಲ್ಲೂ ಇದೇ ಚಿಂತನೆ ನಡೆದಿದೆ.

ಇದನ್ನೂ ಓದಿ:ಮ್ಯಾಕ್ಸಿ ಆರ್​​ಸಿಬಿ ಸೋಲಿಗೆ ಹೆಂಗೆಲ್ಲ ಕಾರಣರಾದರು? ಕಂಪ್ಲೀಟ್ ಡೀಟೈಲ್ಸ್​..!

ಮುಂದಿನ ಸೀಸನ್​ನಲ್ಲಿ ಆರ್​​ಸಿಬಿಗೆ ನೂತನ ನಾಯಕ

ಫಾಫ್​ ಡುಪ್ಲೆಸಿಗೆ ಕೊಕ್​​ ಕೊಟ್ಟು, ಭವಿಷ್ಯದ ದೃಷ್ಟಿಯಿಂದ ಹೊಸ ನಾಯಕನ ನೇಮಿಸೋ ಚರ್ಚೆ ತಂಡದ ಆಂತರಿಕ ವಲಯದಲ್ಲಿ ಈಗಾಗಲೇ ನಡೆದಿದೆ ಎನ್ನಲಾಗ್ತಿದೆ. ಯುವ ಆಟಗಾರನಿಗೆ ಪಟ್ಟ ಕಟ್ಟಿ, ಮುಂದಿನ ಕೆಲ ವರ್ಷಗಳ ಕಾಲ ತಂಡದ ಸಾರಥ್ಯ ನೀಡೋ ಲೆಕ್ಕಾಚಾರವಿದೆ. ಕನ್ನಡಿಗ ಕೆ.ಎಲ್​ ರಾಹುಲ್​ನ ತಂಡಕ್ಕೆ ಕರೆ ತರೋ ಕಸರತ್ತು ತೆರೆಮರೆಯಲ್ಲಿ ಆರಂಭವಾಗಿದೆ.

ಐಪಿಎಲ್​ ಟೂರ್ನಿಯಿಂದ ಆರ್​​ಸಿಬಿ ಹೊರ ಬಿದ್ದ ಬೆನ್ನಲ್ಲೇ ಬದಲಾವಣೆಯ ಚರ್ಚೆಗಳು ಜೋರಾಗಿವೆ. 3 ವರ್ಷಗಳ ಕಾಲ ಆರ್​​ಸಿಬಿ ತಂಡವನ್ನ ಮುನ್ನಡೆಸಿದ ಫಾಫ್​ ಡುಪ್ಲೆಸಿಗೆ ಹೆಸರೇ ಸದ್ಯ ಮುಂಚೂಣಿಯಲ್ಲಿದೆ. ಫಾಫ್​ ಡುಪ್ಲೆಸಿಗೆ ಕೊಕ್​ ಕೊಟ್ಟು, ನೂತನ ನಾಯಕನಿಗೆ ಮಣೆ ಹಾಕೋ ಚರ್ಚೆಗಳೂ ನಡೆದಿವೆ. ಈ ವರ್ಷಾಂತ್ಯದಲ್ಲಿ ಮೆಗಾ ಆಕ್ಷನ್​ ನಡೆಯೋದ್ರಿಂದ ಎಲ್ಲಾ ಅಂತೆ-ಕಂತೆ ಶೀಘ್ರದಲ್ಲೇ ಬ್ರೇಕ್​ ಬೀಳಲಿದೆ.

ಇದನ್ನೂ ಓದಿ:ಕರ್ನಾಟಕದಿಂದ ತಿರುಪತಿಗೆ ಹೊರಟಿದ್ದ ಕಾರು ಭೀಕರ ಅಪಘಾತ.. ನಾಲ್ವರು ಸಾವು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಫಾಫ್​ಗೆ ಸೆಂಡ್​ ಆಫ್​​ ನೀಡಲು ಕೌಂಟ್​​ಡೌನ್.. ತೆರೆಮರೆಯಲ್ಲಿ RCB ಭಾರೀ ತಯಾರಿ..!

https://newsfirstlive.com/wp-content/uploads/2024/05/FAF-5.jpg

Load More