newsfirstkannada.com

×

ರೇವ್ ಪಾರ್ಟಿಯಿಂದ ನಟಿ ಹೇಮಾ ಭವಿಷ್ಯದ ಮೇಲೆ ಕರಿನೆರಳು.. ಟಾಲಿವುಡ್​​ನಿಂದ ಹೊರಬಿತ್ತು ಶಾಕಿಂಗ್ ನ್ಯೂಸ್..!

Share :

Published May 25, 2024 at 7:25am

Update May 25, 2024 at 9:11am

    ಬೆಂಗಳೂರಿನ ಅಮಲಿನ ರೇವ್ ಪಾರ್ಟಿ ಪ್ರಕರಣದ​ ತನಿಖೆ ಚುರುಕು

    ರೇವ್ ಪಾರ್ಟಿ ಸಂಬಂಧ ಫಾರ್ಮ್ ಹೌಸ್ ಮಾಲೀಕನಿಗೆ ನೋಟಿಸ್

    ನಟಿ ಹೇಮಾ ವಿಚಾರದಲ್ಲಿ ಟಾಲಿವುಡ್ ಇಂಡಸ್ಟ್ರಿ ನಿರ್ಧಾರ ಏನು?

ಜನ್ಮದಿನ ಆಚರಣೆ ನೆಪದಲ್ಲಿ ಸನ್‌ಸೆಟ್ ಟು ಸನ್‌ರೈಸ್ ವಿಕ್ಟರಿ ಹೆಸರಿನಲ್ಲಿ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ತನಿಖೆ ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು ಫಾರ್ಮ್ ಹೌಸ್ ಮಾಲೀಕನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣ ಸಂಬಂಧ ಜಿ.ಆರ್. ಫಾರ್ಮ್ ಹೌಸ್‌ ಮಾಲೀಕ ಕಾನ್‌ಕಾರ್ಡ್‌ ರಿಯಲ್ ಎಸ್ಟೇಟ್ ಕಂಪನಿ ಸಂಸ್ಥಾಪಕ ಆರ್.ಗೋಪಾಲ್ ರೆಡ್ಡಿಗೆ ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ:RCB Retention List: ಈ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಆರ್​ಸಿಬಿ ಪ್ಲಾನ್

ಗೋಪಾಲ ರೆಡ್ಡಿಗೆ ನೋಟಿಸ್!

  • ಫಾರ್ಮ್ ಹೌಸ್ ಮಾಲೀಕ ಗೋಪಾಲ ರೆಡ್ಡಿ ವಿಚಾರಣೆ ನಡೆಸಲಿದೆ ಸಿಸಿಬಿ
  • ರೇವ್​ ಪಾರ್ಟಿ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗಲು ಸೂಚನೆ
  • ಇಂದು ಬೆಳಗ್ಗೆ 10 ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ
  • ಇಂದು ವಿಚಾರಣೆಗೆ ಹಾಜರಾಗ್ತಾರಾ ಮಾಲೀಕ ಗೋಪಾಲ ರೆಡ್ಡಿ
  • ಜಾಗ ಯಾವಾಗ ಬುಕ್ ಆಗಿದ್ದು? ಎಷ್ಟು ಜನರ ಬರುವ ಮಾಹಿತಿ ಇತ್ತು?
  • ಡ್ರಗ್ಸ್ ಬಗ್ಗೆ ಮಾಹಿತಿ ಇತ್ತಾ? ಡ್ರಗ್ ತರೋದಕ್ಕೆ ಅವಕಾಶ ಕೊಟ್ಟಿದ್ಯಾಕೆ?
  • ಹಲವು ಪ್ರಶ್ನೆಗಳನ್ನಿಟ್ಟು ವಿಚಾರಣೆ ನಡೆಸಲಿರೋ ಸಿಸಿಬಿ ಅಧಿಕಾರಿಗಳು

ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ರೇವ್ ಪಾರ್ಟಿಯಲ್ಲಿ ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ರು. ಇದರಲ್ಲಿ ಸಾಕಷ್ಟು ಮಂದಿ ಡ್ರಗ್ಸ್ ಸೇವಿಸಿರುವುದು ಬೆಳಕಿಗೆ ಬಂದಿದೆ. ಫಾರ್ಮ್​ ಹೌಸ್​ನಲ್ಲಿದ್ದಾಗಲೇ ವಿಡಿಯೋ ಮಾಡಿ ಸಂಚಲನ ಮೂಡಿಸಿದ್ದ ನಟಿ ಹೇಮಾ ಕೂಡ ಡ್ರಗ್ಸ್ ತೆಗೆದುಕೊಂಡಿರೋದು ಪತ್ತೆಯಾಗಿದೆ. ಇದೀಗ ಹೇಮಾ ಸಿನಿಮಾ ಭವಿಷ್ಯದ ಮೇಲೂ ಕರಿನೆರಳು ಮೂಡಿದೆ.

ಇದನ್ನೂ ಓದಿ:ಆರ್​ಸಿಬಿ ಅಭಿಮಾನಿಗಳಿಗಾಗಿ ಸ್ಪೆಷಲ್ ಪೋಸ್ಟ್​ ಮಾಡಿದ ವಿರಾಟ್ ಕೊಹ್ಲಿ.. ಏನಂದ್ರು..?

ಟಾಲಿವುಡ್ ಇಂಡಸ್ಟ್ರಿಯಿಂದ ಬ್ಯಾನ್ ಆಗ್ತಾರಾ ಹೇಮಾ?
ನಟಿ ಹೇಮಾ ಡ್ರಗ್ಸ್​ ತೆಗೆದುಕೊಂಡಿದ್ದಾರೆ ಎನ್ನಲಾಗಿರೋ ವಿಚಾರ, ಟಾಲಿವುಡ್​ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಈ ನಡುವೆ ಟಾಲಿವುಡ್ ಇಂಡಸ್ಟ್ರಿಯಿಂದ ಹೇಮಾ ಬ್ಯಾನ್ ಆಗ್ತಾರಾ? ಅನ್ನೋ ಚರ್ಚೆಯೂ ಶುರುವಾಗಿದೆ. ಈ ಕುರಿತು ಹೈದರಾಬಾದ್​ನಲ್ಲಿ ಹಿರಿಯ ನಿರ್ಮಾಪಕ ನಟ್ಟಿಕುಮಾರ್ ಸುದ್ದಿಗೋಷ್ಠಿ ನಡೆಸಿ, ತಪ್ಪು ಯಾರೇ ಮಾಡಿದರೂ ಶಿಕ್ಷೆಯಾಗಬೇಕು. ನಿಜವಾಗಿಯೂ ತಪ್ಪು ಮಾಡಿರುವುದು ಸಾಬೀತಾದರೆ ಸಿನಿರಂಗದಿಂದ ಬ್ಯಾನ್ ಮಾಡಬೇಕೆಂದು ನೆಟ್ಟಿಕುಮಾರ್ ಆಗ್ರಹಿಸಿದ್ದಾರೆ. ಇದು ಪರೋಕ್ಷ ಬ್ಯಾನ್ ಎಚ್ಚರಿಕೆ ಅಂತಾ ವೀಶ್ಲೇಷಿಸಲಾಗ್ತಿದೆ.

ಒಟ್ಟಾರೆ, ತೆಲುಗು ನಟಿ ಹೇಮಾ ಡ್ರಗ್ಸ್ ಸೇವಿಸಿರುವುದು ತನಿಖೆ ವೇಳೆ ದೃಢಪಟ್ಟಿದೆ. ಒಂದ್ವೇಳೆ ತಪ್ಪು ಸಾಬೀತಾದ್ರೆ ಸಿನಿರಂಗದಿಂದ ನಟಿ ಹೇಮಾ ಬ್ಯಾನ್ ಆಗ್ತಾರಾ ಎಂಬ ಪ್ರಶ್ನೆ ಶುರುವಾಗಿದೆ, ಇದು ಒಬ್ಬ ನಟಿಗೆ ಮಾತ್ರನಾ? ಅಥವಾ ನಶೆ ಲೋಕದಲ್ಲಿ ತೇಲಾಡಿದ್ದ ಎಲ್ಲಾ ಸಿನಿಮಂದಿಗೂ ಅನ್ವಯಿಸುತ್ತಾ? ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವ್ ಪಾರ್ಟಿಯಿಂದ ನಟಿ ಹೇಮಾ ಭವಿಷ್ಯದ ಮೇಲೆ ಕರಿನೆರಳು.. ಟಾಲಿವುಡ್​​ನಿಂದ ಹೊರಬಿತ್ತು ಶಾಕಿಂಗ್ ನ್ಯೂಸ್..!

https://newsfirstlive.com/wp-content/uploads/2024/05/hema3.jpg

Load More