ನೈಟ್ ಪಾರ್ಟಿಯಲ್ಲಿ ಸಿಕ್ಕ ಚೆಲುವೆ ಜೊತೆ ಶುರುವಾಯ್ತು ಸ್ನೇಹ
ಸೆರ್ಬಿಯಾದ ಚೆಲುವೆ ಜೊತೆಗೆ ಪಾಂಡ್ಯ ಸ್ನೇಹ, ಪ್ರೀತಿ ಇತ್ಯಾದಿ
ಅವನಲ್ಲಿ.. ಇವಳಿಲ್ಲಿ.. ಮಾತಿಲ್ಲ.. ಕತೆಯಿಲ್ಲ? ಇದು ನಿಜವೇ? ಇಲ್ಲಿದೆ ಓದಿ
ಟೀಂ ಇಂಡಿಯಾದ ಕ್ರಿಕೆಟಿ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ನಡುವೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಜೋಡಿ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಪಾಂಡ್ಯ ತನ್ನ ಶೇ70ರಷ್ಟು ಆಸ್ತಿಯನ್ನ ಆಕೆಯ ಹೆಸರಿಗೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಒಂದೆಡೆ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಸುದ್ದಿ ಹರಿದಾಡುತ್ತಿದ್ದರೆ ಮತ್ತೊಂದೆಡೆ ಅಭಿಮಾನಿಗಳೂ ಈ ಜೋಡಿಯ ಮೊದಲ ಭೇಟಿ ಎಲ್ಲಿ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿಂದ? ಎಂಬ ಬಗ್ಗೆ ಹುಡುಕಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ನೈಟ್ಕ್ಲಬ್ನಲ್ಲಿ ಸಿಕ್ಕ ಚೆಲುವೆ
ನತಾಶಾ ಸ್ಟಾಂಕೋವಿಕ್ ಭಾರತದವಳು ಅಲ್ಲ, ಸೆರ್ಬೀಯಾದವಳು. ಹಾರ್ದಿಕ್ ಪಾಂಡ್ಯಕೆ ಆಕೆ 2018ರಲ್ಲಿ ಸಿಕ್ಕಳು. ಮುಂಬೈ ನೈಟ್ಕ್ಲಬ್ನಲ್ಲಿ ಇಬ್ಬರು ಜೊತೆಯಾದರು. ಆ ಬಳಿಕ ಇಬ್ಬರ ನಡುವೆ ಸಂಪರ್ಕ ಹುಟ್ಟಿಕೊಂಡಿತು.
‘ಬೆಸ್ಟ್ ಫ್ರೆಂಡ್’ ಎಂದ ಪಾಂಡ್ಯ
ಪರಿಚಯ ಸ್ನೇಹವಾಗಿ ಹಾರ್ದಿಕ್ ಮತ್ತು ನತಾಶಾ ನಡುವಿನ ಒಡನಾಟ ಜಾಸ್ತಿಯಾಯಿತು. ಮಾತ್ರವಲ್ಲದೆ ಅನೇಕರು ಇವರಿಬ್ಬರ ಓಡಾಟದ ಬಗ್ಗೆ ಅನುಮಾನವು ಹುಟ್ಟುಕೊಂಡಿತು. ಕೊನೆಗೆ 2019ರಲ್ಲಿ ಹಾರ್ದಿಕ್ ತನ್ನ ಇನ್ಸ್ಟಾದಲ್ಲಿ ‘ಬೆಸ್ಟ್ ಫ್ರೆಂಡ್’ ಎಂದು ಕರೆಯುವ ಮೂಲಕ ಇಬ್ಬರ ಸ್ನೇಹವನ್ನು ಎತ್ತಿತೋರಿಸಿದರು.
ಸ್ನೇಹ ಪ್ರೀತಿಯಾಯ್ತು
2020ರಲ್ಲಿ ಹಾರ್ದಿಕ್ ಆಕೆಗೆ ಪ್ರಪೋಸ್ ಮಾಡಬೇಕು ಎಂದು ಬಯಸಿದ್ದರು. ಅದರಂತೆಯೇ ಜನವರಿ 1 ರಂದು ಹಾರ್ದಿಕ್ ಆಕೆಯನ್ನು ಪ್ರಪೋಸ್ ಮಾಡಿದರು. ಬಳಿಕ ಇಬ್ಬರು ನಡುವಿನ ಸ್ನೇಹ ಪ್ರೀತಿಗೆ ತಿರುಗಿರುವ ವಿಚಾರ ಎಲ್ಲೆಡೆ ಹಬ್ಬಿತು.
ಗರ್ಭಿಣಿಯಾದ ನತಾಶಾ
ಬಳಿಕ ಅದೇ ವರ್ಷ ಮೇ ತಿಂಗಳಿನಲ್ಲಿ ನತಾಶಾ ಗರ್ಭಿಣಿಯಾದಳು. ನಂತರ ಈ ಜೋಡಿ ಅಗಸ್ತ್ಯ ಎಂಬ ಮುಂದಾದ ಮಗನನ್ನು ಜುಲೈ ತಿಂಗಳಿನಲ್ಲಿ ಬರಮಾಡಿಕೊಂಡರು. ಮಗನ ಜನನದ ಬಳಿಕ ಹಾರ್ದಿಕ್ ಮತ್ತು ನತಾಶಾ ಇಬ್ಬರು ಸಾಂಪ್ರದಾಯಿಕವಾಗಿ ವಿವಾಹವಾಗಲು ಬಯಸುತ್ತಾರೆ. ಫೆಬ್ರವರಿ 14, 2023ರಂದು ಉಯದಪುರದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುತ್ತಾರೆ. ಕುಟುಂಬ ಮತ್ತು ಸ್ನೇಹಿತರ ಜೊತೆ ಈ ಜೋಡಿ ವಿವಾಹವಾಗುತ್ತಾರೆ.
ಇದನ್ನೂ ಓದಿ: ಡಿವೋರ್ಸ್ ವದಂತಿ ಬೆನ್ನಲ್ಲೇ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ ಹಾರ್ದಿಕ್ ಪತ್ನಿ ನಟಾಶಾ.. ಭಾರೀ ವೈರಲ್
ಆದರೀಗ ಈ ಜೋಡಿ ನಡುವೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಅದಕ್ಲೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಉತ್ತರ ಕ್ರಿಕೆಟಿಗ ಪಾಂಡ್ಯ ಮತ್ತು ಮಾಡೆಲ್ ನತಾಶಾ ಉತ್ತರ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್