ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನಡುವೆ ಬಿರುಕು?
ವಿಚ್ಛೇದನ ವದಂತಿ ನಡುವೆ ಇಷ್ಟು ಕೋಟಿ ನತಾಶಾ ಪಾಲಾಗುತ್ತಾ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಪಾಂಡ್ಯ ಲೈಫ್ ಸ್ಟೋರಿ
ಸದ್ಯ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಇಬ್ಬರದ್ದೇ ಸುದ್ದಿ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಮತ್ತು ಮಡದಿ ನತಾಶಾ ಸದ್ಯ ಬೇರ್ಪಟ್ಟಿದ್ದಾರೆ ಎಂಬುದು ಸದ್ಯದ ವದಂತಿ. ಇದರ ಜೊತೆಗೆ ಈ ಜೋಡಿ ಸದ್ಯದಲ್ಲೇ ವಿಚ್ಛೇದನ ನೀಡಲಿದ್ದಾರೆ ಎನ್ನಲಾಗುತ್ತಿದೆ. ಅದರ ಜೊತೆ ಜೊತೆಗೆ ಪಾಂಡ್ಯ ತನ್ನ ಬಹುಪಾಲು ಆಸ್ತಿಯನ್ನು ಆಕೆಗೆ ನೀಡಲಿದ್ದಾರೆ ಎಂದು ಹರಿದಾಡುತ್ತಿದೆ.
ಹೌದು. ಸೆಲೆಬ್ರಿಟಿ, ಸ್ಟಾರ್ಗಳು ಎಂದ ಮೇಲೆ ಕುಂತರು, ನಿಂತರು ಸುದ್ದಿಯಾಗೋದು ನಿಜ. ಆದರೆ ಇಷ್ಟಪಟ್ಟು ವಿವಾಹವಾದ ಪ್ರೇಯಸಿಯನ್ನೀಗ ಹಾರ್ದಿಕ್ ಪಾಂಡ್ಯ ತೊರೆಯುತ್ತಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ವಿಚಾರವಾಗಿ ಪಾಂಡ್ಯ ಅಥವಾ ನತಾಶಾ ಏನು ಹೇಳಿಕೊಂಡಿಲ್ಲ.
ಇದರ ಜೊತೆ ಜೊತೆಗೆ ಪಾಂಡ್ಯ ಆಸ್ತಿ ಬಗ್ಗೆಯೂ ಪೋಸ್ಟ್ಗಳು ಹರಿದಾಡುತ್ತಿವೆ. ಹಾರ್ದಿಕ್ ಪಾಂಡ್ಯ ತನ್ನ ಶೇ.70ರಷ್ಟು ಆಸ್ತಿಯನ್ನು ಆಕೆಗೆ ನೀಡಬೇಕಾಗುತ್ತದೆ. ಕೋಟಿಗಟ್ಟಲೆ ಆಸ್ತಿಯ ಒಡೆಯನಾದ ಪಾಂಡ್ಯ ನತಾಶಾನಿಗೆ ಕೊಡಬೇಕಾಗುತ್ತದೆ ಎಂದು ವೈರಲ್ ಆಗುತ್ತಿದೆ.
ಪಾಂಡ್ಯ ಎಷ್ಟು ಆಸ್ತಿಯ ಒಡೆಯ?
ಇದಲ್ಲದೆ, ಪಾಂಡ್ಯ ಐಪಿಎಲ್ನಲ್ಲಿ 15 ಕೋಟಿ ಮೊತ್ತವನ್ನು ಪಡೆಯುತ್ತಾರೆ. ಇದಲ್ಲದೆ ವಡೋದರ ಮತ್ತು ಮುಂಬೈನಲ್ಲಿ ಕೋಟಿ ಮೌಲ್ಯದ ಮನೆಯಿದೆ. ಮಾಹಿತಿ ಪ್ರಕಾರ, ಮುಂಬೈನಲ್ಲಿ 30 ಕೋಟಿಗೆ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ವಡೋದರಾದಲ್ಲಿ ಮನೆಯಿದೆಯಂತೆ. ಒಟ್ಟು 91 ಕೋಟಿಯ ಆಸ್ತಿಯ ಒಡೆಯ ಎನ್ನಲಾಗುತ್ತಿದೆ.
ಪಾಂಡ್ಯಗೆ ಏನಾಯ್ತು?
ಇನ್ನು ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಪಾಂಡ್ಯ ಮತ್ತು ನತಾಶಾ ಫೆಬ್ರವರಿ 14ರಂದು ಇನ್ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದಾದ ನಂತರ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಆ ಬಳಿಕ ಪತ್ನಿಯ ಹುಟ್ಟುಹಬ್ಬಕ್ಕೂ ಪಾಂಡ್ಯ ಪೋಸ್ಟ್ ಹಂಚಿಕೊಂಡಿಲ್ಲ ಅನ್ನೋದು ಅಭಿಮಾನಿಗಳಿಗೆ ಕಾಡಿದ ದೊಡ್ಡ ಪ್ರಶ್ನೆ. ಅಲ್ಲಿಂದ ಇವರಿಬ್ಬರ ಕುರಿತು ಅನುಮಾನ ಹುಟ್ಟಿಕೊಂಡಿದೆ. ಅದಕ್ಕೆಲ್ಲಾ ಈ ಸ್ಟಾರ್ ಜೋಡಿಗಳು ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್