ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯ
ಹೈದ್ರಾಬಾದ್ ಅನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿದ ಕೆಕೆಆರ್
ಕಾವ್ಯ ಮಾರನ್ ತಂಡದ ವಿರುದ್ಧ ಶಾರುಖ್ ಟೀಮ್ಗೆ ಗೆಲುವು
ಬಹುನಿರೀಕ್ಷಿತ 2024ರ ಐಪಿಎಲ್ನ ಸೀಸನ್- 17ರ ಫೈನಲ್ ಪಂದ್ಯದಲ್ಲಿ ಹೈದ್ರಾಬಾದ್ ಅನ್ನು ಮಣಿಸುವ ಮೂಲಕ ಕೋಲ್ಕತ್ತಾ ಟ್ರೋಫಿಗೆ ಮುತ್ತಿಕ್ಕಿದೆ. ಈ ಮೂಲಕ 3ನೇ ಬಾರಿಗೆ ಕೆಕೆಆರ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಚೆನ್ನೈನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ 8 ವಿಕೆಟ್ಗಳ ಅಮೋಘ ಗೆಲುವು ಪಡೆದು ಸಂಭ್ರಮದಲ್ಲಿ ತೇಲಾಡಿತು. ಆದರೆ ಫೈನಲ್ ಪಂದ್ಯದ ವೇಳೆ ಬಹುಭಾಷ ನಟ ಸೋನು ಸೂದ್ ಅವರು ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಗೆದ್ದು ಬೀಗಿದೆ. 2012, 2014 ಹಾಗೂ 2024ರಲ್ಲಿ ಕೆಕೆಆರ್ ಚಾಂಪಿಯನ್ ಪಟ್ಟಕ್ಕೇರಿದೆ. ಮ್ಯಾಚ್ ನಡೆಯುತ್ತಿರುವಾಗ ಆ್ಯಕ್ಟರ್ ಸೋನು ಸೂದ್ ಅವರು ಕ್ಯಾಮೆರಾಮ್ಯಾನ್ ಆಗಿ ಕಾಣಿಸಿಕೊಂಡಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಏಕೆಂದರೆ ನಟನೆ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೂನು ಸೂದ್ ಅವರು ಐಪಿಎಲ್ ಫೈನಲ್ನಲ್ಲಿ ಕ್ಯಾಮೆರಾಮ್ಯಾನ್ ಜೊತೆ ಕಾಣಿಸಿಕೊಂಡಿರುವುದು ವಿಶೇಷ ಎನಿಸಿದೆ.
Incase @IPL needs a cameraman…I am available 🎥 😜 All the best @KKRiders and @SunRisers 🏏 pic.twitter.com/TbiFYI62Bc
— sonu sood (@SonuSood) May 26, 2024
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೋನು ಸೂದ್ ಅವರು ಪಂದ್ಯವನ್ನು ಸೆರೆ ಹಿಡಿಯುವ ಕ್ಯಾಮೆರಾಮ್ಯಾನ್ ಬಳಿ ಹೋಗಿದ್ದಾರೆ. ಈ ವೇಳೆ ತಮಾಷೆಗೆಂದು ಕ್ಯಾಮೆರಾಮ್ಯಾನ್ ಬಳಿ ಇದ್ದ ಕ್ಯಾಮೆರಾವನ್ನು ಇಸ್ಕೊಂಡು ವಿಡಿಯೋ ಮಾಡಿದ್ದಾರೆ. ತಮ್ಮ ಭುಜದ ಮೇಲೆ ಕ್ಯಾಮೆರಾ ಇಟ್ಟುಕೊಂಡು ಅಭಿಮಾನಿಗಳ ಕಡೆ ತಿರುಗಿ ವಿಡಿಯೋ ಮಾಡಿ ನೆವೇಲ್ಲ ಟಿವಿಯಲ್ಲಿ ಬರುತ್ತೀರಾ ನೋಡಿ ಎಂದಿದ್ದಾರೆ. ಅಲ್ಲದೇ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಶೇರ್ ಮಾಡಿರುವ ಸೋನು ಸೂದ್, ಐಪಿಎಲ್ಗೆ ಕ್ಯಾಮೆರಾಮ್ಯಾನ್ ಬೇಕಿದ್ರೆ ಹೇಳಿ ನಾನು ರೆಡಿಯಾಗಿದ್ದೇನೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ