ಮಹಿಳೆಯರ ನಿಯಂತ್ರಣಕ್ಕೆ ಅಂಚೆ ಕಚೇರಿಯ ಸಿಬ್ಬಂದಿ ಹೈರಾಣು
ಅಂಚೆ ಕಛೇರಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು
8500 ರೂಪಾಯಿ ನಿರೀಕ್ಷೆಯಲ್ಲಿ ಡಿಜಿಟಲ್ ಖಾತೆಗೆ ಮುಗಿಬಿದ್ದ ಜನ
ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದೊಂದು ಘೋಷಣೆ ಮಾಡಿದ್ರು. ಇಂಡಿಯಾ ಒಕ್ಕೂಟ ಅಧಿಕಾರ ಬಂದ ಕೂಡಲೇ ಕಟಾ ಕಟ್ ಹಣ ನಿಮ್ಮ ಅಕೌಂಟ್ಗೆ ಫಟಾಫಟ್ ಅಂತ ಬಂದು ಬಿಡು ಅಂದಿದ್ರು. ಹೀಗಂದಿದ್ದೇ ಅಂದಿದ್ದು, ನಾರಿಮಣಿಯರು ಆಧಾರ್ ಕಾರ್ಡ್ ಪಾನ್ ಕಾರ್ಡ್ ಹಿಡಿದು ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತಿದ್ದಾರೆ. ಕಟಾ ಕಟ್ ಇದೀಗ ಎಲ್ಲೆಲ್ಲೂ ಕಟಾಕಟ್ದೇ ಹವಾ.
ಇದನ್ನೂ ಓದಿ: ಗೋವಾದಲ್ಲಿ ಟೈಟು, ಎಣ್ಣೆ ಏಟಲ್ಲಿ ಫೈಟು! ಸ್ಯಾಂಡಲ್ವುಡ್ ನಿರ್ಮಾಪಕನ ಮೂಗು ಬಗಿದ ಆರೋಪ
ಅದರಲ್ಲೂ ಬೆಂಗಳೂರಿನ ಪೋಸ್ಟ್ ಆಫೀಸ್ ಮುಂದೆ IPPB ಖಾತೆ ಮಾಡಿಸಿಕೊಳ್ಳಲು ಮಹಿಳೆಯರು ಫಟಾಫಟ್ ಅಂತ ಬಂದು ಕ್ಯೂ ನಿಂತು ಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅದೊಂದು ಮಾತು, ಅದೊಂದು ಘೋಷಣೆ ಅದೊಂದು ಭರವಸೆ ಇವತ್ತು.
ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆದ್ದರೆ ಖಾತೆಗೆ 8500 ರೂಪಾಯಿ ಹಣ ಹಾಕುವ ಘೋಷಣೆಯನ್ನ, ಪ್ರಚಾರದ ವೇಳೆ ರಾಹುಲ್ ಗಾಂಧಿ ಮಾಡಿದ್ರು. ರಾಹುಲ್ ಗಾಂಧಿ ಘೋಷಣೆ ಬೆನ್ನಲ್ಲೆ ಅಲರ್ಟ್ ಆದ ನಾರಿಯರು, ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ. 15 ದಿನದಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಕಟಾ ಕಟ್ ಖಾತೆ ಮಾಡಿಸೋಕೆ ಸರ್ಕಸ್ ಮಾಡ್ತಿದ್ದಾರೆ.
ಇದನ್ನೂ ಓದಿ: ವಿದೇಶದಿಂದ ಬರೋ ಮುನ್ನವೇ ಪ್ರಜ್ವಲ್ ರೇವಣ್ಣ ಮಾಸ್ಟರ್ ಪ್ಲಾನ್.. ಜಾಮೀನಿಗಾಗಿ ಕೋರ್ಟ್ ಮೊರೆ!
ಮಹಿಳೆಯರ ನಿಯಂತ್ರಣಕ್ಕೆ ಅಂಚೆ ಕಚೇರಿಯ ಸಿಬ್ಬಂದಿ ಕೂಡ ಹೈರಾಣಾಗಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಮಹಿಳೆಯರು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಬೆಂಗಳೂರಿನ ಹಲವು ಪೋಸ್ಟ್ ಆಫೀಸ್ಗಳ ಮುಂದೆ ಸರತಿ ಸಾಲಿನಲ್ಲಿ ಮಹಿಳೆಯರು ನಿಲ್ಲುತ್ತಿದ್ದಾರೆ. ಹೀಗಾಗಿ ಮಹಿಳೆಯರ ನಿಯಂತ್ರಣಕ್ಕಾಗಿ ಪೋಸ್ಟ್ ಆಫೀಸ್ ಸಿಬ್ಬಂದಿ ಟೋಕನ್ ವಿತರಣೆ ಮಾಡುತ್ತಿದ್ದಾರೆ.
ಬೆಳಗ್ಗೆ 4 ಗಂಟೆಗೇನೆ ಟೋಕನ್ ವಿತರಣೆ ಕಾರ್ಯ ಆರಂಭವಾಗ್ತಾಯಿದೆ. ಇಂಡಿಯಾ ಕೂಟ ಅಧಿಕಾರಕ್ಕೆ ಬರುತ್ತಿದ್ದಂತೆ 8500 ರೂಪಾಯಿ ನಿಮ್ಮ ಖಾತೆಗೆ ಬರಲಿದೆ. ಇದಕ್ಕಾಗಿ ಡಿಜಿಟಲ್ ಖಾತೆ ಮಾಡಿಸಿಕೊಳ್ಳಿ ಅಂದಿದ್ದೇ ಅಂದಿದ್ದು. ಜನ ಅಲರ್ಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ