ವಿಕೆಟ್ ಕೀಪರ್ ಮೇಲೆ ಸಿಕ್ಸ್ ಬಾರಿಸಿ ಭಾರತವನ್ನ ಗೆಲ್ಲಿಸಿದ ರಿಷಬ್
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ
ಐರ್ಲೆಂಡ್ ವಿರುದ್ಧದ ಮ್ಯಾಚ್ನಲ್ಲಿ ಸಖತ್ ಸಿಕ್ಸ್ ಬಾರಿಸಿದ ಪಂತ್
ನ್ಯೂಯಾರ್ಕ್ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಐಸಿಸಿ ಮೆಗಾ ಟೂರ್ನಿಯ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ರೋಹಿತ್ ಬಾಯ್ಸ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಸದ್ಯ ಇಡೀ ತಂಡದ ಆಕರ್ಷಣೆಯಾಗಿ ಕಂಡು ಬಂದಿರುವುದು ಡೆಲ್ಲಿಯ ಡೇರ್ ಡೆವಿಲ್ ಪ್ಲೇಯರ್ ರಿಷಬ್ ಪಂತ್ ಬ್ಯಾಟಿಂಗ್ ವೈಖರಿ.
ಐರ್ಲೆಂಡ್ ವಿರುದ್ಧ ಸೆಕೆಂಡ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 22 ರನ್ಗೆ ವಿರಾಟ್ ಕೊಹ್ಲಿಯ ವಿಕೆಟ್ ಕಳೆದು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್ಗೆ ಆಗಮಿಸಿದ ರಿಷಬ್ ಪಂತ್ ಅಬ್ಬರದ ಬ್ಯಾಟಿಂಗ್ಗೆ ಮುಂದಾದರು. ಐರ್ಲೆಂಡ್ನ ಬೌಲರ್ ಮೆಕಾರ್ಥಿ ಅವರ 13ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ ಮೇಲೆ ರಿಷಬ್ ಪಂತ್ ಬಾರಿಸಿದ ಸಿಕ್ಸ್ ಎಲ್ಲರ ಮನ ಗೆದ್ದಿದೆ. ಕಾಮೆಂಟ್ರಿ ಮಾಡುತ್ತಿದ್ದ ರಿಕಿ ಪಾಟಿಂಗ್, ಶ್ರೀನಾಥ್ ಅವರು ವಾಟೇ ಫಿನೀಶಿಂಗ್ ಎಂದು ಕೊಂಡಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಿಕ್ಸರ್ ಕುರಿತೇ ಗುಣಗಾನ ಮಾಡಲಾಗುತ್ತಿದೆ.
ಇದನ್ನೂ ಓದಿ: ಸ್ನೇಹಿತನ ಬರ್ತ್ ಡೇ ಪಾರ್ಟಿಯಲ್ಲಿ ಹರಿಯಿತು ನೆತ್ತರು; ಗೆಳೆಯರಿಂದಲೇ ಯುವಕನ ಬರ್ಬರ ಹತ್ಯೆ; ಕಾರಣವೇನು?
Pant getting out on those unorthodox shots is unfortunate but when he gets going, he brings lots of smiles on our faces. Sooo good to watch him at his best.#RishabhPant pic.twitter.com/0ivCxoUkC2
— Cricket💙 (@cricket_is_lub) June 5, 2024
ಟೀಮ್ ಇಂಡಿಯಾಕ್ಕೆ ಗೆಲ್ಲಲು 47 ಎಸೆತದಲ್ಲಿ 6 ರನ್ ಬೇಕಿತ್ತು. ಈ ವೇಳೆ ಕ್ರೀಸ್ನಲ್ಲಿ ರಿಷಬ್ ಪಂತ್ 30 ರನ್ಗಳಿಸಿ ಆಡುತ್ತಿದ್ದರು. ಶಿವಂ ದುಬೆ ಆಗ ತಾನೆ ಬಂದಿದ್ದರು. ಮೆಕಾರ್ಥಿ ಅವರ 13ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ ಮೇಲೆ ರಿವರ್ಸ್ ಸ್ವಿಪ್ನಲ್ಲಿ ರಿಷಬ್ ಪಂತ್ ಹೊಡೆದರು. ಬಾಲ್ ನೇರವಾಗಿ ಬೌಂಡರಿ ಗೆರೆ ದಾಟಿ ಬಿತ್ತು. ಆಗ ಬೌಲರ್ ಏನು ಶಾಟ್ ಇದು ಎನ್ನುವಂತೆ ಆಶ್ಚರ್ಯವಾಗಿ ನಿಂತು ನೋಡಿದ್ದಾರೆ. ಪಂತ್ ಆಕರ್ಷಕ ಸಿಕ್ಸ್ನೊಂದಿಗೆ ಭಾರತವನ್ನು ಗೆಲ್ಲಿಸಿ ಸಂಭ್ರಮಿಸಿದರು. ಐರ್ಲೆಂಡ್ ನೀಡಿದ್ದ 96 ರನ್ಗಳ ಸಾಧರಣ ಗುರಿಯನ್ನು ಭಾರತ 2 ವಿಕೆಟ್ ಕಳೆದುಕೊಂಡು ಟಾರ್ಗೆಟ್ ಮುಟ್ಟಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ