ಮೆಲ್ಬರ್ನ್ ಮೈದಾನದಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ದ ಕೊಹ್ಲಿ
ಗ್ರೇಟೆಸ್ಟ್ ಇನ್ನಿಂಗ್ಸ್ ನಮ್ಮನೆಲ್ಲ ರೋಮಾಂಚನಗೊಳಿಸೋದು ಪಕ್ಕಾ
ಯುವಿ, ಧೋನಿ, ಗಂಭೀರ್ಗಿಂತ ಬಿಗ್ ರೆಕಾರ್ಡ್ ಮಾಡ್ತಾರೆ ಕೊಹ್ಲಿ
ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯುತ್ತದೆ ಎಂದು ನಮಗೆಲ್ಲ ನೆನಪಾಗೋದು ಕಿಂಗ್ ಕೊಹ್ಲಿಯ ಬ್ಯಾಟಿಂಗ್. ಯಾಕಂದ್ರೆ ಬದ್ಧವೈರಿ ವಿರುದ್ಧ ವಿರಾಟ್ ಅಮೋಘವಾದ ಬ್ಯಾಟಿಂಗ್ ಪ್ರದರ್ಶನ ಮಾಡಿ ಅಭಿಮಾನಿಗಳನ್ನ ರಂಜಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ವಿರುದ್ಧ ರನ್ ಮಷಿನ್ ಕಟ್ಟಿದ ಸೂಪರ್ ಇನ್ನಿಂಗ್ಸ್ಗಳನ್ನ ಯಾವೊಬ್ಬ ಕ್ರಿಕೆಟ್ ಪ್ರೇಮಿ ಮರೆಯಲು ಸಾಧ್ಯವಿಲ್ಲ. ಸದ್ಯ ಪಾಕ್ ಜೊತೆಗಿನ ಪಂದ್ಯದಲ್ಲಿ ಕೊಹ್ಲಿಯ ಟ್ರ್ಯಾಕ್ ರೆಕಾರ್ಡ್ ಈ ಕೆಳಗಿನಂತಿದೆ.
ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?
ಟಿ20 ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿ ಕಟ್ಟಿರುವಂತ ಗ್ರೇಟೆಸ್ಟ್ ಇನ್ನಿಂಗ್ಸ್ ಎಲ್ಲರನ್ನು ರೋಮಾಂಚನಗೊಳಿಸುತ್ತದೆ. 2016ರ ಟಿ20 ವಿಶ್ವಕಪ್ನಲ್ಲಿ ಈಡನ್ ಗಾರ್ಡನ್ಸ್ನಲ್ಲಿ ಪಾಕ್ ವಿರುದ್ಧ ಕೊಹ್ಲಿ ವೀರಾವೇಶ ತೋರಿದ್ದರು. 37 ಎಸೆತಗಳಲ್ಲಿ 7 ಬೌಂಡ್ರಿ, 1 ಸಿಕ್ಸರ್ ಸಮೇತ 55 ರನ್ ಗಳಿಸಿ ಪಾಕ್ಗೆ ಸೋಲುಣ್ಣಿಸಿದ್ದರು. ಇದಾದ ಬಳಿಕ 2022ರ ಟಿ20 ವಿಶ್ವಕಪ್ನಲ್ಲಿ ಭಾರತ ಸೋಲಿನ ಸುಳಿಯಲ್ಲಿತ್ತು. ಮೆಲ್ಬರ್ನ್ ಮೈದಾನದಲ್ಲಿ ಸಿಡಿದೆದ್ದ ಕೊಹ್ಲಿ ಗೆಲುವಿಗಾಗಿ ಟೊಂಕಕಟ್ಟಿ ಹೋರಾಡಿದ್ದರು. 53 ಎಸೆತಗಳಲ್ಲಿ ಸ್ಫೋಟಕ 82 ರನ್ ಚಚ್ಚಿ ಅಜೇಯರಾಗಿ ಉಳಿದು, ಭಾರತಕ್ಕೆ ರೋಚಕ ಗೆಲುವು ತಂದಿದ್ದರು.
ಇದನ್ನೂ ಓದಿ: T20 World Cup; ಉಗ್ರರ ಬೆದರಿಕೆ.. ಇಂಡಿಯಾ- ಪಾಕ್ ಮ್ಯಾಚ್ ನಡೆಯೋದೆ ಡೌಟ್!
ವಿರಾಟ್ ಕೊಹ್ಲಿ ಇಲ್ಲಿವರೆಗೆ ಪಾಕ್ ವಿರುದ್ಧ ಟಿ20 ವಿಶ್ವಕಪ್ನಲ್ಲಿ 10 ಮ್ಯಾಚ್ಗಳನ್ನು ಆಡಿದ್ದು 482 ರನ್ಗಳನ್ನು ಗಳಿಸಿದ್ದಾರೆ. ಈ ರನ್ಸ್ ಇಡೀ ಭಾರತದ ಆಟಗಾರರ ಪೈಕಿ ಅತಿ ಹೆಚ್ಚು ರನ್ ಆಗಿದೆ. ಭಾರತದ ಜೊತೆ ಆಡಿರುವ ಯಾವೋಬ್ಬ ಪಾಕ್ ಪ್ಲೇಯರ್ ಕೂಡ ಇಷ್ಟೊಂದು ರನ್ಸ್ ಹೊಡೆದಿಲ್ಲ. ಪಾಕಿಸ್ತಾನ ಜೊತೆಗಿನ ಪಂದ್ಯವೆಂದರೆ ಎದೆಯುಬ್ಬಿಸಿ ಆಡುವ ವಿರಾಟ್ ರನ್ಗಳ ಕೋಟೆಯನ್ನು ಕಟ್ಟುತ್ತಾರೆ. 10 ಪಂದ್ಯಗಳಲ್ಲಿ 482 ರನ್ ಗಳಿಸಿರುವ ವಿರಾಟ್ 81.33 ಸರಾಸರಿ ಹೊಂದಿದ್ದು 123.85 ಸ್ಟ್ರೈಕ್ರೇಟ್ ಹೊಂದಿದ್ದಾರೆ. ಇನ್ನು 82 ರನ್ಗಳನ್ನು ಗಳಿಸಿರುವುದು ಪಾಕ್ ವಿರುದ್ಧದ ವೈಯಕ್ತಿಕ ಹೆಚ್ಚು ರನ್ ಆಗಿದೆ.
ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಇನ್ನೂ 18 ರನ್ ಗಳಿಸಿದರೆ ಒಟ್ಟು 500 ರನ್ ಗಳಿಸಿದ ಏಕೈಕ ಭಾರತೀಯ ಆಟಗಾರ ಆಗುತ್ತಾರೆ. ಉಳಿದಂತೆ ಯುವರಾಜ್ ಸಿಂಗ್ 155, ಗೌತಮ್ ಗಂಭೀರ್ 139, ಧೋನಿ 93, ರೋಹಿತ್ ಶರ್ಮಾ 114 ರನ್ಗಳನ್ನು ಮಾತ್ರ ಗಳಿಸಿದ್ದಾರೆ. ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ