ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ
ಮೆಗಾ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ, ಟೀಮ್ ಇಂಡಿಯಾ ಜಿದ್ದಾಜಿದ್ದಿ!
ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು ಹೇಳಿದ್ದೇನು?
ಟೀಮ್ ಇಂಡಿಯಾ, ಪಾಕಿಸ್ತಾನದ ನಡುವಿನ ಟಿ20 ವಿಶ್ವಕಪ್ ಮೆಗಾ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ನಸೌ ಕೌಂಟಿ ಇಂಟರ್ ನ್ಯಾಷನಲ್ ಕ್ರೀಡಂಗಣದಲ್ಲಿ ನಡೆಯಲಿರೋ ಈ ರೋಚಕ ಪಂದ್ಯ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲೂ ಎಲ್ಲರ ಕಣ್ಣು ಕ್ರಿಕೆಟ್ ದಿಗ್ಗಜ ಕೊಹ್ಲಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು ಕೊಹ್ಲಿ ಬಗ್ಗೆ ಮಾತಾಡಿದ್ದಾರೆ.
ಎಲ್ಲರ ಹಾಗೇ ನಾನು ಪಾಕ್, ಭಾರತದ ನಡುವಿನ ಪಂದ್ಯ ನೋಡಲು ಕಾಯುತ್ತಿದ್ದೇನೆ. ಐರ್ಲೆಂಡ್ ವಿರುದ್ಧ ಗೆದ್ದಿರೋ ಭಾರತ ಪಾಕ್ ತಂಡದ ವಿರುದ್ಧ ಕೂಡ ಗೆಲ್ಲಲಿದೆ. ಇಂದಿನ ಪಂದ್ಯದಲ್ಲಿ ನನ್ನ ನೆಚ್ಚಿನ ಆಟಗಾರ ಕೊಹ್ಲಿ. ಇಡೀ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪಾಕ್ ವಿರುದ್ಧ ಕೊಹ್ಲಿ ಅಜೇಯರಾಗಿ 82 ರನ್ ಗಳಿಸಿದ್ದು ಬೆಸ್ಟ್ ಇನ್ನಿಂಗ್ಸ್ ಎಂದರು.
ಈ ಹಿಂದೆ ಹೈದರಾಬಾದ್ ವಿರುದ್ಧ ಕೆಕೆಆರ್ ಫೈನಲ್ ಪಂದ್ಯದಲ್ಲಿ ಗೆದ್ದ ಕೂಡಲೇ ಮಾತಾಡಿದ್ದ ಅಂಬಾಟಿ ರಾಯುಡು, ಶ್ರೇಯಸ್ ಅಯ್ಯರ್ಗೆ ಅಭಿನಂದನೆಗಳು. ಆರೆಂಜ್ ಕ್ಯಾಪ್ ಗೆಲ್ಲೋದು ವೈಯಕ್ತಿಕ. ಯಾವಾಗಲೂ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದರೆ ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್ ಟ್ರೋಫಿ ತಂಡದ ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದು ಹೀಯಾಳಿಸಿದ್ದರು. ಈ ಬಗ್ಗೆ ಮಾತಾಡಿರೋ ಅಂಬಾಟಿ ರಾಯುಡು ವಿರುದ್ಧ ಕಿಡಿಕಾರಿದ್ದರು.
ಇದನ್ನೂ ಓದಿ: ಭಾರತ, ಪಾಕ್ ಪಂದ್ಯ.. ಸಂಜು ಸ್ಯಾಮ್ಸನ್ಗೆ ದೊಡ್ಡ ಆಘಾತ; ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ