2024ರ ಟಿ20 ವಿಶ್ವಕಪ್ನಲ್ಲೇ ಟೀಮ್ ಇಂಡಿಯಾ ಹೊಸ ಇತಿಹಾಸ
ಪಾಕ್ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ತಂಡ
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ 6 ರನ್ಗಳ ಜಯ!
ಇಂದು ನ್ಯೂಯಾರ್ಕ್ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ.
ಟೀಮ್ ಇಂಡಿಯಾ ನೀಡಿದ 119 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ. ಈ ಮೂಲಕ 6 ರನ್ನಿಂದ ಹೀನಾಯ ಸೋಲು ಕಂಡಿದೆ. ಪಾಕ್ ಪರ ಮೊಹಮ್ಮದ್ ರಿಜ್ವಾನ್ 31, ಬಾಬರ್ 13, ಉಸ್ಮನ್ ಖಾನ್ 13, ಫಕರ್ ಜಮಾನ್ 13, ಇಮದ್ ವಾಸೀಮ್ 15 ರನ್ ಗಳಿಸಿದ್ರು.
ಇನ್ನು, ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ 12 ಬಾಲ್ನಲ್ಲಿ 13 ರನ್ ಗಳಿಸಿ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟರು. ವಿರಾಟ್ ಕೊಹ್ಲಿ ಕೂಡ 3 ಬಾಲ್ನಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಹಾಗಾಗಿ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಆಗಿತ್ತು.
ಕೊಹ್ಲಿ, ರೋಹಿತ್ ಔಟಾದ್ರೂ ಪಂತ್ ಮಾತ್ರ ತನ್ನ ಲಕ್ನಿಂದಲೇ ಬಚಾವ್ ಆಗಿದ್ದಾರೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಾರಿ ಪಂತ್ ಕ್ಯಾಚ್ ಅನ್ನು ಪಾಕ್ ಆಟಗಾರರು ಕೈ ಚೆಲ್ಲಿದ್ರು. ಹಾಗಾಗಿ ಕೊನೆವರೆಗೂ ಕ್ರೀಸ್ನಲ್ಲೇ ನಿಂತು ಬ್ಯಾಟ್ ಬೀಸಿದ ಪಂತ್ 31 ಬಾಲ್ಗೆ 42 ರನ್ ಚಚ್ಚಿದ್ರು. ಬರೋಬ್ಬರಿ 6 ರನ್ ಬಾರಿಸಿದ್ರು. ಇವರಿಗೆ ಸಾಥ್ ನೀಡಿದ್ದ ಅಕ್ಷರ್ ಪಟೇಲ್ 1 ಸಿಕ್ಸರ್, 2 ಫೋರ್ ಸಮೇತ 20 ರನ್ ಸಿಡಿಸಿದ್ರು. ಟೀಮ್ ಇಂಡಿಯಾ 19 ಓವರ್ಗೆ 119 ರನ್ಗೆ ಆಲೌಟ್ ಆಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ