ಪತ್ನಿಗೆ ಡಿವೋರ್ಸ್ ನೀಡಲು ಮುಂದಾದ ದೊಡ್ಮನೆ ಕುಡಿ
ಕೋರ್ಟ್ ಮೆಟ್ಟಿಲೇರಿದ ಯುವ? ಅಷ್ಟಕ್ಕೂ ಇಬ್ಬರ ಬಾಳಲ್ಲಿ ಏನಾಯ್ತು?
ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ?
ಸ್ಯಾಂಡಲ್ವುಡ್ ನಟ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ. ಇದೇ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೀಗ ದೊಡ್ಮನೆ ಅಭಿಮಾನಿಗಳಿಗೆ ಈ ಸುದ್ದಿ ಸಿಡಿಲಾಘಾತವಾಗಿದೆ.
ಏಳು ವರ್ಷಗಳ ಕಾಲ ಪ್ರೀತಿಸಿ ವಿವಾಹವಾದ ಜೋಡಿ ಇದೀಗ ದೂರ ದೂರವಾಗುತ್ತಿದ್ದಾರಂತೆ. ಯುವ ರಾಜ್ಕುಮಾರ್ ಡಿವೋರ್ಸ್ ನೀಡಲು ಮುಂದಾಗಿದ್ದು, ಪತ್ನಿಯನ್ನು ತೊರೆಯಲು ನಿರ್ಧರಿಸಿದ್ದಾರಂತೆ. ಮಾಹಿತಿ ಪ್ರಕಾರ ಯುವ ಕೋರ್ಟ್ ಮೆಟ್ಟಿಲೇರಿದ್ದು, ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಅತ್ತ ಶ್ರೀದೇವಿ ದೊಡ್ಮನೆಯಲ್ಲೂ ಇಲ್ಲ, ತವರು ಮನೆಯಾದ ಮೈಸೂರಲ್ಲೂ ಇಲ್ಲ ಸಂಗತಿ ಹೊರಬಿದ್ದಿದೆ. ಮಾಹಿತಿ ಪ್ರಕಾರ ವಿದೇಶದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 7 ವರ್ಷದ ಪ್ರೀತಿ.. ಇಷ್ಟಪಟ್ಟು ಮದುವೆಯಾದ ಜೋಡಿ ದೂರ ದೂರ.. ಯುವ-ಶ್ರೀದೇವಿ ನಡುವೆ ಆಗಿದ್ದೇನು?
ಪ್ರೀತಿಸಿ ವಿವಾಹವಾದ ಜೋಡಿ
ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಪ್ರೀತಿಸಿ ವಿವಾಹವಾದ ಜೋಡಿ. ಆದರೀಗ ಈ ಜೋಡಿನ ನಡುವೆ ಡಿವೋರ್ಸ್ ಎಂಬ ಪದ ಬಂದಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಆದರೆ ಇದೀಗ ಸ್ಯಾಂಡಲ್ವುಡ್ ಸುತ್ತ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಲಿ ಎಂಬುದು ಅಭಿಮಾನಿಗಳ ಆಸೆ.
ಇದನ್ನೂ ಓದಿ: ಯುವ ರಾಜ್ಕುಮಾರ್ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು?
ಹುಟ್ಟೂರು ಮೈಸೂರು
ಮೂಲತಃ ಮೈಸೂರಿನ ಹುಡುಗಿ ಶ್ರೀದೇವಿ ಭೆರಪ್ಪ. ಅಲ್ಲೇ ಹುಟ್ಟಿ ಅಲ್ಲೇ ಬೆಳೆದು ಉನ್ನತ ಶಿಕ್ಷಣ ಮುಗಿಸಿದರು.
2019ರಲ್ಲಿ ಮದುವೆ 2024ರಲ್ಲಿ ಡಿವೋರ್ಸ್?
2019ರಲ್ಲಿ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ವಿವಾಹವಾಗುತ್ತಾರೆ. ಬಳಿಕ ರಾಜ್ ಫ್ಯಾಮಿಲಿ ಸೇರುತ್ತಾರೆ. ಅಂದಹಾಗೆಯೇ ಶ್ರೀದೇವಿ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೀಗ ಈ ಜೋಡಿ ನಡುವೆ ಮನಸ್ತಾಪವಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ