ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್
2 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿರೋ ಟೀಮ್ ಇಂಡಿಯಾ!
ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಪರ ಕೊಹ್ಲಿ ಕಳಪೆ ಆಟ
ಸದ್ಯ ನಡೆಯುತ್ತಿರೋ ಬಹುನಿರೀಕ್ಷಿತ ಟಿ20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ 2 ಪಂದ್ಯ ಗೆದ್ದು ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. 2 ಪಂದ್ಯಗಳ ಗೆಲುವಿನ ಜತೆ 4 ಪಾಯಿಂಟ್ಸ್ ಪಡೆದ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಇನ್ನು, ಐರ್ಲೆಂಡ್ ಮತ್ತು ಪಾಕ್ ವಿರುದ್ಧ ಎರಡು ಪಂದ್ಯಗಳಲ್ಲೂ ಟೀಮ್ ಇಂಡಿಯಾದ ಪರ ಹಲವು ಆಟಗಾರರು ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಈ ಪೈಕಿ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಕೂಡ ಒಬ್ಬರು. ಕೊಹ್ಲಿ ಐರ್ಲೆಂಡ್ ವಿರುದ್ಧ ಕೇವಲ 1 ರನ್ಗೆ ಔಟಾಗಿದ್ರು. ಬಳಿಕ ಪಾಕ್ ವಿರುದ್ಧ 4 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಈಗ ಕೊಹ್ಲಿ ವಿರುದ್ಧ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಅಂಬಾಟಿ ರಾಯುಡು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.
ಈ ಸಂಬಂಧ ಮಾತಾಡಿದ ಅಂಬಾಟಿ ರಾಯುಡು, ಇದು ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲ. ಬದಲಿಗೆ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್. ಐಪಿಎಲ್ನಲ್ಲಿ ಆಡಿದ ಹಾಗೇ ಆಡಿದ್ರೆ ಸೋಲು ಗ್ಯಾರಂಟಿ. ಟೀಮ್ ಇಂಡಿಯಾದ ಬ್ಯಾಟರ್ಗಳು ಐಪಿಎಲ್ ಎಂದು ಭಾವಿಸಿ ಬ್ಯಾಟ್ ಬೀಸುತ್ತಿದ್ದಾರೆ. ಐಪಿಎಲ್ನಲ್ಲಿ ಹೆಚ್ಚು ರನ್ ಗಳಿಸೋದಲ್ಲ, ಟಿ20 ವಿಶ್ವಕಪ್ನಲ್ಲಿ ಆಡಬೇಕು ಎಂದು ಕೊಹ್ಲಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸೋಲನ್ನು ಸಹಿಸಿಕೊಳ್ಳದ ಪಾಕಿಸ್ತಾನಿಯರು.. ಭಾರತದ ರಾಷ್ಟ್ರಗೀತೆಗೆ ಅವಮಾನ ಮಾಡಿದ ಪಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ